ಯುವಕರೇ ಕ್ರೀಡಾ ಚಟುವಟಿಕೆಯಲ್ಲಿ ಹೆಚ್ಚು ಪಾಲ್ಗೊಳ್ಳಿ
Team Udayavani, Nov 20, 2022, 3:03 PM IST
ದೇವನಹಳ್ಳಿ: ಯುವಕರು ದೃಢಸಂಕಲ್ಪ ಮಾಡಿ ನಿರಂತರ ಅಭ್ಯಾಸ, ಕಠಿಣ ಪರಿಶ್ರಮವಿದ್ದರೆ ಕ್ರೀಡೆಯಲ್ಲಿ ಸಾಧನೆ ಮಾಡಬಹುದು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆಟದ ಮೈದಾನದಲ್ಲಿ ವಹ್ನಿಕುಲ ತಿಗಳ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಗೆ ಯುವಕರು ಒಳಗಾಗುತ್ತಿದ್ದು, ಕ್ರೀಡಾ ಚಟುವಟಿಕೆಗಳಲ್ಲಿ ಯುವಕರು ಹೆಚ್ಚು ಪಾಲ್ಗೊಳ್ಳಬೇಕು. ಕ್ರೀಡೆಯನ್ನು ಆರೋಗ್ಯದ ಹಿತಕ್ಕಾಗಿ ಇಲ್ಲವೇ ದೇಹ ದಂಡಿಸಲು ಆಯ್ಕೆ ಮಾಡಿಕೊಳ್ಳುವ ಬದಲು ಸಾಧನೆಗೆ ರಹದಾರಿಯಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದರು.
ಕ್ರೀಡಾರಂಗದಲ್ಲಿ ಸಾಧನೆ ಮಾಡಿರುವ ಸಾಧಕರು ಯುವಕರಿಗೆ ಸ್ಫೂರ್ತಿಯಾಗಬೇಕು. ಆಟವಾಡುವಾಗ ಗೆಲುವಿನ ತುಡಿತದ ಜೊತೆಗೆ ಕ್ರೀಡಾಸ್ಫೂರ್ತಿ ಮೆರೆಯ ಬೇಕು. ತಿಗಳ ಸಮುದಾಯದ ಯುವಕರು ಕ್ರಿಕೆಟ್ ಪಂದ್ಯಾವಳಿಯನ್ನು ರೂಪಿಸಿ ಕ್ರೀಡಾಸ್ಪೂರ್ತಿ ಮೆರೆಯುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಯುವಕರನ್ನು ಸಂಘಟಿಸಲು ಅನುಕೂಲ: ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಜನರನ್ನು ಒಗ್ಗೂಡಿಸಿ ಆಚರಿಸಲು ಅನುಮತಿ ದೊರೆಯುತ್ತಿರಲಿಲ್ಲ. ಇದೀಗ ಕೊರೊನಾ ಇಳಿಮುಖ ಆಗಿರುವುದರಿಂದ ಕ್ರೀಡೆಗಳ ಕಡೆ ಯುವಕರು ಹೆಚ್ಚಿನ ಒಲವನ್ನು ಹೊಂದಿದ್ದು, ಕ್ರಿಕೆಟ್ ಟೂರ್ನಿಮೆಂಟ್ ಯುವಕರನ್ನು ಸಂಘಟಿಸಲು ಅನುಕೂಲ ಆಗುತ್ತದೆ. ಆರೋಗ್ಯ ಹೆಚ್ಚಿಸಿಕೊಳ್ಳಲು ಕ್ರೀಡೆಗಳ ಕಡೆ ಯುವಕರು ಮುಖ ಮಾಡಬೇಕು ಎಂದರು.
ಜ್ಞಾಪಕಶಕ್ತಿ ವೃದ್ಧಿ: ಕ್ರೀಡೆ ಯುವಕರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಆಗಲಿದೆ. ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು.ಇತ್ತೀಚಿನ ದಿನಗಳಲ್ಲಿ ಮೊಬೈಲ್, ಗೇಮ್, ವಾಟ್ಸಾಪ್, ಪೇಸ್‌ಬುಕ್‌ನಲ್ಲಿ ಯುವಕರು ತಲ್ಲೀನರಾಗಿದ್ದಾರೆ. ಅದನ್ನು ಬಿಟ್ಟು ಕ್ರೀಡಾಚಟುವಟಿಕೆಗಳ ಕಡೆ ಹೆಚ್ಚು ಗಮನ ಕೊಡಬೇಕು. ಕ್ರೀಡಾಚಟುವಟಿಕೆಗಳು ಯುವಕರ ಸದೃಢ ಆರೋಗ್ಯದ ಜೊತೆಗೆ ಜ್ಞಾಪಕಶಕ್ತಿಯನ್ನು ವೃದ್ಧಿಸಲು ಸಹಕಾರಿ ಆಗುತ್ತದೆ ಎಂದರು.
ತಿಗಳ ಸಮುದಾಯ ಶ್ರಮಜೀವಿಗಳು: ಮೌಕ್ತಿಕಾಂಬ ದೇವಾಲಯದ ಅಧ್ಯಕ್ಷ ಶಿವನಾಪುರ ವಿಜಯಕುಮಾರ್ ಮಾತನಾಡಿ, ತಿಗಳ ಸಮಾಜದ ಯುವಕರು ವಹ್ನಿಕುಲ ತಿಗಳ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗಳನ್ನು ಮಾಡಿ ಯುವಕರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ತಿಗಳ ಸಮುದಾಯ ಶ್ರಮಜೀವಿಗಳು. ಇರುವ ಭೂಮಿಯಲ್ಲಿ ತರಕಾರಿ ಹಣ್ಣು, ಹೂಗಳನ್ನು ನೀಡುತ್ತಿದೆ. ಸ್ಪರ್ಧಾತ್ಮಕ ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು. ಆದಾಗ ಮಾತ್ರ ನಿಮ್ಮ ಜೀವನದ ಸಮಗ್ರ ಸಾಧಿಸಬಹುದು ಎಂದು ಹೇಳಿದರು.
ತಾಲೂಕು ತಿಗಳ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಕರವೇ(ಚಲಪತಿ ಬಣದ)ರಾಜ್ಯ ಗೌರವಾಧ್ಯಕ್ಷ ಚಂದ್ರಶೇಖರ್, ಮೌಕ್ತಿಕಾಂಬ ದೇವಾಲಯದ ಉಪಾಧ್ಯಕ್ಷ ರಾಮಚಂದ್ರ, ದೇವಾಸ್ಥಾನದ ಪೂಜಾರಿ ರವಿಕುಮಾರ್, ಮುಖಂಡ ಡಾ.ವೆಂಕಟರಾಜು, ಮುನಿರಾಜು, ಗೋಪಾಲಪ್ಪ, ವಿಜಯಪುರ ಮುನಿವೀರಣ್ಣ, ಮುನೀಂದ್ರ, ಮಂಜುನಾಥ್, ವಸಂತ್, ಮುನಿರಾಜು, ನವೀನ್, ಕಿಶೋರ್, ಪಾಂಡು, ಹರೀಶ್, ಮುನಿವೆಂಕಟಪ್ಪ ಹಾಗೂ ಯುವಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.