ಏಷ್ಯನ್ ಏರ್‌ಗನ್: ಭಾರತಕ್ಕೆ 25 ಚಿನ್ನ
Team Udayavani, Nov 18, 2022, 10:38 PM IST
ಹೊಸದಿಲ್ಲಿ: ದಕ್ಷಿಣ ಕೊರಿಯಾದಲ್ಲಿ ನಡೆದ 15ನೇ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು 25 ಚಿನ್ನದ ಪದಕಗಳನ್ನು ಗೆದ್ದು ಪ್ರಭುತ್ವ ಸಾಧಿಸಿದೆ. ಕೂಟದ ಅಂತಿಮ ದಿನವಾದ ಶುಕ್ರವಾರ ಭಾರತ 2 ಚಿನ್ನಕ್ಕೆ ಗುರಿ ಇರಿಸಿತು.
ಮನು ಬಾಕರ್-ಸಮ್ರಾಟ್ ರಾಣಾ ಜೂನಿಯರ್ ವಿಭಾಗದ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ತಂಡ ಸ್ಪರ್ಧೆಯಲ್ಲಿ ಹಾಗೂ ರಿದಮ್ ಸಂಗ್ವಾನ್-ವಿಜಯವೀರ್ ಸಿಧು ಇದೇ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಬಂಗಾರ ಗೆದ್ದರು.
ಮನು ಬಾಕರ್-ಸಮ್ರಾಟ್ ರಾಣಾ ಫೈನಲ್‌ನಲ್ಲಿ ಉಜ್ಬೆಕಿಸ್ಥಾನದ ನಿಗಿನಾ ಸೈಧ್ಕುಲೋವಾ-ಮುಹಮ್ಮದ್ ಕಮಲೋವ್ ವಿರುದ್ಧ 17-3 ಅಂತರದ ಭಾರೀ ಗೆಲುವು ಒಲಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ ಉಜ್ಬೆಕಿಸ್ಥಾನದ ಜೋಡಿ ಪ್ರಥಮ, ಭಾರತದ ಜೋಡಿ ದ್ವಿತೀಯ ಸ್ಥಾನಿಯಾಗಿತ್ತು (579-578). ಕಳೆದ 8 ದಿನಗಳ ಕಾಲ ಸಾಗಿದ ಈ ಕೂಟದ 28 ವಿಭಾಗಗಳ ಸ್ಪರ್ಧೆಯಲ್ಲಿ ಭಾರತ 25ರಲ್ಲಿ ಮೇಲುಗೈ ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.