ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಮತ್ತೆ ಅಗ್ರಸ್ಥಾನಿ; ಮುಂಬಾಗೆ 8ನೇ ಜಯ
Team Udayavani, Nov 13, 2022, 10:50 PM IST
ಪುಣೆ: ಸಂಘಟಿತ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ರವಿವಾರದ ಪ್ರೊ ಕಬಡ್ಡಿ ಮುಖಾಮುಖಿಯಲ್ಲಿ ತಮಿಳ್ ತಲೈವಾಸ್ ವಿರುದ್ಧ 40-34 ಅಂತರದ ರೋಚಕ ಜಯ ದಾಖಲಿಸಿತು. ಒಟ್ಟು 8 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಅಲಂಕರಿಸಿತು.
ಬುಲ್ಸ್ ಮೇಲುಗೈಯಲ್ಲಿ ರೈಡರ್ ಭರತ್ ಮಹತ್ವದ ಪಾತ್ರ ವಹಿಸಿದರು. ಅವರ ಕೊಡುಗೆ 14 ಅಂಕ. ಮತ್ತೋರ್ವ ರೈಡರ್ ನೀರಜ್ ನರ್ವಾಲ್ ಕೂಡ ಉತ್ತಮ ಪ್ರದರ್ಶನವಿತ್ತು 6 ಅಂಕ ಗಳಿಸಿದರು. ಡಿಫೆಂಡರ್ ಸೌರಭ್ ನಂದಲ್ 5 ಅಂಕ ತಂದಿತ್ತರು. ಆರಂಭದಲ್ಲಿ ಮೇಲುಗೈ ಹೊಂದಿದ್ದ ಬುಲ್ಸ್ ಬಳಿಕ ತುಸು ಮಂಕಾಯಿತು. ಆದರೆ ದ್ವಿತೀಯಾರ್ಧದಲ್ಲಿ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಯಿತು. ತಮಿಳ್ ಪರ ರೈಡರ್ ನರೇಂದರ್ ಸರ್ವಾಧಿಕ 10 ಅಂಕ ಗಳಿಸಿದರು.
ಮುಂಬಾಗೆ 8ನೇ ಜಯ
ಮೊದಲ ಪಂದ್ಯದಲ್ಲಿ ಯು ಮುಂಬಾ 36-23 ಅಂಕಗಳ ಅಂತರದಿಂದ ಪಾಟ್ನಾ ಪೈರೇಟ್ಸ್‌ಗೆ ಸೋಲುಣಿಸಿತು. ಇದು 13 ಪಂದ್ಯಗಳಲ್ಲಿ ಮುಂಬಾಗೆ ಒಲಿದ 8ನೇ ಗೆಲುವು. ಪಾಟ್ನಾ ಇಷ್ಟೇ ಪಂದ್ಯಗಳಲ್ಲಿ ಅನುಭವಿಸಿದ 5ನೇ ಸೋಲು.
ಮುಂಬಾ ಜಯದಲ್ಲಿ ಮಿಂಚಿದವರು ರೈಡರ್ ಗುಮಾನ್ ಸಿಂಗ್ (13 ಅಂಕ). ಮತ್ತೋರ್ವ ರೈಡರ್ ಆಶಿಷ್ 6 ಅಂಕ ಗಳಿಸಿದರು.
ಪಾಟ್ನಾ ತಂಡದಲ್ಲಿ ಆಲ್‌ರೌಂಡರ್ ರೋಹಿತ್ ಗುಲಿಯಾ (7 ಅಂಕ), ರೈಡರ್ ಸಚಿನ್ (5 ಅಂಕ) ಆಟವಷ್ಟೇ ಗಮನಾರ್ಹ ಮಟ್ಟದಲ್ಲಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.