ವಿಐ ನಿಂದ ಅಗ್ನಿವೀರ್ ಪರೀಕ್ಷೆಗಳಿಗೆ ಮಾರ್ಗದರ್ಶನ
Team Udayavani, Nov 16, 2022, 4:15 PM IST
ಬೆಂಗಳೂರು: ವಾಯುಪಡೆ ಅಗ್ನಿವೀರ್ʼ ಎಕ್ಸ್ & ವೈ ಪರೀಕ್ಷೆಗಳಿಗೆ ವೊಡಾಪೋನ್ ಐಡಿಯಾ Vi ಪೂರ್ವ ಸಿದ್ದತಾ ಸಾಮಗ್ರಿ ಒದಗಿಸಲಿದೆ.
ಭಾರತೀಯ ವಾಯುಪಡೆಯ ಉದ್ಯೋಗಾಕಾಂಕ್ಷಿಗಳಿಗೆ ಲೈವ್ ತರಗತಿಗಳು, ಅಣಕು ಪರೀಕ್ಷೆಗಳು ಮತ್ತು ಪರೀಕ್ಷಾ ಸಾಮಗ್ರಿಗಳನ್ನು ನೀಡುತ್ತದೆ
ಭಾರತೀಯ ವಾಯುಪಡೆಯ ಉದ್ಯೋಗಗಳು ಭಾರತದ ಯುವಕರಿಗೆ ಅತ್ಯಂತ ಮಹತ್ವಾಕಾಂಕ್ಷೆಯ ರಕ್ಷಣಾ ಉದ್ಯೋಗಗಳಲ್ಲಿ ಒಂದೆನಿಸಿವೆ. 2023ರ ʻಅಗ್ನಿವೀರ್ ವಾಯು ಯೋಜನೆʼ ಅಡಿಯಲ್ಲಿ ನೇಮಕಾತಿ ಅವಕಾಶವನ್ನು ಐಎಎಫ್ ಘೋಷಿಸಿದ್ದು, ʻವಾಯುಪಡೆಯ ಅಗ್ನಿವೀರ್ʼ ಎಕ್ಸ್ & ವೈ ಗ್ರೂಪ್‌ಗೆ ಸಿದ್ಧತಾ ಸಾಮಗ್ರಿಗಳನ್ನು ʻವಿ ಆಪ್ʼ (Vi App)ನಲ್ಲಿ ʻಪರೀಕ್ಷಾʼ ಸಂಸ್ಥೆಯ ಸಹಭಾಗಿತ್ವದಲ್ಲಿ ʻವಿಐʼ ಒದಗಿಸುತ್ತಿದೆ.
ಸರಕಾರಿ ಪರೀಕ್ಷಾ ಸಿದ್ಧತೆಯ ಪ್ರವರ್ತಕ ಸಂಸ್ಥೆ ʻಪರೀಕ್ಷಾʼದಲ್ಲಿ ತಜ್ಞರು ವಿಶೇಷವಾಗಿ ಆಯ್ಕೆ ಮಾಡಿದ, ʻವಿಐ ಆಪ್ʼನಲ್ಲಿ ಲಭ್ಯವಿರುವ ಕೋರ್ಸ್ ಸಾಮಗ್ರಿಯನ್ನು ಪ್ರಸಿದ್ಧ ʻಕೆಡೆಟ್ ಡಿಫೆನ್ಸ್ ಅಕಾಡೆಮಿʼ ಸಿದ್ಧಪಡಿಸಿದೆ. ಇದರೊಂದಿಗೆ, ವಿಐ ಬಳಕೆದಾರರು ಸಂಜೀವ್ ಠಾಕೂರ್ ಸೇರಿದಂತೆ ಅಕಾಡೆಮಿಯ ಅತ್ಯುತ್ತಮ ಶಿಕ್ಷಕರಿಂದ ಲೈವ್ ತರಗತಿಗಳು, ಅಣಕು ಪರೀಕ್ಷೆಗಳು, ಇತ್ಯಾದಿ ಐಎಎಫ್ ಉದ್ಯೋಗ ಪರೀಕ್ಷೆಗಳ ಪೂರ್ವಸಿದ್ಧತಾ ಸಾಮಗ್ರಿಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.
ʻವಿಐ ಉದ್ಯೋಗಗಳು ಮತ್ತು ಶಿಕ್ಷಣʼ ವೇದಿಕೆಯು ಸ್ಟಾಫ್ ಸೆಲೆಕ್ಷನ್ ಕಮಿಷನ್, ಬ್ಯಾಂಕಿಂಗ್, ಟೀಚಿಂಗ್, ಡಿಫೆನ್ಸ್, ರೈಲ್ವೆ ಮುಂತಾದ ವಿವಿಧ ವಿಭಾಗಗಳಲ್ಲಿ 150+ ಪರೀಕ್ಷೆಗಳಲ್ಲಿ ಅನಿಯಮಿತ ಅಣಕು ಪರೀಕ್ಷೆಗಳು ಸೇರಿದಂತೆ ಕೇಂದ್ರ / ರಾಜ್ಯ ಸರಕಾರಿ ಉದ್ಯೋಗಗಳಿಗೆ ತಯಾರಿ ಸಾಮಗ್ರಿಗಳನ್ನು ಒದಗಿಸುತ್ತಿದೆ. . ವಾರ್ಷಿಕ ಕೇವಲ 249 ರೂ.ನ ಚಂದಾದಾರಿಕೆಗೆ ಈ ಸೇವೆಯನ್ನು ಒದಗಿಸಲಾಗುತ್ತಿದೆ.
ʻಅಗ್ನಿವೀರ್ ವಾಯುʼಗೆ ಆನ್‌ಲೈನ್ ನೋಂದಣಿ ಪ್ರಾರಂಭವಾಗಿದ್ದು, ಆಕಾಂಕ್ಷಿಗಳು ನವೆಂಬರ್ 23, ರವರೆಗೆ ಅರ್ಜಿ ಸಲ್ಲಿಸಬಹುದು. ʻಅಗ್ನಿವೀರ್ ವಾಯು ನೇಮಕಾತಿ-2023ʼರ ಆನ್‌ಲೈನ್ ಪರೀಕ್ಷೆಯ ದಿನಾಂಕವನ್ನು 2023ರ ಜನವರಿ 18ರಿಂದ ಜನವರಿ 24ರವರೆಗೆ ನಿಗದಿಪಡಿಸಲಾಗಿದೆ.
ʻವಿಐʼ ಗ್ರಾಹಕರು ʻವಿಐ ಆಪ್ʼನಲ್ಲಿ ʻವಿಐ ಉದ್ಯೋಗ & ಶಿಕ್ಷಣʼ ವೇದಿಕೆ ಮೂಲಕ ಉತ್ತಮವಾಗಿ ಸಂಶೋಧಿಸಿದ ಪರೀಕ್ಷಾ ಸಾಮಗ್ರಿಗಳನ್ನು ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.