ಮಂಗಳೂರು: ಒಂದೆರಡು ದಿನದಲ್ಲಿ ಸುರತ್ಕಲ್ ಟೋಲ್‌ಗೇಟ್ ರದ್ದು
Team Udayavani, Nov 16, 2022, 9:00 AM IST
ಮಂಗಳೂರು: ಸುರತ್ಕಲ್‌ನಲ್ಲಿರುವ ಸುಂಕ ಸಂಗ್ರಹ ಕೇಂದ್ರ ರದ್ದು ಕುರಿತು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಹೆಜಮಾಡಿ ಟೋಲ್‌ಗೇಟಲ್ಲಿ ಸಂಗ್ರಹಿಸಬೇಕಾದ ಪರಿಷ್ಕೃತ ಸುಂಕದರದ ಪ್ರಸ್ತಾವನೆಯನ್ನು ಸಚಿವಾಲಯಕ್ಕೆ ಕಳುಹಿಸಲಾಗಿದೆ.
ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯಿಂದ ದಿಲ್ಲಿಯ ಸಚಿವಾಲಯ ಕಚೇರಿಗೆ ಈ ಪ್ರಸ್ತಾವನೆ ಕಳುಹಿಸಲಾಗಿದೆ. ವಿವಿಧ ವಾಹನಗಳಿಗೆ ಹೆಜಮಾಡಿಯಲ್ಲಿ ಈಗ ವಿಧಿಸಲಾಗುತ್ತಿರುವ ದರದ ಜತೆಗೆ ಸುರತ್ಕಲ್ ಟೋಲ್‌ಗೇಟ್ ವಿಲೀನದ ಪರಿಣಾಮ ಪರಿಷ್ಕರಣೆಯಾಗಬೇಕಾದ ದರಗಳ ಪ್ರಸ್ತಾವನೆ ಇದು. ದಿಲ್ಲಿಯಲ್ಲಿ ಒಂದೆರಡು ದಿನಗಳಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದ ಬಳಿಕ ರಾಜ್ಯ ಸರಕಾರ ಅಥವಾ ದ.ಕ. ಜಿಲ್ಲಾಧಿಕಾರಿ ಈ ಕುರಿತು ಅಧಿಕೃತ ಆದೇಶ ಹೊರಡಿಸಲಿದ್ದು, ಬಳಿಕ ಮುಕ್ಕ ಟೋಲ್‌ಗೇಟ್ ರದ್ದಾಗಲಿದೆ. ಒಟ್ಟು ವ್ಯವಸ್ಥೆ ಕುರಿತಂತೆ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ರಾ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಂಗಳವಾರ ಈ ಕುರಿತು ಸಮಾಲೋಚನೆ ನಡೆಸಿದರು.
ಮುಂದುವರಿದ ಟೋಲ್ ವಿರೋಧಿ ಹೋರಾಟ
ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ ವಿರುದ್ಧದ ಹೋರಾಟ 19ನೇ ದಿನ ತಲುಪಿದ್ದು, ಸುಂಕ ಪಡೆಯುವುದನ್ನು ನಿಲ್ಲಿಸುವ ತನಕ ಹೋರಾಟ ನಡೆಯಲಿದೆ ಎಂದು ಮಂಗಳವಾರದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಸಂಸದರು ಕೇವಲ ಪ್ರಧಾನಿ ಮೋದಿ ಮತ್ತು ಸಚಿವ ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಈ ಹಿಂದೆಯೇ ಒಂದೆರಡು ವರ್ಷದಲ್ಲಿ ತೆಗೆದು ಹಾಕಬಹುದಿತ್ತು. ಇದೀಗ ಟೋಲ್ ಮುಕ್ತ ರಸ್ತೆ ಮಾಡಿದಲ್ಲಿ ಪ್ರಧಾನಿಗೆ ಧನ್ಯವಾದ ಕೊಡಿ ಎಂದು ಮುನೀರ್ ಕಾಟಿಪಳ್ಳ ವ್ಯಂಗ್ಯವಾಡಿದ್ದಾರೆ.
ಶೀಘ್ರ ಡಿಸಿ ನೋಟಿಫಿಕೇಶನ್: ಡಾ| ಭರತ್
ಮಂಗಳೂರು : ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಳ್ಳಲಿರುವ ಸುರತ್ಕಲ್ ಟೋಲ್‌ಗೇಟನ್ನು ತೆರವುಗೊಳಿಸುವ ಬಗ್ಗೆ ಜಿಲ್ಲಾಧಿಕಾರಿ ಯವರು ಒಂದು ವಾರದೊಳಗೆ ನೋಟಿಫಿಕೇಶನ್ ಹೊರಡಿಸಲಿದ್ದು ಅನಂತರ ಟೋಲ್ ಸಂಗ್ರಹ ಸ್ಥಗಿತಗೊಳ್ಳಲಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ| ಭರತ್ ಶೆಟ್ಟಿ ವೈ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
60 ಕಿ.ಮೀ. ವ್ಯಾಪ್ತಿಯಲ್ಲಿ 2 ಟೋಲ್‌ಗೇಟ್‌ಗಳಿಗೆ ಅವಕಾಶವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದರು. ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಸಂಸದ ನಳಿನ್ ಕುಮಾರ್ ನಿರಂತರವಾಗಿ ಪ್ರಯತ್ನಿಸಿದ್ದರು. ನಾನು ಕೂಡ ಪತ್ರ ಬರೆದು ಆಗ್ರಹಿಸಿದ್ದೆ. ಇದೀಗ ಸರಕಾರ ನೋಟಿಫಿಕೇಶನ್ ಹೊರಡಿಸಿದೆ ಎಂದು ಹೇಳಿದರು.
ಆಗಲೇ ತಡೆಯಬಹುದಿತ್ತು
2013ರ ಜೂನ್‌ನಲ್ಲಿ ಸುರತ್ಕಲ್ ಟೋಲ್‌ಗೇಟ್ ಬಗ್ಗೆ ನೋಟಿಫಿಕೇಷನ್ ಮಾಡಿತ್ತು. ಆಗ ಕೇಂದ್ರದಲ್ಲಿ ಯುಪಿಎ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಆಗ ಟೋಲ್‌ಗೇಟ್ ನಿಲ್ಲಿಸಲು ಅವಕಾಶವಿತ್ತು. ಆದರೆ ಕಾಂಗ್ರೆಸ್‌ನವರು ಪ್ರಯತ್ನ ಮಾಡಿರಲಿಲ್ಲ. ಈಗ ಹೋರಾಟ ಮಾಡುತ್ತಾ ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಹೆಜಮಾಡಿಯಲ್ಲಿ ಟೋಲ್ ಮೊತ್ತ ಎಷ್ಟು ನಿಗದಿ ಮಾಡಲಾಗುತ್ತದೆ ಎಂಬ ಸ್ಪಷ್ಟ ಮಾಹಿತಿ ಸದ್ಯಕ್ಕಿಲ್ಲ ಎಂದು ಹೇಳಿದರು. ಮೇಯರ್ ಜಯಾನಂದ ಅಂಚನ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮಹೇಶ್ ಮೂರ್ತಿ, ವಿಟuಲ್ ಸಾಲ್ಯಾನ್, ಸ್ಥಾಯೀ ಸಮಿತಿ ಅಧ್ಯಕ್ಷೆ ನಯನಾ ಕೋಟ್ಯಾನ್, ಪಾಲಿಕೆ ಸದಸ್ಯರಾದ ಶೋಭಾ ರಾಜೇಶ್, ಶ್ವೇತಾ ಪೂಜಾರಿ, ಸರಿತಾ ಶಶಿಧರ್, ಸುನಿತಾ, ವೇದಾವತಿ ಕುಳಾç, ವರುಣ್ ಚೌಟ, ಸುಮಿತ್ರಾ, ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್‌ರಾಜ್ ಕೃಷ್ಣಾಪುರ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.