100, 200 ರೂ. ಅಲ್ಲ ಸ್ವಾಮಿ ಗ್ರಾಹಕನಿಗೆ ಬರೋಬ್ಬರಿ 1.36 ಕೋಟಿ ರೂ. ಬಿಲ್ ಮಾಡಿದ ರೆಸ್ಟೋರೆಂಟ್!
Team Udayavani, Nov 19, 2022, 7:59 PM IST
ಅಬುಧಾಬಿ: ಫೈವ್ ಸ್ಟಾರ್ ರೆಸ್ಟೋರೆಂಟ್ ಹೋಗಿ ಭರ್ಜರಿಯಾಗಿ ಊಟ ಮಾಡಿ ಬಂದರೆ ಬಿಲ್ ಎಷ್ಟಾಗಬಹುದು. ಸಾವಿರ ರೂ.ಗಿಂತ ಹೆಚ್ಚಾಗಬಹುದು. ಆದರೆ ಇಲ್ಲೊಂದು ರೆಸ್ಟೋರೆಂಟ್ ಗ್ರಾಹಕನೊಬ್ಬನಿಗೆ ಕೋಟಿಗೂ ಅಧಿಕ ಬಿಲ್ ಮಾಡಿದೆ.!
ತನ್ನ ಅಡುಗೆಯ ಶೈಲಿಯಿಂದಲೇ ಫೇಮಸ್ ಆಗಿರುವ ಟರ್ಕಿಷ್ ನ ಚೇಫ್ ನಸ್ರ್ – ಎಟ್ ಗೋಕ್ಸೆ (ಸ್ಲಾಟ್ ಬೇ ಎಂದೇ ಖ್ಯಾತಿ) ತನ್ನ ರೆಸ್ಟೋರೆಂಟ್ ಗೆ ನಲ್ಲಿ ಆಹಾರ ಸೇವಿಸಿದ ಗ್ರಾಹಕನಿಗೆ 1.36 ಕೋಟಿ.ರೂ ಬಿಲ್ ಮಾಡಿದ್ದಾರೆ.
ಸ್ಲಾಟ್ ಬೇ ತನ್ನ ಅಬುಧಾಬಿಯ ರೆಸ್ಟೋರೆಂಟ್ ನಲ್ಲಿ ಗ್ರಾಹಕನಿಗೆ ಕೊಟ್ಟ ಬಿಲ್ ನ ಫೋಟೋವನ್ನು ಹಂಚಿಕೊಂಡಿದ್ದು, ದೊಡ್ಡ ಮೊತ್ತದ ಬಿಲ್ ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಎಲ್ಲರೂ ಒಮ್ಮೆ ದಂಗಾಗುವಂತೆ ಮಾಡಿದೆ.
ಬೋರ್ಡೆಕ್ಸ್, ಬಕ್ಲಾವಾ ಕಂಪೆನಿಯ ದುಬಾರಿ ವೈನ್ ಹಾಗೂ ಚಿನ್ನದ ಲೇಪಿತ (ಗೋಲ್ಡ್ ಸ್ಟಿಕ್) ಇಸ್ತಾಂಬುಲ್ ಮಾಂಸ ಮುಂತಾದ ಆಹಾರಗಳಿದ್ದವು. ಇದೆಲ್ಲದರ ಬಿಲ್ ಬರೋಬ್ಬರಿ 1.36 ಕೋಟಿ ರೂ.
ಬಿಲ್ ನ ಪ್ರತಿಯ ಫೋಟೋ ಹಂಚಿಕೊಂಡು ಸಾಲ್ಟ್ ಬೇ “ ಗುಣಮಟ್ಟ ಎಂದಿಗೂ ದುಬಾರಿಯಲ್ಲ”( “Quality never expensive”) ಎಂದು ಬರೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು “ನಾನು ಎಷ್ಟು ಶ್ರೀಮಂತನಾಗಿದ್ದರೂ ಪರವಾಗಿಲ್ಲ, ಈ ರೀತಿಯ ಹುಚ್ಚುತನವನ್ನು ನಾನು ಎಂದಿಗೂ ಬೆಂಬಲಿಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಇದೊಂದು ಹಗಲು ದರೋಡೆ ಎಂದು ಬರೆದುಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.