ಉಚ್ಚಿಲದಲ್ಲಿ ಬೈಕಿಗೆ ಟಿಪ್ಪರ್ ಢಿಕ್ಕಿ: ಯುವತಿ ಸಾವು, ಯುವಕ ಆಸ್ಪತ್ರೆಗೆ ದಾಖಲು
Team Udayavani, Nov 17, 2022, 7:14 AM IST
ಪಡುಬಿದ್ರಿ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ರಿಕ್ಷಾ ನಿಲ್ದಾಣ ಬಳಿ ಬುಧವಾರ ಮಧ್ಯಾಹ್ನದ ವೇಳೆ ಟಿಪ್ಪರ್‌ನ ಹಿಂಬದಿ ಚಕ್ರವು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಪಡುಬಿದ್ರಿ ಕಂಚಿನಡ್ಕದ ಯುವತಿ ಅಯಿಷಾ ನಿಹಾಲಾ (18)ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿದ್ದಾಳೆ.
ಬೈಕ್ ಚಲಾಯಿಸುತ್ತಿದ್ದ ಯುವಕ ಬೆಳಪುವಿನ ಮಹಮ್ಮದ್ ಷರೀಫ್ ಗಾಯಗೊಂಡು ಉಡುಪಿ ಸರಕಾರಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರೀರ್ವರ ವಿವಾಹ ನಿಶ್ಚಿತಾರ್ಥವಾಗಿದ್ದು ಜನವರಿಯಲ್ಲಿ ಮದುವೆ ನಡೆಯಲಿತ್ತೆಂದು ತಿಳಿದು ಬಂದಿದೆ.
ಯುವಕ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು ಮಂಗಳವಾರವಷ್ಟೇ ಊರಿಗೆ ಬಂದಿದ್ದ. ಆತನೊಂದಿಗೆ ವಿವಾಹವಾಗಲಿದ್ದ ಯುವತಿಯು ಉಡುಪಿಗೆ ತೆರಳಿ ಡ್ರೆಸ್ ಖರೀದಿಸಿ ಪಡುಬಿದ್ರಿಯತ್ತ ವಾಪಸಾಗುತ್ತಿದ್ದರು. ಅವರಿಬ್ಬರು ಬೈಕ್‌ನಲ್ಲಿ ಬರುತ್ತಿದ್ದ ಸಂದರ್ಭ ಉಚ್ಚಿಲದಲ್ಲಿ ಹಿಂಬದಿಯಿಂದ ಬಂದ ಟಿಪ್ಪರ್ ಚಾಲಕನ ಅಜಾಗರೂಕತೆಯ ಚಾಲನೆಯಿಂದಾಗಿ ಈ ಅಪಘಾತವು ಸಂಭವಿಸಿದೆ. ತೀವ್ರ ಗಾಯ ಗೊಂಡ ಯುವತಿಯನ್ನು ಉಡುಪಿಯ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ನಿಹಾಲಾ ತಂದೆ ಮೇಸ್ತ್ರಿ ವೃತ್ತಿ ಯವರಾಗಿದ್ದು ಅವರ ಪುತ್ರಿಯರೀರ್ವರ ವಿವಾಹ ನಿಶ್ಚಯವಾಗಿತ್ತು. ಇದೀಗ ಕಿರಿಯ ಪುತ್ರಿಯ ಸಾವಿನಿಂದಾಗಿ ಮನೆಮಂದಿ ಕಂಗಾಲಾಗಿದ್ದಾರೆ. ಮೃತ ನಿಹಾಲಾ ತಂದೆ, ತಾಯಿ, ಅಕ್ಕ ಹಾಗೂ ಸಹೋದರರೀರ್ವರನ್ನು ಅಗಲಿದ್ದಾರೆ.
ಹೆವಿ ಡ್ಯೂಟಿ ಲೈಸನ್ಸ್ ಇರಲಿಲ್ಲ
ಟಿಪ್ಪರ್ ಚಾಲಕ ಆರೋಪಿ ಮಹಮ್ಮದ್ ಝಿಯಾದ್‌ನ ಬಳಿ ಹೆವಿ ಡ್ನೂಟಿ ಚಾಲನ ಪರವಾನಿಗೆಯೂ ಇರಲಿಲ್ಲವೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.