ಆ್ಯಪ್ ಆಟೋ ದರ ನಿಗದಿ: 3ನೇ ಸಭೆಯೂ ವಿಫಲ
Team Udayavani, Nov 15, 2022, 11:48 AM IST
ಬೆಂಗಳೂರು: ಆ್ಯಪ್ ಆಧಾರಿತ ಆಟೋಗಳ ದರ ನಿಗದಿ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು, ಅಗ್ರಿಗೇಟರ್ ಕಂಪನಿಗಳು ಮತ್ತು ಆಟೋ ಯೂನಿಯನ್‌ಗಳ ಜತೆ ನಡೆಸಿದ ಸತತ 3ನೇ ಸಭೆಯೂ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಇದರಿಂದಿ ಹಗ್ಗಜಗ್ಗಾಟ ಮುಂದುವರಿದಿದೆ.
ಒಂದೆಡೆ ಅಗ್ರಿಗೇಟರ್ ಕಂಪನಿಗಳು ಬೇಡಿಕೆ ಆಧಾರಿತ ದರ ಪರಿಷ್ಕರಣೆಗೆ ಅವಕಾಶ ಕಲ್ಪಿಸುವಂತೆ ಈಗಾಗಲೇ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ. ಅದರಂತೆ ಜಾರಿಗೊಳಿಸಲು ಒತ್ತಾಯಿಸಿತು. ಮತ್ತೂಂದೆಡೆ ಆಟೋ ಯೂನಿಯನ್ ಮುಖಂಡರು, ಮೀಟರ್ ದರ ಕನಿಷ್ಠ (2 ಕಿ.ಮೀ.ಗೆ) 30ರಿಂದ 40 ರೂ.ವರೆಗೆ ಹೆಚ್ಚಳ ಮಾಡುವಂತೆ ಬೇಡಿಕೆ ಸಲ್ಲಿಸಿದರು. ಇನ್ನು ಹಲವರು ಆ್ಯಪ್ ಕಂಪನಿ ದರ ನಿಗದಿ ಬಗ್ಗೆ ಮಾತ್ರ ಸಭೆ ನಡೆಸಲಾಗುತ್ತಿದೆ. ಮೀಟರ್ ದರ ಹೆಚ್ಚಳಕ್ಕೆ ಜಿಲ್ಲಾಡಳಿತದೊಂದಿಗೆ ಚರ್ಚಿಸಬೇಕು, ಜಿಲ್ಲಾಧಿಕಾರಿಗಳು ಉಪಸ್ಥಿತರಿಬೇಕು ಎಂದು ಆಕ್ಷೇಪ ಎತ್ತಿದರು. ಈ ವಾಗ್ವಾದಗಳ ನಡುವೆಯೇ ಸಭೆ ಬರ್ಖಾಸ್ತುಗೊಂಡಿತು.
ಸಭೆಯಲ್ಲಿ ದರ ನಿಗದಿ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ ಅಗ್ರಿಗೇಟರ್ ಕಂಪನಿಗಳು, “ಈಗಾಗಲೇ ಹೈಕೋರ್ಟ್‌ಗೆ ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನಮ್ಮ ಅಭಿಪ್ರಾಯವನ್ನು ಹೇಳಿದ್ದೇವೆ. ಅದರಂತೆ ಬೇಡಿಕೆ ಆಧಾರಿತ ದರ ಪರಿಷ್ಕರಣೆಗೆ ಅನುಮತಿ ನೀಡುವಂತೆ ಮತ್ತೂಮ್ಮೆ ಕೋರಿದರು. ನಂತರ ಸಾರಿಗೆ ಇಲಾಖೆ ಅಧಿಕಾರಿಗಳು ದರ ಇಳಿಕೆ ಕುರಿತು ಮನವಿ ಮಾಡಿದರೂ ತುಟಿಬಿಚ್ಚಲಿಲ್ಲ. ಬಳಿಕ ಅಧಿಕಾರಿಗಳು ಸಭೆಯನ್ನು ಮುಕ್ತಾಯಗೊಳಿಸಿ ಹೈಕೋರ್ಟ್‌ಗೆ ಅಭಿಪ್ರಾಯ ಸಲ್ಲಿಸುವುದಾಗಿ ತಿಳಿಸಿತು ಎನ್ನಲಾಗಿದೆ.
ಇಂದು ಸಾರ್ವಜನಿಕರೊಂದಿಗೆ ಸಭೆ: ಈ ಮಧ್ಯೆ ಸಾರಿಗೆ ಇಲಾಖೆ ಮಂಗಳವಾರ ಸಾರ್ವಜನಿಕರ ಸಭೆ ಕರೆದಿದ್ದು, ಬಳಿಕ ಕಂಪನಿಗಳು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಹೈಕೋರ್ಟ್‌ಗೆ ಪ್ರಸ್ತಾವನೆ ಸಲ್ಲಿಸಲಿದೆ. ಹೈಕೋರ್ಟ್ ಸೂಚನೆ ಬಳಿಕವಷ್ಟೇ ಅಂತಿಮ ದರ ಪಟ್ಟಿ ಜಾರಿಯಾಗಲಿದೆ. ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ, “ಹೈಕೋರ್ಟ್ ಸೂಚನೆ ಮೇರೆಗೆ ದರ ನಿಗದಿ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಓಲಾ, ಉಬರ್ ಸೇರಿದಂತೆ ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಮಂಗಳವಾರ ಸಾರ್ವಜನಿಕರ ಜತೆ ಸಭೆ ನಡೆಸಿ ಅಭಿಪ್ರಾಯ ಪಡೆಯಲಾಗುವುದು. ಸಾರ್ವಜನಿಕವಾಗಿ ಯಾವುದೇ ನಿರ್ಧಾರ ತಿಳಿಸಲ್ಲ. ಹೈಕೋಟ್‌ಗೆ ಮಾಹಿತಿ ನೀಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ಕಂಪನಿಗಳು, ಆಟೋ ಯೂನಿಯನ್ ವಾದ : ಮೀಟರ್ ದರದ ಜತೆ ಹೆಚ್ಚುವರಿಯಾಗಿ ಉಬರ್ ಕಂಪನಿ ಶೇ. 10ರಷ್ಟು ಪ್ಲಾಟ್‌ಫಾರಂ ಶುಲ್ಕ, ಶೇ. 5ರಷ್ಟು ಜಿಎಸ್‌ಟಿ, ಶೇ. 25ರಷ್ಟು ಹೆಚ್ಚುವರಿ ದರ ಸೇರಿ 40 ರಷ್ಟು ಹೆಚ್ಚು ದರಕ್ಕೆ, ಓಲಾ ಕಂಪನಿಯು ಮೀಟರ್ ದರಕ್ಕಿಂತ ಶೇ.20 ಹೆಚ್ಚುವರಿ ದರಕ್ಕೆ, ರ್ಯಾಪಿಟೋ ಕಿ.ಮೀ.ಗೆ 50 ರೂ. ನಿಗದಿಗೆ ಬೇಡಿಕೆ ಸಲ್ಲಿಸಿವೆ. ಕಂಪನಿಗಳು ಇದೇ ದರವನ್ನು ಅಂತಿಮಗೊಳಿಸಲು ಪಟ್ಟುಹಿಡಿದವು ಎಂದು ಮೂಲಗಳು ತಿಳಿಸಿವೆ.
ಅತ್ತ ಆಟೋ ಯೂನಿಯನ್‌ಗಳು, ಮೀಟರ್ ದರವನ್ನು ಹಲವು ವರ್ಷಗಳ ಬಳಿಕ ಕಳೆದ ಡಿಸೆಂಬರ್ ರಲ್ಲಿ (2021) ಹೆಚ್ಚಳ ಮಾಡಲಾಗಿತ್ತು. ಸದ್ಯ ಆ್ಯಪ್ ಕಂಪನಿಗಳ ಬೇಡಿಕೆ ಬೆನ್ನೆಲ್ಲೇ ಸಾಮಾನ್ಯ ಆಟೋರಿಕ್ಷಾ ಚಾಲಕರು ಕೂಡ ಪಟ್ಟು ಹಿಡಿದರು. ಇದರಿಂದ ಸಭೆಯಲ್ಲಿ ಒಮ್ಮತ ಮೂಡಲಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.