ಚಾ.ನಗರ ಜಿಲ್ಲಾಭಿವೃದ್ಧಿಗೆ 1500 ಕೋಟಿ ರೂ.: ಸೋಮಣ್ಣ


Team Udayavani, Nov 16, 2022, 4:09 PM IST

ಚಾ.ನಗರ ಜಿಲ್ಲಾಭಿವೃದ್ಧಿಗೆ 1500 ಕೋಟಿ ರೂ.: ಸೋಮಣ್ಣ

ಯಳಂದೂರು: ಚಾಮರಾಜನಗರ ಜಿಲ್ಲಾ ಕೇಂದ್ರ, ಎಲ್ಲಾ ತಾಲೂಕಿನ ಅಭಿವೃದ್ಧಿಗೆ 1500 ಕೋಟಿ ರೂ. ವಿಶೇಷ ಯೋಜನೆ ತಯಾರಾಗಿದ್ದು, ಶೀಘ್ರದಲ್ಲೇ ಇದಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಪಟ್ಟಣದ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳ ಆವರಣ ದಲ್ಲಿ ಮಂಗಳವಾರ ಮೈಸೂರು-ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯಿತ ಮಠಾಧಿಪತಿಗಳ ಗೋಷ್ಠಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 107ನೇ ಜಯಂತಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಿವದೀಕ್ಷೆ- ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಕಾಲೆಳೆಯುವವರ ಸಂಖ್ಯೆ ಹೆಚ್ಚಿದ್ದು, ಅಭಿವೃದ್ಧಿ ಕೆಲಸಕ್ಕೆ ಕೆಲವರು ತೊಡಕು ಮಾಡುತ್ತಾರೆ. ಇದು ಹೀಗೆ ಮುಂದುವರಿದರೆ ಅಭಿವೃದ್ಧಿ ಕುಂಠಿತ ವಾಗುತ್ತದೆ ಎಂದು ವಿಷಾಧಿಸಿದರು.

ವಿಶ್ವದಲ್ಲೇ ಅಪಾರ ಕೀರ್ತಿ: ಇದೊಂದು ಪವಿತ್ರ ಕಾರ್ಯಕ್ರಮವಾಗಿದೆ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು, ಉತ್ತಮ ಮನುಷ್ಯರಾಗಿ ರೂಪು ಗೊಳ್ಳಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ. ರಾಜೇಂದ್ರ ಶ್ರೀಗಳು ಮಾತೃಹೃದಯಿಯಾಗಿದ್ದರು. ಸಾವಿರಾರು ವರ್ಷಗಳ ಐತಿಹ್ಯ ಹೊಂದಿರುವ ಸುತ್ತೂರು ಮಠ, ವಿಶ್ವದಲ್ಲೇ ಅಪಾರ ಕೀರ್ತಿ ಪಡೆ ದುಕೊಂಡಿದೆ. ಇದರ ಹಿಂದೆ ರಾಜೇಂದ್ರ ಶ್ರೀ ಹಾಗೂ ಹಾಲಿ ಇರುವ ಸುತ್ತೂರು ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಮಠಗಳು ಸಂಸ್ಕಾರ ಕಲಿಸುವ ಕೇಂದ್ರಗಳು: ಮಠ ಮಾನ್ಯಗಳು ರಾಷ್ಟ್ರದ ಸಂಪತ್ತಾಗಿದ್ದು, ಸಮಾಜದ ಅಂಕುಡೊಂಡು ತಿದ್ದುವ, ಆಧ್ಯಾತ್ಮವನ್ನು ಪಸರಿ ಸುವ, ನಮ್ಮ ಸಂಸ್ಕೃತಿ, ಶ್ರೀಮಂತ ಪರಂಪರೆಯನ್ನು ಜಗಕ್ಕೆ ಸಾರುವ, ಸಂಸ್ಕಾರ ಕಲಿಸುವ ಕೇಂದ್ರಗಳಾಗಿವೆ ಎಂದು ವಿವರಿಸಿದರು.

ರಾಜೇಂದ್ರರ ಜೀವನವೇ ನಮಗೆ ಸಂದೇಶ: ಸಿದ್ಧ ಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮತನಾಡಿ, ಸುತ್ತೂರು ಮಠದ ರಾಜೇಂದ್ರ ಶ್ರೀಗಳ ಜೀವನವೇ ನಮಗೆ ಉತ್ತಮ ಸಂದೇಶವಾಗಿದೆ. ತಮ್ಮ ಜೀವಿತಾವಧಿಯಲ್ಲಿ ಬಡವರ ಶಿಕ್ಷಣಕ್ಕೆ ಇವರು ಪಟ್ಟ ಪಾಡು ಇದಕ್ಕಾಗಿ ಮಾಡಿದ ತ್ಯಾಗ ಅನುಕರಣೀಯವಾಗಿದೆ. ಮಾನವೀಯತೆಯ ದೊಡ್ಡ ಸಾಕಾರ ಮೂರ್ತಿಯಾದ ಇವರು, ಶಿಕ್ಷ ಣವೇ ಸಮಸ್ತ ಪ್ರಗತಿಯ ಬೀಜ ಅದೇ ತಾಯಿ ಬೇರು ಎಂದು ನಂಬಿದ್ದು, ಹಾಗೇ ಬದುಕಿ ತೋರಿಸಿ ಕೊಟ್ಟರು ಎಂದು ಹೇಳಿದರು.

ಶಿವಕುಮಾರ ಶ್ರೀ, ರಾಜೇಂದ್ರ ಶ್ರೀ ಒಂದೇ ನಾಣ್ಯ: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಲಿಂಗೈಕ್ಯ ಡಾ.ಶಿವ ಕುಮಾರ ಸ್ವಾಮೀಜಿ, ರಾಜೇಂದ್ರ ಮಹಾಸ್ವಾಮಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವರು ಅಪರೂಪದ ಶ್ರೇಷ್ಠ ಸಂತರಾಗಿದ್ದಾರೆ. ಸಂಸ್ಕಾರ ಪ್ರತಿ ಧರ್ಮದಲ್ಲೂ ಇದ್ದು, ಇದನ್ನು ರೂಢಿಗತ ಮಾಡಿ ಕೊಳ್ಳಬೇಕು. ಆಧ್ಯಾತ್ಮಿಕ ಸಂಪ್ರ ದಾಯಕ್ಕೆ ಭಗ ವಂತನ ಸ್ಮರಣೆ ಮುಖ್ಯವಾಗಿದೆ ಎಂದು ಹೇಳಿದರು.

ಶ್ರೀಮಂತ ಸಂಸ್ಕೃತಿಯ ಅನಾವರಣ: ಮೈಸೂರು- ಚಾಮರಾಜನಗರದ 45 ಮಠಾಧ್ಯಕ್ಷರು ಸೇರಿ ಕೊಂಡು ಇಂತಹ ಗೋಷ್ಠಿಯನ್ನು ಕಟ್ಟಿಕೊಂಡು ಇಲ್ಲಿ ತಾತ್ವಿಕ ಚಿಂತನೆಗಳನ್ನು ಬಿತ್ತುವ, ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಪ್ರತಿಭಾವಂತ ಮಕ್ಕ ಳನ್ನು ಗುರುತಿಸಿ ಅವರನ್ನು ಉತ್ತೇಜಿಸುವ ಕೆಲಸ ವನ್ನು ಮಾಡುತ್ತಿದ್ದಾರೆ. ಯುವ ಸಮೂಹ ದೇಶಭಕ್ತಿ ಯನ್ನು ಬೆಳೆಸಿಕೊಳ್ಳಬೇಕು, ನಮ್ಮ ಶ್ರೀಮಂತ ಸಂಸ್ಕೃ ತಿಯ ಅನಾವರಣ ಜಗಕ್ಕೆ ತೆರೆದಿಡಬೇಕು ಎಂದು ತಿಳಿಸಿದರು.

55 ಜನರಿಗೆ ಶಿವದೀಕ್ಷೆ-ಲಿಂಗದೀಕ್ಷೆ, 55 ವಿದ್ಯಾರ್ಥಿಗಳಿಗೆ ವಿವಿಧ ದತ್ತಿಗಳಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಎಎಸ್ಪಿ ಸುಂದರ್‌ರಾಜ್‌, ಮಠಾಧೀಶರು ಹಾಜರಿದ್ದರು.

ಟಾಪ್ ನ್ಯೂಸ್

court

CBI court; ಕಸ್ಟಡಿ ಸಾ*ವು ಪ್ರಕರಣ: ಹಿಮಾಚಲ ಐಜಿ ಸೇರಿ 7 ಮಂದಿ ಪೊಲೀಸರಿಗೆ ಶಿಕ್ಷೆ

BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ

BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ

1-roh

Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ

Randeep-surgewala

ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ

rohit

BCCI 10-point ಆದೇಶ ಸಮಸ್ಯೆ; ಆಕ್ಷೇಪ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leopard-Bonu

Gundlupete: ಚಿರತೆ ಸೆರೆಗಾಗಿ ಇರಿಸಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ!

5-yelandur

Yelandur: ಮಲಗಿದ ಸ್ಥಿತಿಯಲ್ಲಿ ಯುವಕ ಮೃತ

4-gundlupete

Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ

ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ

ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ

1-yelandur

Yelandur: ಮೂಗುರು ತ್ರಿಪುರ ಸುಂದರಿ ಅಮ್ಮನವರ ಜಾತ್ರೆ; ಬಂಡಿ ಹರಿದು ಓರ್ವ ಮೃತ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

1-sat

India Open; ಸಾತ್ವಿಕ್‌-ಚಿರಾಗ್‌ ಅಭಿಯಾನ ಸೆಮಿಫೈನಲ್‌ನಲ್ಲಿ ಅಂತ್ಯ

Work-Time

Work Time Issue: ವಾರಕ್ಕೆ 90 ಗಂಟೆ ಕೆಲಸ ಸಲೀಸಾ?

court

CBI court; ಕಸ್ಟಡಿ ಸಾ*ವು ಪ್ರಕರಣ: ಹಿಮಾಚಲ ಐಜಿ ಸೇರಿ 7 ಮಂದಿ ಪೊಲೀಸರಿಗೆ ಶಿಕ್ಷೆ

Foot ball

Mangaluru; ಫುಟ್‌ಬಾಲ್‌ ಕ್ವಾರ್ಟರ್‌ ಫೈನಲ್‌ :ಕಸಬ ಬ್ರದರ್ ಮೇಲುಗೈ

BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ

BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.