ಕೋಡಿಮಠದಲ್ಲಿ ಲಕ್ಷ ದೀಪೋತ್ಸವ ಸಂಪನ್ನ
Team Udayavani, Nov 28, 2022, 4:53 PM IST
ಅರಸೀಕೆರೆ: ಮನುಷ್ಯನನ್ನು ಅಜ್ಞಾನದ ಅಂಧಃ ಕಾರದಿಂದ ಸುಜ್ಞಾನದ ಬೆಳಕಿನ ಕಡೆಗೆ ಕರೆದೊಯ್ಯುವ ಸಂಕೇತವಾಗಿ ಕಾರ್ತಿಕ ಮಾಸದಲ್ಲಿ ಮಠಮಾನ್ಯಗಳು ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ ಎಂದು ಭದ್ರಾವತಿ ತಾಲೂಕಿನ ಗೋಣಿಬೀಡು ಶೀಲ ಸಂಪಾದನ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹಾರನ ಹಳ್ಳಿ ಸುಕ್ಷೇತ್ರ ಕೋಡಿ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕಾರ್ತಿಕ ಮಾಸದ ಅಂಗವಾಗಿ ಏರ್ಪಡಿ ಸಿದ್ದ ಲಕ್ಷ ದೀಪೋತ್ಸವ ಸಮಾರಂಭದ ನೇತೃತ್ವ ವಹಿಸಿ ಶ್ರೀಗಳು ಆಶೀರ್ವಚನ ನೀಡಿ, ಆಧುನಿಕತೆ ಬೆಳೆದಂತೆ ಮನುಷ್ಯನಲ್ಲಿ ಸ್ವಾರ್ಥದ ಹೆಚ್ಚುತ್ತಿದ್ದು, ಸಮಾಜದಲ್ಲಿ ಮಾನವೀಯ ಮೌಲ್ಯಗಳು ಮಾಯವಾಗಿ, ಎಲ್ಲೆಡೆ ಅಶಾಂತಿ ವಾತವರಣ ಸೃಷ್ಟಿಯಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಆದಕಾರಣ ಮಠಮಾನ್ಯಗಳು ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮನುಷ್ಯನಲ್ಲಿನ ನಾನು ನನ್ನದು ಎನ್ನುವ ಅಜ್ಞಾನದ ಅಂಧಃಕಾರವನ್ನು ದೂರ ಮಾಡುವ ಮೂಲಕ ಸಮಾಜದಲ್ಲಿ ಸುಖ, ಶಾಂತಿ, ಸಮಾನತೆಯ ಸಹ ಬಾಳ್ವೆಯು ಎಲ್ಲರಲ್ಲಿ ಬೆಳೆಯಲು ಪ್ರೇರಕ ಶಕ್ತಿಯನ್ನು ನೀಡುವಂತಹ ಮಹತ್ಕಾರ್ಯ ಮಾಡುತ್ತಿರುವುದು ಅತ್ಯಂತ ಹರ್ಷದ ಸಂಗತಿಯಾಗಿದೆ ಎಂದು ಹೇಳಿದರು.
ಅಭಿವೃದ್ಧಿಗಾಗಿ ಶ್ರಮಿಸಿದ ಆತ್ಮ ತೃಪ್ತಿಯಿದೆ: ಸಮಾರಂಭದ ಉದ್ಘಾಟನೆ ನೆರವೇರಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ದೇಶದ ಅತ್ಯುನ್ನತ ರಾಜಕೀಯ ಕ್ಷೇತ್ರದ ನಾಯಕರಿಗೆ, ಖ್ಯಾತ ಉದ್ಯಮಿಗಳಿಗೆ ಹಾಗೂ ಕಲಾವಿದರಿಂದ ಮಾರ್ಗ ದರ್ಶನ ನೀಡಿರುವ ಇತಿಹಾಸ ಹೊಂದಿರುವ ಶ್ರೀ ಮಠದ ಶ್ರೀಗಳ ಆಶೀರ್ವಾದದಿಂದ ಕ್ಷೇತ್ರದ ಶಾಸಕ ನಾಗಿ 14 ವರ್ಷ ಪ್ರಾಮಾಣಿಕವಾಗಿ ಜನಸೇವೆ ಮಾಡುವ ಮೂಲಕ ಸರ್ವ ಜನಾಂಗದ ಶಾಂತಿ ತೋಟದಂತೆ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕ ವಾಗಿ ಶ್ರಮಿಸಿದ್ದೇನೆ ಎನ್ನುವ ಆತ್ಮತೃಪ್ತಿ ತಮ್ಮದಾಗಿದೆ ಎಂದು ಹೇಳಿದರು.
ಸಾಮರಸ್ಯ ಸಾರಿದ ಮಠ: ಸುಕ್ಷೇತ್ರ ಕೋಡಿಮಠ ಶ್ರೀಗಳ ಆಧ್ಯಾತ್ಮಿಕ ಚಿಂತನೆ ಜತೆಗೆ ಸಾಮಾಜಿಕ, ಶೈಕ್ಷಣಿಕ. ಕ್ಷೇತ್ರಗಳಿಗೆ ವಿಶೇಷ ಕೊಡುಗೆ ನೀಡುತ್ತ ಬಂದಿರುವುದು, ದೇಶ ವಿದೇಶದಲ್ಲಿ ಖ್ಯಾತಿಯನ್ನು ಪಡೆದಿದ್ದ ಶ್ರೀಗಳಲ್ಲಿನ ವಿಶಾಲ ಮನೋಭಾವನೆ, ಸರ್ವಧರ್ಮಿಯರನ್ನು ಸಾಮರಸ್ಯದ ಕೊಂಡಿಯಂತೆ ಬೆಸೆಯುವ ಮೂಲಕ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಜ್ಞಾನಜ್ಯೋತಿ ಅಂಧಕಾರ ದೂರ ಮಾಡಲಿ: ಕ್ಷೇತ್ರದ ಪೀಠಾಧ್ಯಕ್ಷರಾದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ ಧರ್ಮದಲ್ಲಿ ಶ್ರದ್ಧೆ, ಭಯ, ಭಕ್ತಿ ಹಾಗೂ ನಂಬಿಕೆ ಇಟ್ಟುಕೊಂಡು ಪ್ರತಿಯೊಬ್ಬರು ಜ್ಯೋತಿ ಬೆಳಗಿದಾಗ ಅವರ ಅಂತರಾತ್ಮದಲ್ಲಿರುವ ಅಂಧಕಾರವು ದೂರವಾಗುವ ಜತೆಗೆ ಜಗತ್ತಿನ ಅಂಧಕಾರವು ದೂರವಾಗಬೇಕೆಂಬ ಧರ್ಮ ಸಂದೇಶವನ್ನು ಮನುಕುಲಕ್ಕೆ ಸಾರುವುದೇ ಸುಕ್ಷೇತ್ರ ಕೋಡಿಮಠದ ಲಕ್ಷದೀಪೋತ್ಸವದ ಧಾರ್ಮಿಕ ಸಮಾರಂಭದ ಆಶಯವಾಗಿದೆ ಎಂದರು.
ವೇದಿಕೆಯಲ್ಲಿ ಶ್ರೀಗಳು, ಗಣ್ಯರ ಉಪಸ್ಥಿತಿ: ಧಾರ್ಮಿಕ ಸಮಾರಂಭದ ಸಾನ್ನಿಧ್ಯವನ್ನು ಕೊರಟಗೆರೆ ಸಿದ್ದರಬೆಟ್ಟದ ರಂಭಾಪುರಿ ಶಾಖಾ ಮಠದ ಶ್ರೀವೀರಭದ್ರ ಶಿವಾ ಚಾರ್ಯ ಶ್ರೀ ವಹಿಸಿದ್ದರು. ಸೊರಬ ಶ್ರೀ ಜಡೆಸಂಸ್ಥಾನ ಮಠದ ಡಾ.ಮಹಾಂತ ಶ್ರೀ, ಯಳನಡು ಸಂಸ್ಥಾನದ ಡಾ.ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಶ್ರೀ ಕೊಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಶ್ರೀ, ತಿಪಟೂರು ಷಡಾಕ್ಷರಿ ಮಠದ ರುದ್ರಮುನಿ ಶ್ರೀ, ಚಲನಚಿತ್ರ ನಟರಾದ ವಿಜಯ ರಾಘವೇಂದ್ರ ಮತ್ತು ಕೋಡಿಮಠದ ಉತ್ತರಾಧಿಕಾರಿಗಳಾದ ಚೇತನ್ ಮರಿದೇವರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಅನೇಕ ಗಣ್ಯಮಾನ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧರೆಗಿಳಿದ ಕೈಲಾಸ- ಶ್ರೀಮಠದ ಆವರಣದಲ್ಲಿನ ಗುಡಿ ಗೋಪುರಗಳ ಮೇಲೆ ಸಾಲುಸಾಲಾಗಿ ಬೆಳಗಿದ ಹಣತೆಗಳ ಝಗಮಗಿಸಿದ ಬೆಳಕು ಹಾಗೂ ಬಣ್ಣ-ಬಣ್ಣದ ವಿದ್ಯುತ್ ದೀಪಗಳ ವಿಶೇಷ ಅಲಂಕಾರದೊಂದಿಗೆ ಶನಿವಾರ ರಾತ್ರಿ ಧರೆಯ ಮೇಲಿನ ಕೈಲಾಸದಂತೆ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀಮಠ ಕಂಗೊಳಿಸುವ ಮೂಲಕ ಸಹಸ್ರಾರು ಭಕ್ತರಿಗೆ ಅತ್ಯಂತ ಸಂತಸ ಉಂಟು ಮಾಡಿತ್ತು.
ಶ್ರೀಗಳ ಆಶೀರ್ವಾದ ಪಡೆದಿದ್ದು ನನ್ನ ಪುಣ್ಯ: ಶ್ರೀ ಮಠದ ವತಿಯಿಂದ ಸನ್ಮಾನ ಸ್ವೀಕರಿಸಿದ ಚಲನಚಿತ್ರ ನಟರಾದ ವಿಜಯ ರಾಘವೇಂದ್ರ ಮಾತನಾಡಿ, ತಾವು 15 ವರ್ಷ ಗಳ ನಂತರ ಶ್ರೀ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆ ಯುತ್ತಿರುವುದು ಸಂತಸವಾಗಿದೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಗವಂತ ನಲ್ಲಿ ಪ್ರಾರ್ಥಿಸಿ ಜ್ಯೋತಿಯನ್ನು ಬೆಳಗಿಸುವ ಇಂದಿನ ಶುಭ ದಿನದಂದು ಶ್ರೀಗಳ ಕೃಪಾಶೀರ್ವಾದ ದೊರೆತಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಭಾಗ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.