ನಾರ್ಕೊ ಟೆಸ್ಟ್ ಹೊರಬರುವುದೇ ಸತ್ಯ? ಏನಿದು ನಾರ್ಕೊ ಟೆಸ್ಟ್? ಮಾಹಿತಿ ಇಲ್ಲಿದೆ….
Team Udayavani, Nov 17, 2022, 7:55 AM IST
ತನ್ನ ಪ್ರಿಯತಮೆ ಶ್ರದ್ಧಾ ವಾಲ್ಕರ್‌ರನ್ನು ಹತ್ಯೆ ಮಾಡಿ, 35 ಪೀಸ್ ಮಾಡಿ ಈಗ ಪೊಲೀಸರ ವಶದಲ್ಲಿರುವ ಅಫ್ತಾಬ್ ಅಮಿನ್ ಪೂನಾ ವಾಲನ ಸುಳ್ಳುಪತ್ತೆ ಪರೀಕ್ಷೆಗೆ (ನಾರ್ಕೊ ಅನಾಲಿಸಿಸ್)ಕೋರ್ಟ್ ಒಪ್ಪಿಗೆ ನೀಡಿದೆ. ತನಿಖೆಯ ಈ ಹಂತದಲ್ಲಿ ಈ ನಾರ್ಕೊ ಟೆಸ್ಟ್ ಅತ್ಯಂತ ಮಹತ್ವದ್ದಾಗಿದೆ. ಹಾಗಾದರೆ ಈ ನಾರ್ಕೊ ಟೆಸ್ಟ್ ಅಂದರೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಏನಿದು ನಾರ್ಕೊ ಟೆಸ್ಟ್?
ಆರೋಪಿಯೊಬ್ಬನ ದೇಹದೊಳಗೆ ಸೋಡಿಯಂ ಪೆಂಟೋಥಾಲ್ ಎಂಬ ದ್ರವವನ್ನು ಇಂಜೆಕ್ಟ್ ಮಾಡಿ, ಆತನ ಜ್ಞಾನತಪ್ಪಿಸಿ ಬಳಿಕ ಅವನಿಂದ ಸತ್ಯ ಹೊರಬೀಳಿಸುವ ಕ್ರಿಯೆ ಇದು. ಈ ಸೋಡಿಯಂ ಪೆಂಟೋಥಾಲ್‌ಗೆ ಟ್ರಾಥ್ ಸೆರಮ್ ಎಂದೂ ಕರೆಯುತ್ತಾರೆ. ವ್ಯಕ್ತಿಯೊಬ್ಬ ಸ್ವಯಂ ಜ್ಞಾನ ಕಳೆದುಕೊಂಡಾಗ ಆತ ಹಿಪ್ನೊàಟಿಕ್ ಮೋಡ್‌ಗೆ ಹೋಗುತ್ತಾನೆ. ಆಗ ತನಿಖಾಧಿಕಾರಿಗಳು ಮುಕ್ತವಾಗಿ ಪ್ರಶ್ನೆ ಕೇಳಿ ಉತ್ತರ ಪಡೆಯಬಹುದು.
ಈ ಪರೀಕ್ಷೆ ನಡೆಸುವುದು ಹೇಗೆ?
ಒಬ್ಬ ಮಾನಸಿಕ ತಜ್ಞ, ತನಿಖಾಧಿಕಾರಿ ಅಥವಾ ಫಾರೆನ್ಸಿಕ್ ತಜ್ಞರೊಬ್ಬರ ಉಪಸ್ಥಿತಿ ಯಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಕೋರ್ಟ್‌ನ ಒಪ್ಪಿಗೆ ಬೇಕು,ವೈದ್ಯಕೀಯವಾಗಿಯೂ ಫಿಟ್ ಆಗಿರಬೇಕು. ಇದನ್ನು ಪರಿಶೀಲಿಸಿ, ಸೋಡಿಯಂ ಪೆಂಟೋಥಾಲ್ ಅನ್ನು ಆತನ ದೇಹಕ್ಕೆ ಚುಚ್ಚಲಾಗುತ್ತದೆ. ಎಷ್ಟು ಡೋಸೇಜ್ ನೀಡಬೇಕು ಎಂಬುದು ಆರೋಪಿಯ ವಯಸ್ಸು, ಲಿಂಗ ಮತ್ತು ಇತರ ವೈದ್ಯಕೀಯ ಸ್ಥಿತಿ ನೋಡಿ ನಿರ್ಧಾರ ಮಾಡಲಾಗುತ್ತದೆ.
ಡೋಸೇಜ್ ಹೆಚ್ಚು ಕಡಿಮೆಯಾದರೆ?
ಒಂದು ವೇಳೆ ಡೋಸೇಜ್ ಹೆಚ್ಚು ಕಡಿಮೆಯಾದರೆ ಆರೋಪಿ ಅಥವಾ ರೋಗಿ ಕೋಮಾಗೆ ಜಾರಬಹುದು,
ಸಾವೇ ಸಂಭವಿಸಬಹುದು.
ಇದು ನಿಖರವೇ?
ನಾರ್ಕೊ ಅನಾಲಿಸಿಸ್ ಟೆಸ್ಟ್ ಹೆಚ್ಚು ನಿಖರ ಎಂಬುದು ದೃಢ ಪಟ್ಟಿಲ್ಲ. ಕೆಲವೊಮ್ಮೆ ಆರೋಪಿ ಸುಳ್ಳನ್ನೂ ಹೇಳಿರುತ್ತಾನೆ.
ಭಾರತದಲ್ಲಿ ನಾರ್ಕೊ ಟೆಸ್ಟ್
ನಾರ್ಕೊ ಟೆಸ್ಟ್ ಅನ್ನು 2002ರ ಗೋಧ್ರಾ ಪ್ರಕರಣದ ಆರೋಪಿಗಳಿಗೆ ಮೊದಲು ಮಾಡಲಾಯಿತು. ಬಳಿಕ 2003ರ ತೆಲಗಿ ನಕಲಿ ಛಾಪಾ ಕಾಗದ ಹಗರಣದಲ್ಲಿ ಅಬ್ದುಲ್ ಕರೀಂ ತೆಲಗಿಗೂ ಮಾಡಲಾಗಿತ್ತು. ಗುಜರಾತ್‌ನ ನಿಥಾರಿ ಪ್ರಕರಣದ ಆರೋಪಿಗಳಿಗೂ ನಾರ್ಕೊ ಟೆಸ್ಟ್ ನಡೆಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.