ಬಸಳೆ ಸೊಪ್ಪಿನ ಪತ್ರೊಡೆ ತಿಂದಿದ್ದೀರಾ? ಏನು ರುಚಿ ಕಣ್ರೀ…
ಶ್ರೀರಾಮ್ ನಾಯಕ್, Nov 18, 2022, 5:18 PM IST
ಪತ್ರೊಡೆ ಅಂದ ತಕ್ಷಣ ನೆನಪಾಗೋದು ಆಷಾಢ ಮಾಸ ಅಥವಾ ಆಟಿ ತಿಂಗಳಲ್ಲಿ ಮಾಡುವಂತಹ ಸಾಂಪ್ರದಾಯಕವಾದ ತಿನಿಸು. ಮೊದಲೆಲ್ಲಾ ಆಟಿ ತಿಂಗಳಲ್ಲಿ ಮಾತ್ರ ಮಾಡುತ್ತಿದ್ದರು. ಪ್ರತಿಯೊಬ್ಬರ ಮನೆಯಲ್ಲಿ ಕೂಡ ಒಂದು ದಿನ ಆದರೂ ಪತ್ರೊಡೆ ಮಾಡುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನ ಹೊಸ-ಹೊಸ ರೀತಿಯಲ್ಲಿ ಪ್ರಯತ್ನ ಪಡುವವರು ಅನೇಕರು ಇರುತ್ತಾರೆ. ಕೆಸುವಿನ ಪತ್ರೊಡೆಯಂತೆ ತೊಂಡೆ ಸೊಪ್ಪು, ಮೆಂತೆ ಸೊಪ್ಪು, ಪಾಲಕ್ ಸೊಪ್ಪು, ಬಾಳೇ ಹೂವಿನಿಂದ ಕೂಡ ಪತ್ರೊಡೆ ಮಾಡಬಹುದು.ಆದರೆ ಹೊಸ ರೀತಿಯಲ್ಲಿ ಬಸಳೆ ಸೊಪ್ಪಿನಿಂದ ಪತ್ರೊಡೆ ಮಾಡುವ ರೆಸಿಪಿಯನ್ನು ನಾವಿಂದು ತಿಳಿದುಕೊಳ್ಳೋಣ…
ಬಸಳೆ ಸೊಪ್ಪಿನಲ್ಲಿ ಹೇರಳವಾದ ವಿಟಮಿನ್. ಅದೇ ರೀತಿ ಕ್ಯಾಲ್ಸಿಯಂ, ಮೆಗ್ನೀಷಿಯಂ ಮುಂತಾದ ಎಲ್ಲಾ ಸರ್ವಗುಣ ಸಂಪನ್ನವಾಗಿರುವಂತಹ ಸೊಪ್ಪು ಅಂದರೆ ಅದುವೇ ಬಸಳೆ ಸೊಪ್ಪು. ಮಾತ್ರವಲ್ಲದೇ ಇದು ತಿನ್ನಲು ಬಹಳ ರುಚಿಯಾಗಿರುತ್ತದೆ ಹಾಗೂ ದೇಹದ ಆರೋಗ್ಯಕ್ಕೂ ಕೂಡ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು
ಬಸಳೆ ಸೊಪ್ಪು(ಎಲೆ)- 20ರಿಂದ 30, ಬೆಳ್ತಿಗೆ ಅಕ್ಕಿ-3ಕಪ್, ಒಣಮೆಣಸು-15, ಕೊತ್ತಂಬರಿ-2ಚಮಚ, ಜೀರಿಗೆ-ಅರ್ಧ ಚಮಚ, ಹುಣಸೇ ಹುಳಿ-ಸ್ವಲ್ಪ, ಬೆಲ್ಲ-ಸ್ವಲ್ಪ, ತೆಂಗಿನ ತುರಿ- 1ಕಪ್, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಬೆಳ್ತಿಗೆ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಕನಿಷ್ಠ ಒಂದು ಅಥವಾ ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿರಿ.ನಂತರ ನೆನೆ ಹಾಕಿದ ಅಕ್ಕಿ ಮತ್ತು ತೆಂಗಿನ ತುರಿ, ಒಣಮೆಣಸು , ಕೊತ್ತಂಬರಿ, ಜೀರಿಗೆ, ಹುಣಸೇ ಹುಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ಜಾಸ್ತಿ ನೀರು ಸೇರಿಸದೆ ಗಟ್ಟಿ ಮಸಾಲೆ ರುಬ್ಬಿರಿ. ಮಸಾಲೆ ಜಾಸ್ತಿ ತೆಳುವಾಗಬಾರದು. ನಂತರ ಬಸಳೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಹಿಟ್ಟಿಗೆ ಅಂದರೆ ಮಸಾಲೆಗೆ ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ ತದನಂತರ ಬಾಡಿಸಿದ ಬಾಳೆ ಎಲೆಯಲ್ಲಿ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಮೂಕ್ಕಾಲು ಗಂಟೆಗಳ ಕಾಲ ಬೇಯಿಸಿ.ಈಗ ಆರೋಗ್ಯಕರವಾದ ಬಸಳೆ ಪತ್ರೊಡೆ ಸವಿಯಲು ಸಿದ್ಧ.
ಶ್ರೀರಾಮ್ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.