ಮೀಸಲಾತಿ ಸಿಎಂ ಬೊಮ್ಮಾಯಿಯವರಿಂದ ಮಾತ್ರ ಸಾಧ್ಯ : ಬಸವ ಜಯ ಮೃತ್ಯುಂಜಯ ಶ್ರೀ
ಪಂಚಮಸಾಲಿ 2 ಎ ಮುಂದೆ ಯಾರ ಕೈಯಿಂದಲೂ ಸಾಧ್ಯವಿಲ್ಲ..... ಕೊಟ್ಟರೆ 150 ಸ್ಥಾನ ಗೆಲ್ಲುವ ಕನಸು ನನಸಾಗಲು ಸಾಧ್ಯ
Team Udayavani, Nov 16, 2022, 4:35 PM IST
ಕುಷ್ಟಗಿ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡುವುದು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಮಾತ್ರ ಸಾಧ್ಯವಿದ್ದು, ಮುಂದೆ ಯಾರ ಕೈಯಿಂದಲೂ ಸಾಧ್ಯವಿಲ್ಲ ಎಂದು ಕೂಡಲಸಂಗಮ ಜಗದ್ಗುರು ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ರಾಷ್ಟ್ರಮಾತೆ ಕಿತ್ತೂರರಾಣಿ ಚನ್ನಮ್ಮರವರ 244ನೇ ಜಯಂತ್ಯುತ್ಸವ ಹಾಗೂ 199ನೇ ವಿಜಯೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಈ ಸಮಾಜಕ್ಕೆ 2-ಎ ಮೀಸಲಾತಿ ಕೊಟ್ಟರೆ ಮಾತ್ರ, ಈಗಾಗಲೇ ಬಿಜೆಪಿ ಸರ್ಕಾರ ಕಂಡಿರುವ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಕನಸು, ನನಸಾಗಲು ಸಾಧ್ಯ ಎನ್ನುವುದು ಸಹ ಗೊತ್ತಾಗಿದೆ. ಈ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರವೂ, ಆರ್ ಎಸ್ ಎಸ್ ಒಪ್ಪಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಕೊಡುವ ಮನಸ್ಸಿದೆ. ಆದರೆ ಅವರ ನಿಧಾನಗತಿ ಗಮನಿಸಿದರೆ ಪಂಚಮಸಾಲಿ ಸಮಾಜಕ್ಕೆ ಎಲ್ಲೋ ಆತಂಕ ಶುರುವಾಗಿದೆ ಎಂದರು.
ಮೀಸಲಾತಿ ಕಪ್ ಎತ್ತಲು ಸಿಕ್ಸರ್ ಬಾರಿಸಬೇಕು…
ಈಗ ಕಬ್ಬಿಣ ಕಾದಿದ್ದು ಈಗಲೇ ಮೀಸಲಾತಿ ಕಪ್ ಗಳಿಸಲು ಸಾದ್ಯ. ಕ್ರಿಕೆಟ್ ನಲ್ಲಿ ಭಾರತ ಗೆಲ್ಲಲು ವಿರಾಟ್ ಕೊಯ್ಲಿ ಅವರು ಲಾಸ್ಟ್ ಬಾಲ್, ಲಾಸ್ಟ್ ವಿಕೆಟ್ ನಲ್ಲಿ ಸಿಕ್ಸರ್ ಹೊಡೆಯದೇ ಇದ್ದರೆ ಇಂಡಿಯಾ ಹೇಗೆ ಸೋಲುತ್ತದೆಯೋ ಆ ಪರಿಸ್ಥಿತಿಯಲ್ಲಿದ್ದೇವೆ. ಲಾಸ್ಟ್ ಬಾಲ್, ಲಾಸ್ಟ್ ವಿಕೆಟ್ ನಲ್ಲಿ ಸಿಕ್ಸ್ ಹೊಡೆಯಲೇ ಬೇಕಿದ್ದು, ಹೊಡೆಯದೇ ಇದ್ದರೆ ಮೀಸಲಾತಿ ಕಪ್ ಸಿಗೋದಿಲ್ಲ. ಈ ಅವಧಿಯಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ತಪ್ಪಿದರೆ ಮುಂದಿನ 5 ವರ್ಷದ ಅವಧಿಯಲ್ಲಿ ಸಿಗದಂತಾಗುತ್ತದೆ. ಇದರಿಂದ ಪಂಚಮಸಾಲಿ ಸಮುದಾಯದ ಮಕ್ಕಳು 2ಎ ಮೀಸಲಾತಿಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು.
ಮುಂದೆ ಸಮಸ್ಯೆಯಾದಲ್ಲಿ ಈ ಹೋರಾಟ ಇಷ್ಟೊಂದು ಉಗ್ರ ಪ್ರಮಾಣದಲ್ಲಿ ಮಾಡಲು ಸಾಧ್ಯವಿಲ್ಲ. ಪಂಚಮಸಾಲಿ ಸಮಾಜ ಒಳಗೂ, ಹೊರಗೂ ಜಾಗೃತವಾಗಿದೆ ಎಂದರು.
ಹಿಂದುಳಿದ ವರ್ಗಗಳ ಆಯೋಗ ಭೇಟಿ
ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಆಯೋಗ ಭೇಟಿ ನೀಡುತ್ತಿರುವುದು ಪಂಚಮಸಾಲಿ ಹೋರಾಟದ ಪರಿಣಾಮವಾಗಿದೆ. ಇದೇ ನ.17 ಹಾಗೂ ನ.18 ರಂದು ಕುಷ್ಟಗಿ ತಾಲೂಕಿಗೆ ಹಿಂದುಳಿದ ವರ್ಗಗಳ ಆಯೋಗ ಕುಷ್ಟಗಿ ತಾಲೂಕಿಗೆ ಬರಲಿದ್ದು ಸಮಾಜದ ಜನರು, ಲಿಂಗಾಯತ, ವೀರಶೈವ ಹೇಳದೇ ಪಂಚಮಸಾಲಿ ಎಂದೇ ಹೇಳಬೇಕು. ಕೌಟುಂಬಿಕ ವಾಸ್ತವ ಸ್ಥಿತಿಯ ಮಾಹಿತಿ ನೀಡಬೇಕು. ಹಿಂದುಳಿದ ವರ್ಗಗಳ ಆಯೋಗದ ಪ್ರವಾಸದ ಪಟ್ಟಿಯಲ್ಲಿ ಹಿರೇಮನ್ನಾಪೂರು, ಗುಮಗೇರಾ ಎಂದಿದೆ. ಸದರಿ ಗ್ರಾಮದಲ್ಲಿ ಪಂಚಮಸಾಲಿ ಸಮಾಜದವರು ಹೆಚ್ಚಿಲ್ಲ. ಹೀಗಾಗಿ ಜುಮ್ಲಾಪೂರ, ಮುದೇನೂರು ಈ ಗ್ರಾಮಗಳ ಭೇಟಿ ನೀಡಿದರೆ ಸಮಾಜದ ವಾಸ್ತವ ಸ್ಥಿತಿ ಅರಿಯಲು ಸಾಧ್ಯ ಎಂದರು.
ದೇವೇಂದ್ರಪ್ಪ ಬಳೂಟಗಿ, ಜಿ.ಪಂ.ಮಾಜಿ ಸದಸ್ಯ ಕೆ.ಮಹೇಶ, ಪಂಚಮಸಾಲಿ ಸಮಾಜದ ಅಧ್ಯಕ್ಷ ಚಂದ್ರಶೇಖರ ನಾಲತವಾಡ, ಮಹಾಂತೇಶ ಅಗಸಿಮುಂದಿನ,ಲಿಂಗಪ್ಪ ಮಂಗಳೂರು, ಶಿವಸಂಗಪ್ಪ ಬಿಜಕಲ್, ನೂರಂದಪ್ಪ ಕಂದಕೂರು, ಡಾ.ನಾಗರತ್ನಮ್ಮ ಭಾವಿಕಟ್ಟಿ, ಅಮರೇಗೌಡ ನಾಗೂರು, ಶರಣಪ್ಪ ಜೀಗೇರಿ, ಕಳಕೇಶ, ಅಶೋಕ ಬಾವಿಕಟ್ಟಿ ಮತ್ತಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.