ಆಮ್ ಆದ್ಮಿ ಪಕ್ಷ ‘ಸ್ಪಾ ಮತ್ತು ಮಸಾಜ್ ಪಾರ್ಟಿ’: ಬಿಜೆಪಿ, ಕಾಂಗ್ರೆಸ್ ಆಕ್ರೋಶ
ಕೇಜ್ರಿವಾಲ್ ಈಗ ಎಲ್ಲಿ ಅಡಗಿದ್ದಾರೆ...
Team Udayavani, Nov 19, 2022, 2:24 PM IST
ನವದೆಹಲಿ: ಎಎಪಿ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದು, ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಅವರು ತಮ್ಮ ಜೈಲಿನ ಸೆಲ್‌ನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಮತ್ತು ಸಂದರ್ಶಕರನ್ನು ಸ್ವೀಕರಿಸುತ್ತಿರುವ ವಿಡಿಯೋಗಳ ಕುರಿತು ಅವರ ಮೌನವನ್ನು ಪ್ರಶ್ನಿಸಿದ್ದಾರೆ.
ಆಮ್ ಆದ್ಮಿ ಪಕ್ಷ ‘ಸ್ಪಾ ಮತ್ತು ಮಸಾಜ್ ಪಾರ್ಟಿ’ಯಾಗಿ ಮಾರ್ಪಟ್ಟಿದೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಉಲ್ಲೇಖಿಸಿ ಜೈನ್ ಅವರ ನಡವಳಿಕೆಯನ್ನು ವಿವರಿಸುವಂತೆ ಕೇಜ್ರಿವಾಲ್ ಅವರಿಗೆ ಸವಾಲು ಹಾಕಿದ್ದಾರೆ.
“ಕೇಜ್ರಿವಾಲ್ ಈಗ ಎಲ್ಲಿ ಅಡಗಿದ್ದಾರೆ. ನಿಯಮಗಳು ಮತ್ತು ಜೈಲು ಕಾನೂನುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಜೈನ್ ತನ್ನ ಸೆಲ್‌ನಲ್ಲಿ ಮಸಾಜ್ ಮಾಡುವುದನ್ನು ಮತ್ತು ಸಂದರ್ಶಕರನ್ನು ಭೇಟಿಯಾಗುವುದನ್ನು ಕಾಣಬಹುದು. ಜೈಲಿನಲ್ಲಿರುವ ಈ ವಿವಿಐಪಿ ಸಂಸ್ಕೃತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’ ಎಂದು ಭಾಟಿಯಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೇಜ್ರಿವಾಲ್ ಅವರು ಜೈನ್ ಅವರನ್ನು ಐದು ತಿಂಗಳಿನಿಂದ ಜೈನ್‌ರನ್ನು ಸಚಿವ ಸ್ಥಾನದಿಂದ ತೆಗೆದುಹಾಕಿಲ್ಲ ಎಂದು ಅವರು ಹೇಳಿದರು.
ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈನ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ಸಚಿವರು ಮಸಾಜ್ ಪಡೆಯುತ್ತಿದ್ದಾರೆ ಮತ್ತು ಜೈಲಿನಲ್ಲಿ ಇತರ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ ಎಂದು ಸಂಸ್ಥೆ ಈ ತಿಂಗಳ ಆರಂಭದಲ್ಲಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಜೈನ್ ಸಂದರ್ಶಕರನ್ನು ಭೇಟಿಯಾದ ಮತ್ತು ಅವರ ಜೈಲು ಕೊಠಡಿಯಲ್ಲಿ ಅವರೊಂದಿಗೆ ಚರ್ಚೆ ನಡೆಸುತ್ತಿರುವ ವಿಡಿಯೋ ಸಾಕ್ಷ್ಯವನ್ನು ತಿರುಚಲಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ ಎಂದು ಭಾಟಿಯಾ ಆರೋಪಿಸಿದ್ದಾರೆ.
ಕೇಜ್ರಿವಾಲ್ ಸಂಪುಟದ ಸಚಿವರಿಗೆ ಜೈಲಿನಲ್ಲಿ ವಿಐಪಿ ಚಿಕಿತ್ಸೆ ಸಿಗುತ್ತಿದೆ. ಮಸಾಜ್, ಬಿಸ್ಲೇರಿ ನೀರು, ಆರಾಮದಾಯಕ ಹಾಸಿಗೆ.ಬಹಳ ಮೋಜು ಮಸ್ತಿ…ಇತ್ತೀಚೆಗೆ ಈ ಸಚಿವರನ್ನು ಭಗತ್ ಸಿಂಗ್ ಎಂದು ಕರೆಯಲಾಗುತ್ತಿತ್ತು. ಇದು ಲಜ್ಜೆಗೆಟ್ಟದ್ದು” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
केजरीवाल के मंत्री को जेल में VIP ट्रीटमेंट मिल रहा है। मसाज, बिसलेरी का पानी, आरामदायक बिस्तर।
खूब मौज है…
पिछले दिनों इसी मंत्री को भगत सिंह बताया जा रहा था। हद बेशर्मी है। pic.twitter.com/Brw5p8ecUF
— Congress (@INCIndia) November 19, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.