ಒಂದೇ ಓವರ್ ನಲ್ಲಿ 7 ಸಿಕ್ಸರ್ ಹೊಡೆದ ಋತುರಾಜ್ ಗಾಯಕ್ವಾಡ್: ದ್ವಿಶತಕದ ಸಾಧನೆ
Team Udayavani, Nov 28, 2022, 1:26 PM IST
ಅಹಮದಾಬಾದ್: ದೇಶೀಯ ಕ್ರಿಕೆಟ್ ನ ನವತಾರೆ ಋತುರಾಜ್ ಗಾಯಕ್ವಾಡ್ ಅವರು ಮತ್ತೊಮ್ಮೆ ಮಿಂಚಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಅಜೇಯ ದ್ವಿಶತಕ ಬಾರಿಸಿದ್ದಾರೆ.
ಅಲ್ಲದೆ 49ನೇ ಓವರ್ ನಲ್ಲಿ ಏಳು ಸಿಕ್ಸರ್ ಬಾರಿಸಿದ ಋತುರಾಜ್ ಗಾಯಕ್ವಾಡ್ ಹೊಸ ದಾಖಲೆ ಬರೆದರು.
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ 50 ಓವರ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ 330 ರನ್ ಗಳಿಸಿತು. ನಾಯಕ ಋತುರಾಜ್ ಗಾಯಕ್ವಾಡ್ ಅಜೇಯ 220 ರನ್ ಗಳಿಸಿದರು.
ಇದನ್ನೂ ಓದಿ:ಶೃದ್ಧಾ ರೀತಿಯ ಮತ್ತೊಂದು ಕೇಸ್: ಹತ್ಯೆಗೈದು ಫ್ರಿಡ್ಜ್ ನಲ್ಲಿಟ್ಟಿದ್ದ ತಾಯಿ-ಮಗನ ಬಂಧನ
159 ಎಸೆತ ಎದುರಿಸಿದ ಋತುರಾಜ್ 16 ಸಿಕ್ಸರ್ ಮತ್ತು 16 ಬೌಂಡರಿ ನೆರವಿನಿಂದ ಅಜೇಯ 220 ರನ್ ಮಾಡಿದರು. ಶಿವ ಸಿಂಗ್ ಎಸೆದ 49 ನೇ ಓವರ್ ನಲ್ಲಿ 43 ರನ್ ಹರಿದು ಬಂತು. ಒಂದು ನೋ ಬಾಲ್ ಸಹಿತ ಶಿವ ಸಿಂಗ್ ಎಸೆದ ಏಳೂ ಎಸೆತಗಳನ್ನು ಋತುರಾಜ್ ಸಿಕ್ಸರ್ ಗಟ್ಟಿದರು.
#RuturajGaikwad the man with class made incredible 220* of just 159 with 16 sixes and 10 fours. And also made the world record by hitting 7 sixes in an over.
#csk #iplauction2023 #VijayHazareTrophy2022 pic.twitter.com/9zAAgJLX2j— Mahboob Khan (@Mahboob09835726) November 28, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.