ಮೆಗಾ ಅದಾಲತ್: 832 ಪ್ರಕರಣ ಇತ್ಯರ್ಥ
Team Udayavani, Nov 15, 2022, 3:02 PM IST
ಗೌರಿಬಿದನೂರು: ನಗರದ ನ್ಯಾಯಲಯ ಆವರಣದಲ್ಲಿ ನಡೆದ ಮೆಗಾ ಲೋಕದಾಲತ್‌ನಲ್ಲಿ 832 ಪ್ರಕರಣ ಇತ್ಯರ್ಥವಾಗಿ ಸುಮಾರು 3 ಕೋಟಿ ಲಕ್ಷ ರೂ. ಸಂಗ್ರಹವಾಗಿದೆ.
ಇದೇ ವೇಳೆ ಮಾತನಾಡಿದ ಹಿರಿಯ ಶ್ರೇಣಿ ನ್ಯಾಯಾಧೀಶ ವಿಜಯ ದೇವರಾಜ ಅರಸ್ ಕಾನೂನು ಪ್ರಾಧಿಕಾರ ಕಕ್ಷಿದಾರರ ಅನುಕೂಲಕ್ಕೆ ಮೇಗಾ ಅದಾಲತ್ ಆಯೋಜನೆ ಮಾಡಿದೆ, ಇದರ ಉಪಯೋಗ ಪಡೆ ಬೇಕು, ಕ್ಷುಲ್ಲಕ ವಿಚಾರಕ್ಕೆ ಕೋರ್ಟ್-ಕಚೇರಿ ಅಂತಹ ಓಡಾಟ ಮಾಡಿ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ, ರಾಜಿ ಸಂಧಾನದಿಂದ ನಿಮ್ಮ ಪ್ರಕರಣ ಗಳನ್ನು ಇತ್ಯರ್ಥ ಮಾಡಿಕೊಂಡಲ್ಲಿ ನಿಮ್ಮ ಹಣ ಸಮಯ ಉಳಿತಾಯವಾಗುತ್ತದೆ ಎಂದರು.
ಕೇಸುಗಳನ್ನು ರಾಜೀ ಸಂಧಾನದಿಂದ 432 ಪ್ರಕರಣ ಗಳನ್ನು ಇತ್ಯರ್ಥ ಮಾಡಲಾಯಿತು ಎಂದರು. ಈ ಮೇಗಾ ಅದಾಲತ್ನಲ್ಲಿ ವಿಚ್ಛೇದನಕ್ಕೆ ಪ್ರಕರಣ ದಾಖಲಿ ಸಿದ್ದ ದಂಪತಿಗಳನ್ನು ರಾಜೀ ಸಂಧಾನದ ಮೂಲಕ ಓಲೈಸಿ ಒಂದಾಗಿಸಿದ್ದು ವಿಶೇಷವೆನಿಸಿತ್ತು. ಜನನ ಪ್ರಮಾಣ ಪತ್ರಗಳ ಪ್ರಕರಣ 400, ಬ್ಯಾಂಕ್ 25, ದಂಡ ಪ್ರಕರಣಗಳು 274 ಇತ್ಯಾರ್ಥ, ರಾಜೀ ಸಂಧಾನ ಮಾಡಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಎಂ,ಸಚಿನ್, ಹೆಚ್ಚು ವರಿ ಸಿವಿಲ್ ನ್ಯಾಯದೀಶ ಡಿ.ಕೆ.ಮಂಜುನಾಥಾಚಾರಿ, ವಕೀಲ ಸಂಘದ ಅಧ್ಯಕ್ಷ ಡಿ.ರಾಮದಾಸ್ ಉಪಾಧ್ಯಕ್ಷ ಬಿ. ಲಿಂಗಪ್ಪ ಕಾರ್ಯದರ್ಶಿ ದಯಾನಂದ, ಖಜಾಂಚಿ ಆನಂದ್, ವೆಂಕಟೇಶ್ ನಟರಾಜ್, ರಂಗನಾಥ್ ವಿ. ಗೋಪಾಲ್, ರಾಮಚಂದ್ರರೆಡ್ಡಿ, ಶ್ರೀನಾಥ್, ವಕೀಲರಾದ ರವಿ, ಆದಿ ನಾರಾಯಣಗೌಡ, ಅಶೋಕಕುಮಾರ್,ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.