14 ತಿಂಗಳಲ್ಲೇ ಎಸಿ-3 ಎಕಾನಮಿ ಪ್ರಯಾಣಕ್ಕೆ ಬ್ರೇಕ್! ಭಾರತೀಯ ರೈಲ್ವೆ ನಿರ್ಧಾರ
Team Udayavani, Nov 21, 2022, 7:25 AM IST
ನವದೆಹಲಿ: ರೈಲಿನಲ್ಲಿ ಎಸಿ-3 ಎಕಾನಮಿ(3ಇ) ಎಂಬ ಹೊಸ ದರ್ಜೆಯನ್ನು ಪರಿಚಯಿಸಿದ ಕೇವಲ 14 ತಿಂಗಳಲ್ಲೇ ಅದನ್ನು ಸ್ಥಗಿತಗೊಳಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. 3ಇ ದರ್ಜೆಯನ್ನು ಎಸಿ-3ಯೊಂದಿಗೆ ವಿಲೀನಗೊಳಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ. ವಿಲೀನಗೊಂಡ ಬಳಿಕ ಎಸಿ-3 ದರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
2021ರ ಸೆಪ್ಟೆಂಬರ್‌ನಲ್ಲಿ ರೈಲ್ವೆಯು 3ಇ ಎಂಬ ಹೊಸ ಬೋಗಿಯನ್ನು ಪರಿಚಯಿಸಿತ್ತು. ಅಲ್ಲದೇ, ಈ ಬೋಗಿಯಲ್ಲಿನ ಪ್ರಯಾಣ ದರವು ಎಸಿ-3 ಕೋಚ್‌ಗಳ ದರಕ್ಕಿಂತ ಶೇ.6-8ರಷ್ಟು ಕಡಿಮೆಯಿರಲಿದೆ ಎಂದೂ ಹೇಳಿತ್ತು. ಅದರಂತೆ, ಪ್ರಯಾಣಿಕರು ಕೂಡ “3ಇ’ ಎಂಬ ಪ್ರತ್ಯೇಕ ಕೆಟಗರಿಯಡಿ ಎಸಿ-3 ಎಕಾನಮಿ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಿದ್ದರು. ಆದರೆ, ಇನ್ನು ಮುಂದೆ ಈ ಕೆಟಗರಿ ಲಭ್ಯವಿರುವುದಿಲ್ಲ. ಮುಂದಿನ 4 ತಿಂಗಳಲ್ಲಿ 3ಇ ಯನ್ನು ಎಸಿ-3ಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಎಸಿ-3 ಕೋಚ್‌ಗಳಿಗೆ ಹೋಲಿಸಿದರೆ ಎಸಿ-3 ಎಕಾನಮಿ ಕೋಚ್‌ಗಳಲ್ಲಿ ಲೆಗ್ ಸ್ಪೇಸ್(ಕಾಲಿಡುವಂಥ ಸ್ಥಳ) ಕಡಿಮೆಯಿತ್ತು. ಆದರೆ, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಸಾಮಾನ್ಯ ಎಸಿ-3 ಕೋಚ್‌ಗಳಲ್ಲಿ 72 ಬರ್ತ್‌ಗಳಿದ್ದರೆ, ಎಸಿ-3 ಎಕಾನಮಿಯ ಪ್ರತಿ ಬೋಗಿಯಲ್ಲೂ 83 ಬರ್ತ್‌ಗಳಿದ್ದವು.
ಇದನ್ನೂ ಓದಿ : ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರಿಖ್ ಚಿಕ್ಕಮ್ಮ ಮಂಗಳೂರಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.