ಪುಷ್ಪ-2 ಚಿತ್ರದ ಅಪ್ಡೇಟ್ ಕೊಡಿ..ಬ್ಯಾನರ್ ಹಿಡಿದು ಬೀದಿಗಿಳಿದ ಅಲ್ಲು ಅರ್ಜುನ್ ಫ್ಯಾನ್ಸ್
ಅಭಿಮಾನಿಗಳ ಈ ರೀತಿಯ ಬೇಡಿಕೆಯ ಕುರಿತು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Team Udayavani, Nov 17, 2022, 5:34 PM IST
ಹೈದಾರಬಾದ್: ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಅವರ ʼಪುಷ್ಪʼ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌಂಡ್ ಮಾಡಿದ್ದು ಗೊತ್ತೇ ಇದೆ. ಸಿನಿಮಾದ ಎರಡನೇ ಭಾಗಕ್ಕೆ ಪ್ರೇಕ್ಷಕರು ಕಾಯುತ್ತಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಒಂದು ಅಪ್ಡೇಟ್ ಗಾಗಿ ಕೆಲ ಅಭಿಮಾನಿಗಳು ರಸ್ತೆಗಿಳಿದಿದ್ದಾರೆ.
ಸುಕುಮಾರ್ ನಿರ್ದೇಶನದಲ್ಲಿ ಬಂದ ʼಪುಷ್ಪʼ ಸಿನಿಮಾ ಟಾಲಿವುಡ್ ನಲ್ಲಿ ಅಲ್ಲು ಫ್ಯಾನ್ಸ್ ಗಳನ್ನು ಥ್ರಿಲ್ ಮಾಡಿತ್ತು. ರಕ್ತಚಂದನದ ಮರಗಳನ್ನು ಸಾಗಿಸುವ ಅಡ್ವೈಂಚರ್ ಸಫಾರಿಯ ಹಾಗೆ ಕಾಡಿನಲ್ಲಿ ಚಿತ್ರೀಕರಣಗೊಂಡ ʼಪಷ್ಪರಾಜʼನ ಸಾಹಸ, ಇನ್ನಷ್ಟು ಬೆಳೆದು, ಅಬ್ಬರದೊಂದಿಗೆ ʼಪುಷ್ಪ: ದಿ ರೂಲ್ʼ ಎರಡನೇ ಭಾಗವಾಗಿ ಬರಲಿದೆ. ಮುಂದುವರೆದ ಭಾಗದಲ್ಲಿ ಭನ್ವರ್ ಸಿಂಗ್ ಶೇಖಾವತ್ (ಫಾಹದ್ ಫಾಸಿಲ್ ) ಪುಷ್ಪರಾಜ್ (ಅಲ್ಲು ಅರ್ಜುನ್) ಅವರ ಮುಖಾಮುಖಿ ಇರಲಿದೆ.
ಮೊದಲ ಭಾಗಕ್ಕಿದ್ದ ಹೈಪ್ ಎರಡನೇ ಭಾಗಕ್ಕೂ ಅಷ್ಟೇ ಇದೆ. ಸಿನಿಮಾದ ಅಪ್ಡೇಡ್ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಎಲ್ಲಿಯವರೆಗೆ ಅಂದರೆ ಕಾದು ಕಾದು ಅಭಿಮಾನಿಗಳು ಈಗ ರಸ್ತೆಗೆ ಇಳಿದಿದ್ದಾರೆ.
ʼಪುಷ್ಪ: ದಿ ರೂಲ್ʼ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆದಿದೆ. ಸಿನಿಮಾದಲ್ಲಿ ಅಲ್ಲು ಲುಕ್ ಹೇಗಿರಲಿದೆ. ಕಥೆ ಹೇಗಿರಬಹುದು. ಯಾವೆಲ್ಲಾ ಹೊಸ ಪಾತ್ರಗಳು ಇರಲಿವೆ ಅನ್ನೋದು ಅಭಿಮಾನಿಗಳ ಕಾತುರದ ಪ್ರಶ್ನೆ ಇದನ್ನೇ ಕೇಳುತ್ತಾ ನಮಗೆ ಪುಷ್ಪ -2 ಸಿನಿಮಾದ ಅಪ್ಡೇಟ್ ಬೇಕೆಂದು ಬ್ಯಾನರ್ ಹಿಡಿದು ಬೀದಿಗೆ ಇಳಿದಿದ್ದಾರೆ.
ಖ್ಯಾತ ಸಿನಿಮಾ ಟ್ರ್ಯಾಕರ್, ಪತ್ರಕರ್ತ ರಮೇಶ್ ಬಾಲಾ ಅವರು ಅಭಿಮಾನಿಗಳ ಈ ರೀತಿಯ ಬೇಡಿಕೆಯ ಕುರಿತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ ಯುಎಇನಲ್ಲಿ ʼಪುಷ್ಪ-2ʼ ಸಿನಿಮಾದ ಅಪ್ಡೇಟ್ ಗಾಗಿ ಬ್ಯಾನರ್ ಹಿಡಿದ ಅಭಿಮಾನಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸದ್ಯ ಪುಷ್ಪ -2 ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
After the success of #PushpaTheRise , the cult of restless #AlluArjun fans have taken to the streets asking for an update on the sequel! This rage amongst fans is absolutely fantastic, a phenomena never witnessed before! The fervour and the excitement in their voices was loud.. pic.twitter.com/Ayu1F4piBj
— Ramesh Bala (@rameshlaus) November 15, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.