ಇಸ್ಲಾಮಿಕ್ ಧಾರ್ಮಿಕ ಸಂಸ್ಥೆಯಲ್ಲಿ ಸಂಸ್ಕೃತ ಪಾಠ
ತ್ರಿಶ್ಶೂರ್‌ನಲ್ಲೊಂದು ವಿಶೇಷ ಸಂಸ್ಥೆ; ಪುರಾಣ, ಉಪನಿಷತ್ ಬೋಧನೆ
Team Udayavani, Nov 14, 2022, 7:20 AM IST
ತ್ರಿಶ್ಶೂರ್:”ಗುರು ಬ್ರಹ್ಮಾ, ಗುರುರ್‌ವಿಷ್ಣು, ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಮ್ ಬ್ರಹ್ಮ ತಸೆ¾„ಶ್ರೀ ಗುರವೇ ನಮಃ’ ಈ ಮಂತ್ರ ಮಠ ಅಥವಾ ದೇಗುಲದ ಆವರಣದಿಂದ ಕೇಳುತ್ತಿದ್ದರೆ ಅದು ಅಚ್ಚರಿ ಅಲ್ಲ. ಆದರೆ, ಕೇರಳದ ತ್ರಿಶ್ಶೂರ್‌ನಲ್ಲಿ ಮುಸ್ಲಿಂ ಧಾರ್ಮಿಕ ಸಂಸ್ಥೆಯೊಂದರಲ್ಲಿ ಇಂಥ ಶ್ಲೋಕ ಪಠಣ ಕೇಳಿ ಬಂದರೆ?
ಇದೆಲ್ಲ ನಡೆಯುತ್ತಿವುದು ತ್ರಿಶ್ಶೂರ್‌ನ ಅಕಾಡೆಮಿ ಆಫ್ ಶರಿಯಾ ಆ್ಯಂಡ್ ಅಡ್ವಾನ್ಸ್$x ಸ್ಟಡೀಸ್ (ಎಎಸ್‌ಎಎಸ್)ನ ಕ್ಯಾಂಪಸ್‌ನಲ್ಲಿ. ಇಲ್ಲಿ ವಿದ್ಯಾರ್ಥಿಗಳು ಮತ್ತು ಗುರುಗಳ ನಡುವಿನ ಸಂಭಾಷಣೆಯೂ ಸಂಸ್ಕೃತದಲ್ಲಿಯೇ ನಡೆಯುತ್ತದೆ. ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ಸರಿಯಾದ ಉತ್ತರ ನೀಡಿದರೆ ಪ್ರಾಧ್ಯಾಪಕರು “ಉತ್ತಮಮ್’ (ಒಳ್ಳೆಯದಾಗಿದೆ) ಎಂಬ ಶ್ಲಾಘನೆಯನ್ನು ವ್ಯಕ್ತಪಡಿಸುತ್ತಾರೆ.
ಸಂಸ್ಕೃತ, ಪುರಾಣ, ಉಪನಿಷತ್ ಕಲಿಸಲು ಆರಂಭಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸ್ಥೆಯ ಪ್ರಾಂಶುಪಾಲ ಓನಾಂಪಿಲ್ಲಿ ಮುಹಮ್ಮದ್ ಫೈಝಿ “ವಿದ್ಯಾರ್ಥಿಗಳಿಗೆ ಇತರ ಧರ್ಮಗಳ ಬಗ್ಗೆ ಜ್ಞಾನ ಮತ್ತು ಅರಿವು ಉಂಟು ಮಾಡುವ ನಿಟ್ಟಿನಲ್ಲಿ ಇಂಥ ಕ್ರಮ ಆರಂಭಿಸಲಾಗಿದೆ’ ಎಂದರು. ಫೈಝಿ ಅವರು ಶಂಕರ ತತ್ವವನ್ನು ಓದಿ, ಅಧ್ಯಯನ ಮಾಡಿದ್ದಾರೆ. 8 ವರ್ಷಗಳ ವ್ಯಾಸಂಗದ ಅವಧಿಯಲ್ಲಿ ಸಂಸ್ಕೃತದ ಬಗ್ಗೆ ಆಳವಾದ ಅಧ್ಯಯನ ಕಷ್ಟ. ಆದರೂ ಪ್ರಾಥಮಿಕ ಜ್ಞಾನ ವಿದ್ಯಾರ್ಥಿಗಳಿಗೆ ಇರಲಿ ಎಂಬುದು ನಮ್ಮ ಉದ್ದೇಶ ಎಂದೂ ಅವರು ಹೇಳಿದ್ದಾರೆ.
ಭಗವದ್ಗೀತೆ, ಉಪನಿಷತ್, ಮಹಾಭಾರತ, ರಾಮಾಯಣದ ಕೆಲವು ಭಾಗಗಳನ್ನೂ ಇಲ್ಲಿ ಕಲಿಸಲಾಗುತ್ತದೆ. ಆರಂಭದಲ್ಲಿ ನಮಗೆ ಅರೇಬಿಕ್ ರೀತಿಯೇ ಸಂಸ್ಕೃತವೂ ಕಷ್ಟ ಎನಿಸಿತ್ತು. ನಿರಂತರ ಕಲಿಕೆಯ ಬಳಿಕ ಈಗ ಎರಡೂ ಭಾಷೆಯನ್ನು ಸುಲಭವಾಗಿ ಮಾತಾಡುತ್ತಿದ್ದೇವೆ ಎಂದಿದ್ದಾರೆ ವಿದ್ಯಾರ್ಥಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.