![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 14, 2022, 8:39 AM IST
ಮೇಷ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಮನೋರಂಜನೆ ಪ್ರದೇಶದಲ್ಲಿ ಆಹಾರ ಸೇವನೆಯಲ್ಲಿ ಮುಂಜಾಗ್ರತೆ ಅಗತ್ಯ ಬೇಕು. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಒತ್ತಡ. ಸಮಾಧಾನಕರ ಪರಿಸ್ಥಿತಿ. ಸಹೋದರ ಸಮಾನರಿಂದ ಸಹಕಾರ ಲಭ್ಯ.
ವೃಷಭ: ಗೃಹೋಪಯೋಗಿ ವಸ್ತುಗಳ ಸಂಗ್ರಹ. ನೂತನ ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರತಿಫಲ. ದಾಂಪತ್ಯ ತೃಪ್ತಿದಾಯಕ. ಮಕ್ಕಳು, ಜ್ಞಾನ ವಿದ್ಯೆ ವಿಚಾರಗಳಲ್ಲಿ ಅಧಿಕ ಸಂತೋಷ.
ಮಿಥುನ: ಸರಿಯಾದ ಲೆಕ್ಕಾಚಾರದೊಂದಿಗೆ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ ನಿರೀಕ್ಷಿತ ಸ್ಥಾನ ಗೌರವಾದಿ ಪ್ರಾಪ್ತಿ. ಅನಗತ್ಯ ವಿಚಾರದಲ್ಲಿ ಪ್ರಗತಿ. ಸ್ತ್ರೀ ಪುರುಷರಿಗೆ ಪರಸ್ಪರರಿಂದ ಸಹಾಯ ಒದಗಿ ಬರುವುದು. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ.
ಕರ್ಕ: ನಿರೀಕ್ಷಿಸಿದಂತೆ ಅಧಿಕ ಧನಾರ್ಜನೆ. ಸ್ಥಾನ ಗೌರವಾದಿ ಲಭ್ಯ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಆರೋಗ್ಯ ಗಮನಿಸಿ. ಸಾಂಸಾರಿಕ ಸುಖ ತೃಪ್ತಿದಾಯಕ.
ಸಿಂಹ: ದೀರ್ಘ ಪ್ರಯಾಣ. ಆರೋಗ್ಯ ಗಮನಿಸಿ. ಧನಾಗಮನಕ್ಕೆ ಸರಿಯಾಗಿ ವ್ಯಯವೂ ಸಂಭವ. ದಂಪತಿಗಳಲ್ಲಿ ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ. ಮಕ್ಕಳಿಂದ ಸಂತೋಷ. ಜ್ಞಾನ ವಿದ್ಯೆಯಿಂದಲೂ ತೃಪ್ತಿ. ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ.
ಕನ್ಯಾ: ಅಧಿಕ ಪರಿಶ್ರಮ. ದೇಹಾಯಾಸ ಸಂಭವ. ಪೂರ್ವಾಪರ ತಿಳಿದು ಜವಾಬ್ದಾರಿ ಪಡೆದು ಕಾರ್ಯ ನಿರ್ವಹಿಸಿ. ಆಮಿಷಕ್ಕೆ ಒಳಗಾಗದಿರಿ. ಹಣಕಾಸಿನ ಕೊರತೆ ಆಗದು. ಗುರುಹಿರಿಯರ ಉತ್ತಮ ಸಹಕಾರ ಪ್ರಾಪ್ತಿ. ಸಂದಬೋìಚಿತ ಉಪಾಯದಿಂದ ಕೆಲಸ ಕಾರ್ಯಗಳಲ್ಲಿ ಜಯ.
ತುಲಾ: ಸರಿಯಾದ ಉತ್ತಮ ಆಲೋಚನೆ ಯೋಜನೆ ಅನುಷ್ಠಾನದಿಂದ ಮಾಡುವ ಕೆಲಸ ಕಾರ್ಯಗಳಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಕಂಡು ಬರುವುದು. ಹೆಚ್ಚಿದ ಸ್ಥಾನಮಾನ ಗೌರವ ಆದರಗಳು. ಆರೋಗ್ಯ ವಿಚಾರದಲ್ಲಿ ಉದಾಸೀನತೆ ಮಾಡದಿರಿ.
ವೃಶ್ಚಿಕ: ಭೂಮಿ ವಾಹನ ಆಸ್ತಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಖರ್ಚು ವೆಚ್ಚಗಳು ತೋರಿಬಂದಾವು. ಉತ್ತಮ ಜವಾಬ್ದಾರಿಯುತ ಮಾತು ಕಾರ್ಯ ವೈಖರಿಯಿಂದ ಜನಮನ್ನಣೆ ಗೌರವಾದಿ ಪ್ರಾಪ್ತಿ. ಗುರುಗಳು ಬಂಧು ಜನರಿಂದ ಉತ್ತಮ ಸಹಕಾರ.
ಧನು: ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ. ದೇವತಾ ಸಾನ್ನಿಧ್ಯ ಸಂದರ್ಶನ. ದೀರ್ಘ ಪ್ರಯಾಣ. ಸ್ಥಿರವಾದ ನಾಯಕತ್ವ ಗುಣದಿಂದ ಸಮಾಜದಲ್ಲಿ ಮಾನ್ಯತೆ. ಆಸ್ತಿ ವಿಚಾರದಲ್ಲಿ ಪ್ರಗತಿ. ದೂರದ ಮಿತ್ರರ ಸಹಕಾರ ಪ್ರೋತ್ಸಾಹ. ಆರೋಗ್ಯ ಸುದೃಢ.
ಮಕರ: ಸಂಸಾರದೊಂದಿಗೆ ದೂರ ಪ್ರಯಾಣ. ಮಕ್ಕಳಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ದ್ವಂದ್ವ ನಿಲುವು ಸಲ್ಲದು. ಬಹು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ. ಉತ್ತಮ ಧನಾರ್ಜನೆ. ಗುರುಹಿರಿಯರೊಂದಿಗೆ ಸಮಾದಾನದಿಂದಿರಿ.
ಕುಂಭ: ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ತಾಳ್ಮೆ ಸಹನೆ ಅಗತ್ಯ. ಅನಗತ್ಯ ಜವಾಬ್ದಾರಿಯಿಂದ ತೊಂದರೆ ಸಂಭವ. ದಾಕ್ಷಿಣ್ಯದ ಮಾತು ಬೇಡ. ನೇರ ನುಡಿಯಿಂದ ಅನುಕೂಲ ವಾತಾವರಣ. ಗೃಹೋಪಯೋಗಿ ವಸ್ತುಗಳಿಗೆ ಖರ್ಚು.
ಮೀನ: ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ. ದೂರದ ವ್ಯವಹಾರಗಳಲ್ಲಿ ನಿರೀಕ್ಷಿಸಿದ ಧನಾಗಮನವಿರದು. ಬೇಸರ ಮಾಡದೇ ಕಾರ್ಯ ಪ್ರವೃತ್ತರಾಗಿ. ಪರರಿಗೆ ವಚನ ನೀಡುವಾಗ ಮುಂಜಾಗ್ರತೆ ಅಗತ್ಯ. ಅನ್ಯರ ಮೇಲೆ ಅವಲಂಬಿತರಾಗದೆ ಸ್ವಂತಿಕೆಯಿಂದ ಕಾರ್ಯ ಪ್ರವೃತ್ತರಾಗಿರಿ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.