ಉಕ್ರೇನ್‌ಗೆ ಮತ್ತೆ ಮೇಲುಗೈ; ಅದರತ್ತ ಒಂದು ನೋಟ ಇಲ್ಲಿದೆ…


Team Udayavani, Nov 12, 2022, 7:50 AM IST

ಉಕ್ರೇನ್‌ಗೆ ಮತ್ತೆ ಮೇಲುಗೈ; ಅದರತ್ತ ಒಂದು ನೋಟ ಇಲ್ಲಿದೆ…

ಉಕ್ರೇನ್‌ ವಿರುದ್ಧ ರಷ್ಯಾ ದಾಳಿ ನಡೆಸಲು ಆರಂಭವಾಗಿ ಒಂದು ವರ್ಷ ಸಮೀಪಿಸುತ್ತಿದೆ. ಕೆಲವೊಮ್ಮೆ ಉಕ್ರೇನ್‌, ಇನ್ನೊಮ್ಮೆ ರಷ್ಯಾದ ಪಡೆಗಳು ಮೇಲುಗೈ ಸಾಧಿಸಿದ ಬಗ್ಗೆ ವರದಿಗಳು ಪ್ರಕಟವಾಗುತ್ತವೆ. ಲಕ್ಷಾಂತರ ಮಂದಿ ಅಸುನೀಗಿದ್ದಾರೆ. ಈ ಬಗ್ಗೆ ಖಚಿತ ವರ್ತಮಾನವಂತೂ ಇಲ್ಲ. ಇತ್ತೀಚಿನ ಬೆಳವಣಿಗೆ ಏನೆಂದರೆ ಖೇರ್ಸಾನ್‌ ಪ್ರಾಂತದಲ್ಲಿ ರಷ್ಯಾ ವಿರುದ್ಧ ಉಕ್ರೇನ್‌ ಪಡೆ ಮೇಲುಗೈ ಸಾಧಿಸಿದೆ. ಅದರತ್ತ ಒಂದು ನೋಟ ಇಲ್ಲಿದೆ…

ಖೇರ್ಸಾನ್‌ನ ಪ್ರಾಮುಖ್ಯ ಏನು?
ಉಕ್ರೇನ್‌ನ ದಕ್ಷಿಣ ಭಾಗದಲ್ಲಿ ಇರುವ ಪ್ರಮುಖ ನಗರವೇ ಖೇರ್ಸಾನ್‌. ಯುದ್ಧ ಆರಂಭವಾಗುವ ಮುನ್ನ 3,80,000 ಮಂದಿ ಅಲ್ಲಿ ವಾಸಿಸುತ್ತಿದ್ದರು. ರಷ್ಯಾ ಸೇನೆ ವಶಪಡಿಸಿಕೊಂಡಿರುವ ಕ್ರಿಮಿಯಾ ಎಂಬ ಪ್ಯಾಂತವನ್ನು ಪ್ರವೇಶಿಸಲು ಇದು ಅತ್ಯಂತ ಪ್ರಮುಖವಾದ ಪ್ರದೇಶವಾಗಿದೆ. ಕ್ರಿಮಿಯಾದಲ್ಲಿ ರಷ್ಯಾ ಪ್ರಮುಖ ಸೇನಾ ನೆಲೆಗಳನ್ನು ಹೊಂದಿದೆ. ಡಿನಿಪ್ರೋ ನದಿ ಖೇರ್ಸಾನ್‌ ಪ್ರದೇಶವನ್ನು ಭಾಗ ಮಾಡಿಕೊಂಡು ಹರಿಯುತ್ತಿದೆ. ಹೀಗಾಗಿ ರಷ್ಯಾ ವಿರುದ್ಧ ಮೇಲುಗೈ ಸಾಧಿಸಲು ಉಕ್ರೇನ್‌ಗೆ ಇದು ನೆರವಾಗಿದೆ. ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರಿಗೆ ಈ ಪ್ರದೇಶದಲ್ಲಿ ಜಯ ಗಳಿಸಿದರೆ ರಷ್ಯಾ ಪಡೆಗಳ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನೈತಿಕ ಧೈರ್ಯ ಬರುತ್ತದೆ. ಇದಲ್ಲದೆ ಪಾಶ್ಚಾತ್ಯ ಭಾಗದ ಕೆಲವು ರಾಷ್ಟ್ರಗಳು ಉಕ್ರೇನ್‌ನ ಈ ಭಾಗವನ್ನು ರಷ್ಯಾಕ್ಕೆ ಬಿಟ್ಟುಕೊಟ್ಟು ಸಂಧಾನಕ್ಕೆ ಬರುವಂತೆ ಕೂಡ ಸಲಹೆ ಮಾಡಿವೆ.

ಈಗಿನ ಸ್ಥಿತಿ ಏನು?
ಶುಕ್ರವಾರದ ಮಧ್ಯಾಹ್ನದ ವರೆಗಿನ ಪರಿಸ್ಥಿತಿಯ ಪ್ರಕಾರ ಉಕ್ರೇನ್‌ ಸೇನೆ ಖೇರ್ಸಾನ್‌ನ ಪ್ರಮುಖ ಪ್ರದೇಶದತ್ತ ಪ್ರವೇಶ ಮಾಡುವಷ್ಟು ಶಕ್ತಿಯನ್ನು ಗಳಿಸಿಕೊಂಡಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ಲೋಡ್‌ ಆಗಿರುವ ಮಾಹಿತಿ ಮತ್ತು ಫೋಟೋಗಳ ಪ್ರಕಾರ ಝೆಲೆನ್‌ಸ್ಕಿ ಅವರ ಪಡೆಗಳು ಸ್ಥಳವನ್ನು ಮರು ವಶ ಮಾಡಿಕೊಂಡಿವೆ.

ಸೇನೆ ವಾಪಸಾತಿ ಪೂರ್ಣ
ಈ ಎಲ್ಲ ಬೆಳವಣಿಗೆಗಳಿಗೆ ಪೂರಕವಾಗಿ ರಷ್ಯಾದಲ್ಲಿ ರಕ್ಷಣ ಸಚಿವಾಲಯ ಹೇಳಿಕೊಂಡಿರುವಂತೆ ಖೇರ್ಸಾನ್‌ನಿಂದ ಪಡೆಗಳ ವಾಪ ಸಾತಿ ಕೂಡ ಪೂರ್ಣಗೊಂಡಿದೆ. ಉಕ್ರೇನ್‌ಗೆ ಹೊಂದಿಕೊಂಡಂತೆ ಇರುವ ಡಿನಿಪ್ರೋ ನದಿಯ ಪಶ್ಚಿಮ ದಂಡೆಯಿಂದ ಸೈನಿಕರನ್ನು ವಾಪಸ್‌ ಕರೆಯಿಸಿಕೊಳ್ಳಲಾಗಿದೆ.

12 ಇಷ್ಟು ಗ್ರಾಮಗಳು, ಪಟ್ಟಣಗಳು ಖೇರ್ಸಾನ್‌ ಭಾಗದಲ್ಲಿ ಇವೆ. ಅವು ಈಗ ಉಕ್ರೇನ್‌ನ ವಶ ಆಗಿವೆ.

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.