ಆಧಾರ್ ಸುರಕ್ಷಿತವಾಗಿಟ್ಟುಕೊಳ್ಳಿ…ಕಳೆದು ಹೋದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ…
Team Udayavani, Nov 24, 2022, 9:30 AM IST
ಆಧಾರ್ ಕಳೆದಿದೆಯೇ ತಡಮಾಡಬೇಡಿ. ತತ್‌ಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.ಇಲ್ಲದಿದ್ದರೆ ದುರ್ಬಳಕೆ ಯಾದೀತು. ಇದಕ್ಕೆ ಸಾಕ್ಷಿ, ಇತ್ತೀಚೆಗೆ ಕರ್ನಾಟಕದಲ್ಲಿ ಕಂಡು ಬಂದಿರುವ ಕುಕ್ಕರ್ ಬಾಂಬ್ ಪ್ರಕರಣ. ಹಾಗಾದರೆ ಆಧಾರ್ ಅನ್ನು ಕಾಪಿಟ್ಟು ಕೊಳ್ಳುವುದು ಹೇಗೆ? ಕಳೆದು ಹೋದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ…
ಆಧಾರ್ ಕಳೆದು ಹೋಗಿದೆ. ಏನು ಮಾಡಬೇಕು?
ಆಧಾರ್ ಕಾರ್ಡ್ ಕಳೆದುಹೋಗಿದ್ದರೆ, ಮೊದಲು ಮಾಡಬೇಕಾದ ಕೆಲಸ ನಕಲಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡುವುದು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿಧಾನ ಮಾಡಲೇಬಾರದು. ಯುಐಡಿಎಐ ವೆಬ್‌ಸೈಟ್‌ಗೆ ಹೋಗಿ ನಕಲಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ. ಇಲ್ಲದಿದ್ದರೆ ನಿಮ್ಮ ಮನೆಯ ಹತ್ತಿರದ ನೋಂದಣಿ ಕೇಂದ್ರ, ಆಧಾರ್ ಸಹಾಯವಾಣಿಗೆ ಅರ್ಜಿ ಸಲ್ಲಿಕೆ ಮಾಡಿ.
ಆಧಾರ್ ಕಾರ್ಡ್‌ನ ರಕ್ಷಣೆ ಹೇಗೆ?
ಆಧಾರ್ ನಂಬರ್ ಅಥವಾ ಅದರಲ್ಲಿನ ಮಾಹಿತಿಗಳನ್ನು ಕಾಪಿಟ್ಟುಕೊಳ್ಳುವ ಸಲುವಾಗಿ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡುವುದು ಉತ್ತಮ. ಇದಕ್ಕಾಗಿ ಎಂಆಧಾರ್ ಎಂಬ ಆ್ಯಪ್ ಇದೆ. ಡೌನ್‌ಲೋಡ್ ಮಾಡಿಕೊಂಡು ಲಾಕ್ ಮಾಡಬಹುದು.
ಆಧಾರ್ ಒಟಿಪಿ ಶೇರ್ ಮಾಡಬೇಡಿ
ಆಧಾರ್ ಧೃಢೀಕರಣಕ್ಕಾಗಿ ಒಟಿಪಿ ತುಂಬಾ ಮುಖ್ಯ. ಹೀಗಾಗಿ ಯಾವುದೇ ಕಾರಣಕ್ಕೂ ಯಾರೇ ಕೇಳಿದರೂ ಆಧಾರ್ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಯಾರಿಗೂ ಫೋಟೋ ಕಾಪಿ ಕೊಡಬೇಡಿ
ವಿಳಾಸ ದೃಢೀಕರಣಕ್ಕಾಗಿ ನೀವು ಆಧಾರ್ ಫೋಟೋ ಕಾಪಿ ಕೊಡುತ್ತಿದ್ದೀರಾ? ಇನ್ನು ಮುಂದೆ ಕೊಡಬೇಡಿ. ಈ ಫೋಟೋಕಾಪಿಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಹೀಗಾಗಿ ಹಂಚಿಕೊಳ್ಳಬೇಡಿ. ಇದಕ್ಕೆ ಬದಲಾಗಿ ವಿಐಡಿ ಅಥವಾ ಮಾಸ್ಕ್ ಆಧಾರ್ ಬಳಸಿ.
ದೂರು ಕೊಡಿ
ಆಧಾರ್ ಕಾರ್ಡ್ ಕಳೆದು ಹೋದ ತತ್‌ಕ್ಷಣವೇ ಈ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಡಿ. ಇದರಿಂದ ದುರ್ಬಳಕೆ ತಪ್ಪಿಸಬಹುದು.
ವಿಐಡಿ ಬಳಸಿ
ಆಧಾರ್ ಸಂಖ್ಯೆ ಕೇಳಿದರೆ, ನಿಜವಾದ ಆಧಾರ್ ಸಂಖ್ಯೆ ನೀಡದೇ, ವಚ್ಯುìವಲ್ ಐಡಿ ಸಿಗುತ್ತದೆ. ಇದನ್ನು ಕೊಡಿ. ಇದು ಆಧಾರ್ ವೆಬ್‌ಸೈಟ್‌ನಲ್ಲಿ ಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.