![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 23, 2022, 6:05 PM IST
ಮುಂಬಯಿ: ಅಜಯ್ ದೇವಗನ್ ಅವರ ʼದೃಶ್ಯಂ-2ʼ ಬಾಲಿವುಡ್ ನಲ್ಲಿ ಕಮಾಲ್ ಮಾಡುತ್ತಿದೆ. ಬಹು ಸಮಯದ ಬಳಿಕ ಬಿಟೌನ್ ನಲ್ಲಿ ಒಂದೊಳ್ಳೆ ಚಿತ್ರ ಬಂದಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಈ ನಡುವೆಯೇ ಚಿತ್ರದ ನಟಿ ಶ್ರೀಯಾ ಶರಣ್ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.
ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ವೇಳೆ ನಟಿ ಶ್ರೇಯಾ ಶರಣ್ ಅವರ ಗಂಡ ಆಂಡ್ರೇ ಕೊಸ್ಚೆವ್ ತುಟಿಗೆ ಮುತ್ತು ಕೊಟ್ಟಿದ್ದಾರೆ. ಈ ರೀತಿಯಾಗಿ ಮುತ್ತು ಕೊಟ್ಟಿದ್ದಕ್ಕೆ ಕೆಲವರು ಇದನ್ನು ರೊಮ್ಯಾಂಟಿಕ್ ಎಂದು ಕರೆದರು. ಆದರೆ ಮಾಧ್ಯಮದವರು ಹಾಗೂ ಹಲವಾರು ಮಂದಿ ಇರುವಾಗಲೇ ಈ ರೀತಿ ವರ್ತಿಸಿರುವುದಕ್ಕೆ ಅನೇಕರು ಶ್ರೇಯಾ ಶರಣ್ ದಂಪತಿಗೆ ಟ್ರೋಲ್ ಮಾಡಿದ್ದಾರೆ.
ಇದನ್ನು ಕೇಳಿ ಸುಮ್ಮನಿದ್ದ ನಟಿ ಶ್ರೇಯಾ ಶರಣ್ ಕೊನೆಗೂ ಮೌನ ಮುರಿದಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, “ಇದು ತುಂಬಾ ಹಾಸ್ಯಾಸ್ಪದ ವಿಷಯ. ಇದೊಂದು ಸಾಮಾನ್ಯ ಕಿಸ್.. ನನ್ನ ಖುಷಿಯ ಕ್ಷಣದಲ್ಲಿ ನನ್ನ ಗಂಡ ನನಗೆ ಕಿಸ್ ಕೊಟ್ಟಿದ್ದಾರೆ. ಇದೊಂದು ಸುಂದರ ಅನುಭವ. ನಮಗೆ ಗೊತ್ತಿಲ್ಲ ಈ ಕಾರಣಕ್ಕೆ ನಾವು ಯಾಕೆ ಟ್ರೋಲ್ ಆಗುತ್ತಿದ್ದೇವೆ ಎಂದು. ಇರಲಿ ಪರವಾಗಿಲ್ಲ. ನಾನು ಕೆಟ್ಟ ಕಮೆಂಟ್ಸ್ ಗಳನ್ನು ಓದುವುದಿಲ್ಲ. ಅದು ಅವರ ಕೆಲಸ ( ಟ್ರೋಲರ್) ನಾನು ಇದರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಲ್ಲ” ಎಂದಿದ್ದಾರೆ.
ಅವರಿಗೆ ಸಿನಿಮಾ ಇಷ್ಟವಾಗಿದೆ. ಇನ್ನೊಮ್ಮೆ ಸಿನಿಮಾವನ್ನು ನೋಡುವ ಎಂದಿದ್ದಾರೆ. ದೃಶ್ಯಂ -2 ಬಾಕ್ಸ್ ಆಫೀಸ್ ನಲ್ಲಿ 86.46 ಕೋಟಿಗೂ ಅಧಿಕ ಗಳಿಕೆಯನ್ನು ಕಂಡು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
View this post on Instagram
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.