ಈಗ ಭರ್ಜರಿ ಚಳಿ ಸರದಿ; ಗಡ ಗಡ ನಡುಗುತ್ತಿದೆ ಭಾರತ
Team Udayavani, Nov 23, 2022, 8:05 AM IST
ವರ್ಷವಿಡೀ ಮಳೆ ಸುರಿದಾಯ್ತು… ಈಗ ಭರ್ಜರಿ ಚಳಿ ಸರದಿ. ದೇಶದ ಪ್ರಮುಖ ನಗರಗಳಲ್ಲಿ ಹಿಂದೆಂದೂ ಕಾಣದಂಥ ಚಳಿ ಕಾಣಿಸುತ್ತಿದೆ. ಬೆಂಗಳೂರಿನಲ್ಲಿ ದಶಕದಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದ್ದರೆ, ದೆಹಲಿ, ಮುಂಬೈನಲ್ಲೂ ಇಂಥವೇ ದಾಖಲೆಗಳಾಗಿವೆ. ಇದು ಕೇವಲ ಮಹಾನಗರಗಳಷ್ಟೇ ಅಲ್ಲ, ದೇಶದ ಇತರೆಡೆಯೂ ಇಂಥದ್ದೇ ಸ್ಥಿತಿ ಇದೆ.
ಬೆಂಗಳೂರು
13.9 ಡಿಗ್ರಿ ಸೆಲ್ಸಿಯಸ್
ಕಳೆದ 10 ವರ್ಷಗಳಲ್ಲೇ ನವೆಂಬರ್ ತಿಂಗಳಲ್ಲಿ ಅತ್ಯಂತ ಕನಿಷ್ಠ ತಾಪಮಾನವಿದು. ಅಂದ ಹಾಗೆ ಇದು ಸೋಮವಾರದ ತಾಪಮಾನ. ಮಂಗಳವಾರವೂ ಇದೇ ರೀತಿಯ ವಾತಾವರಣವಿತ್ತು. ಎರಡೂ ದಿನಗಳೂ ಮಂಜು ಕವಿದ ವಾತಾವರಣದಂತಿತ್ತು. 2012ರ ನವೆಂಬರ್ 21ರಂದು 13.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಹಾಗೆಯೇ, ಬೆಂಗಳೂರಿನಲ್ಲಿ 1967ರ ನವೆಂಬರ್ 15ರಂದು ಶೇ.9.6ರಷ್ಟು ತಾಪಮಾನ ದಾಖಲಾಗಿತ್ತು. ಇದೇ ಇದುವರೆಗಿನ ದಾಖಲೆ. ಇನ್ನು ಇದೇ 26, 27 ಮತ್ತು 28ರಂದು ಮತ್ತೆ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಚಳಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಮಂಗಳವಾರ ಬೆಂಗಳೂರಿನಲ್ಲಿ ಕನಿಷ್ಠ 19.0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಗರಿಷ್ಠ 24 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು.
ನವದೆಹಲಿ
8.9 ಡಿಗ್ರಿ ಸೆಲ್ಸಿಯಸ್
ದೆಹಲಿಯಲ್ಲಿಯೂ ಸೋಮವಾರ ಮತ್ತು ಮಂಗಳವಾರದ ತಾಪಮಾನ ಮಬ್ಬುಕವಿದ ಹಾಗೆಯೇ ಇತ್ತು. ಅಲ್ಲದೆ, ಮಾಲಿನ್ಯ ಮಟ್ಟವೂ ಡೇಂಜರ್ ಎಂಬುವಷ್ಟರ ಮಟ್ಟಿಗೆ ಇದೆ. ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 9.0ಡಿಗ್ರಿ ಸೆಲ್ಸಿಯಸ್ ಇತ್ತು. ಈ ವಾರವಿಡೀ ಇದೇ ರೀತಿಯ ತಾಪಮಾನವಿರುವ ಸಾಧ್ಯತೆ ಇದೆ.
ಮುಂಬೈ
17 ಡಿಗ್ರಿ ಸೆಲ್ಸಿಯಸ್
ಮುಂಬೈನಲ್ಲಿ ಕಳೆದ 5 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಕನಿಷ್ಠ ತಾಪಮಾನ ಕಾಣಿಸಿಕೊಂಡಿದೆ. ಸೋಮವಾರ ಇಲ್ಲಿ 17 ಡಿಗ್ರಿ ಸೆಲ್ಸಿಯಸ್ ಚಳಿ ಇತ್ತು. 2017ರಿಂದ ಈಚೆಗೆ ಇದೇ ಅತ್ಯಂತ ಕಡಿಮೆ ತಾಪಮಾನ. ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಮುಂಬೈ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಮಂಗಳವಾರ ಮುಂಬೈನಲ್ಲಿ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬುಧವಾರವೂ ಹೆಚ್ಚು ಚಳಿ ಇರಲಿದೆ.
ಚೆನ್ನೈ
23 ಡಿಗ್ರಿ ಸೆಲ್ಸಿಯಸ್
ಕರಾವಳಿ ನಗರವಾಗಿರುವ ತಮಿಳುನಾಡು ರಾಜಧಾನಿ ಚೆನ್ನೈಗೂ ಚಳಿ ಕಾಟ ತಪ್ಪಿಲ್ಲ. ಇಲ್ಲಿ ಒಂದು ರೀತಿಯ ಮಂಜು ಮಸುಕಿದ ವಾತಾವರಣ ಕಂಡು ಬಂದಿದ್ದು, ಹಿಮ ಸುರಿದಂಥ ಅನುಭವವಾಗಿದೆ. ಮಂಗಳವಾರವೂ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾಣಿಸಿಕೊಂಡಿದೆ. ಇಲ್ಲಿ ಒಂದು ರೀತಿ ಮಳೆ ಬರುವ ಹಾಗೂ ಇದ್ದು, ಚಳಿಯ ಕಾರಣದಿಂದಾಗಿ ಸಂಚಾರಕ್ಕೂ ಕಷ್ಟವೆನಿಸುವ ವಾತಾವರಣ ಕಂಡು ಬಂದಿದೆ.
ಮಡಿಕೇರಿ
16 ಡಿಗ್ರಿ ಸೆಲ್ಸಿಯಸ್
ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿವೆತ್ತಿರುವ ಮಡಿಕೇರಿಯಲ್ಲಿಯೂ ಅತ್ಯಂತ ಚಳಿ ಕಾಣಿಸಿಕೊಂಡಿದೆ. ಇಲ್ಲಿ ಮಂಗಳವಾರ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾಣಿಸಿಕೊಂಡಿದೆ.
ಕರ್ನಾಟಕದ ಪ್ರಮುಖ ನಗರಗಳ ತಾಪಮಾನ(ಕನಿಷ್ಠ)
ಕಲಬುರಗಿ – 21 ಡಿಗ್ರಿ ಸೆಲ್ಸಿಯಸ್
ಮಂಗಳೂರು – 24 ಡಿಗ್ರಿ ಸೆಲ್ಸಿಯಸ್
ಮೈಸೂರು – 19 ಡಿಗ್ರಿ ಸೆಲ್ಸಿಯಸ್
ಬೆಳಗಾವಿ – 19 ಡಿಗ್ರಿ ಸೆಲ್ಸಿಯಸ್
ಚಿತ್ರದುರ್ಗ – 19 ಡಿಗ್ರಿ ಸೆಲ್ಸಿಯಸ್
ಗದಗ – 21 ಡಿಗ್ರಿ ಸೆಲ್ಸಿಯಸ್
ಕಾರವಾರ – 25 ಡಿಗ್ರಿ ಸೆಲ್ಸಿಯಸ್
ಹುಬ್ಬಳ್ಳಿ – 21 ಡಿಗ್ರಿ ಸೆಲ್ಸಿಯಸ್
ಮಡಿಕೇರಿ – 16 ಡಿಗ್ರಿ ಸೆಲ್ಸಿಯಸ್
ದಾವಣಗೆರೆ – 21 ಡಿಗ್ರಿ ಸೆಲ್ಸಿಯಸ್
ಶಿವಮೊಗ್ಗ – 20 ಡಿಗ್ರಿ ಸೆಲ್ಸಿಯಸ್
ಕೋಲಾರ – 19 ಡಿಗ್ರಿ ಸೆಲ್ಸಿಯಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.