![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 19, 2022, 4:38 PM IST
ಸಾಲಿಗ್ರಾಮ: ಮೈಸೂರು ಚಾಮರಾಜನಗರ ಎರಡೂ ಜಿಲ್ಲೆಗಳಿಂದ 1,300 ಕೋಟಿ ರೂ. ಬೆಳೆ ಸಾಲ ನೀಡಿದ್ದು, ಕೆ.ಆರ್.ನಗರ, ಸಾಲಿಗ್ರಾಮ ತಾಲೂಕಿನಿಂದ 160 ಕೋಟಿ ರೂ. ವಿತರಿಸಲಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‌ಗೌಡ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿಯ ಚಿಬುಕಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ.ನ ಕೃಷಿ ಪತ್ತಿನ ಸಹಕಾರ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಡಿಸಿಸಿ ಬ್ಯಾಂಕ್ ರೈತರದ್ದು, ಜಿಲ್ಲೆಯಲ್ಲಿ 1 ಲಕ್ಷ ರೈತ ಕುಟುಂಬಗಳಿಗೆ ಸಾಲ ವಿತರಣೆ ಮಾಡಲಾಗಿದೆ. ಎರಡು ತಾಲೂಕಿನಿಂದಲೂ ಇದುವರೆಗೆ 81 ಕೋಟಿ ರೂ. ಬೆಳೆ ಸಾಲ ನೀಡಲಾಗುತ್ತಿತ್ತು. ಆದರೆ, ನಮ್ಮ ಅವಧಿಯಲ್ಲಿ 160 ಕೋಟಿ ರೂ. ದಾಟಿದ್ದು, ಇದೀಗ ಜಿಲ್ಲೆಯಲ್ಲಿ 2.5 ಕೋಟಿ ರೂ. ಅನ್ನು ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಕಟ್ಟಡಗಳಿಗೆ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಮಹಿಳಾ ಸ್ವಸಹಾಯ ಸಂಘಗಳು ಖಾಸಗಿಯವರ ಬಳಿ ಶೇ.26 ಬಡ್ಡಿ ದರಕ್ಕೆ ಸಾಲ ಪಡೆಯುತ್ತಿದ್ದು, ನಮ್ಮ ಸಹಕಾರ ಸಂಘಗಳಲ್ಲಿ ಶೇ.12 ಬಡ್ಡಿ ದರದಲ್ಲಿ ಸಾಲ ಪಡೆದರೆ ಉತ್ತಮ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಇನ್ನು ತಗ್ಗಿಸಲಾಗುವುದು. ಅಲ್ಲದೆ, ಸರ್ಕಾರ ಕೃಷಿ ಸಾಲಕ್ಕೆ ನಿಗದಿ ಮಾಡುವ ಹಣಕಾಸಿನ ಪ್ರಮಾಣ ತೀರಾ ಕಡಿಮೆ ಇದ್ದು, ಈ ಬಗ್ಗೆ ಸಹಕಾರ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.
ಭೂಮಿಪೂಜೆ ನೆರವೇರಿಸಿ ಶಾಸಕ ಸಾ.ರಾ. ಮಹೇಶ್ ಮಾತನಾಡಿ, ರೈತರು ಸಹಕಾರ ಸಂಘಗಳನ್ನು ತಮ್ಮದು ಎಂಬ ಭಾವನೆಯಿಂದ ಸಾಲ ಪಡೆಯಲು ಬಂದರೆ ಕಾರ್ಯದರ್ಶಿಗಳು ಅವರಿಗೂ ಮೋಸ ಮಾಡುತ್ತಿದ್ದು, ಮಿಲೇì, ಹರದನಹಳ್ಳಿ ಸಂಘಗಳಲ್ಲಿ ಇಂತಹ ಅಕ್ರಮಗಳು ನಡೆದಿರುವುದು ಬೇಸರದ ವಿಚಾರವಾಗಿದ್ದು, ಸಂಘಗಳ ಕಾರ್ಯದರ್ಶಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಸಂಘಗಳು ಬೆಳವಣಿಗೆ ಹೊಂದಲು ಸಹಕಾರಿಯಾಗಲಿದೆ ಎಂದು ಕಿವಿಮಾತು ಹೇಳಿದರು.
ರಾಜಕಾರಣವನ್ನು ಬಿಟ್ಟು ಸಹಕಾರ ಸಂಘಗಳು ರೈತರ ಏಳಿಗೆಗೆ ದುಡಿಯಬೇಕಿದೆ. ಚಿಬುಕಹಳ್ಳಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರೂ. ನೀಡುತ್ತೇನೆ. ಜೊತೆಗೆ ಸಹಕಾರ ಬಂಧುಗಳು ನಿಮ್ಮ ಆಶೋತ್ತರಗಳನ್ನು ಕಾಪಾಡುವ ಪ್ರಾದೇಶಿಕ ಪಕ್ಷ ಹಾಗೂ ರೈತರ ಬಗ್ಗೆ ಕಾಳಜಿ ಇರುವ ನಾಯಕರನ್ನು ಚುನಾವಣೆಗಳಲ್ಲಿ ಗೆಲ್ಲಿಸಿದರೆ ನಿಮಗೆ ಅದೇ ಸಹಕಾರಿಯಾಗಲಿದ್ದು, ಹರೀಶ್‌ಗೌಡ ಅವರು ಸಾಕಷ್ಟು ಸಹಕಾರಿ ಆಡಳಿತದಲ್ಲಿ ನುರಿತು ಜಿಲ್ಲೆಯ ಹೆಸರನ್ನು ಇಂದು ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾಗುವ ಮೂಲಕ ರಾಜ್ಯದೆತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಹೇಳಿದರು.
ಸಂಘದ ನೂತನ ಕಟ್ಟಡಕ್ಕೆ ಉಚಿತವಾಗಿ ಜಾಗ ನೀಡಿದ ಜಿಪಂ ಮಾಜಿ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ದ್ವಾರಕೀಶ್, ಸಂಘದ ಅಧ್ಯಕ್ಷ ಗಣೇಶ್, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಚನ್ನಬಸಪ್ಪ, ಗ್ರಾಪಂ ಅಧ್ಯಕ್ಷೆ ಶೋಭಾರಾಣಿ, ಜೆಡಿಎಸ್ ಮುಖಂಡರಾದ ಮಧುಚಂದ್ರ, ಶ್ರೀರಾಂಪುರ ಸಂತೋಷ್, ಬೆಣಗನಹಳ್ಳಿ ಪ್ರಸನ್ನ, ರಮೇಶ್, ತಿಮ್ಮಗೌಡ, ಸಿ.ಬಿ.ಲೋಕೇಶ್, ಧರ್ಮ, ಸಹಕಾರ ಅಭಿವೃದ್ಧಿ ಅಧಿಕಾರಿ ರವಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರತಾಪ್, ಸಂಘದ ಉಪಾಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕರಾದ ಜಯಣ್ಣ, ವೆಂಕಟೇಶ, ಮಹೇಶ್, ಅಶೋಕ, ಗೋವಿಂದರಾಜು, ಶ್ವೇತಾ, ತಮ್ಮೇಗೌಡ, ನಿಂಗರಾಜು, ಸಣ್ಣರಾಮಯ್ಯ, ಮೇಲ್ವಿಚಾರಕರಾದ ಸತೀಶ್, ಸುಧೀರ್, ಸಂಘದ ಸಿಇಒ ಕೃಷ್ಣೇಗೌಡ ಹಾಜರಿದ್ದರು.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.