![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 28, 2022, 5:32 PM IST
ದೋಹಾ: ಫಿಫಾ ವಿಶ್ವಕಪ್ ಪಂದ್ಯದಲ್ಲಿ ಕೆನಡಾ ಆಟ ಮುಗಿದಿದೆ. “ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂ’ನಲ್ಲಿ ರವಿವಾರ ರಾತ್ರಿ ನಡೆದ “ಎಫ್’ ವಿಭಾಗದ ಪಂದ್ಯದಲ್ಲಿ ಅದು ಕ್ರೊವೇಶಿಯಾ ಕೈಯಲ್ಲಿ 1-4 ಗೋಲುಗಳ ಹೊಡೆತ ಅನುಭವಿಸಿ ಕೂಟದಿಂದ ನಿರ್ಗಮಿಸಿತು. ಈ ಗೆಲುವಿನೊಂದಿಗೆ ಕಳೆದ ಸಲದ ರನ್ನರ್ ಅಪ್ ಕ್ರೊವೇಶಿಯಾ ಅಗ್ರಸ್ಥಾನಕ್ಕೆ ನೆಗೆಯಿತು.
2ನೇ ನಿಮಿಷದಲ್ಲೇ ಡೇವಿಸ್ ಗೋಲೊಂದನ್ನು ಸಿಡಿಸಿ ಕೆನಡಾಕ್ಕೆ ಮುನ್ನಡೆಯನ್ನೇನೋ ತಂದಿತ್ತರು. ಆದರೆ ಇಲ್ಲಿಂದ ಮುಂದೆ ಕ್ರೊವೇಶಿಯಾ ತನ್ನ ಆಕ್ರಮಣವನ್ನು ತೀವ್ರಗೊಳಿಸುತ್ತ ಹೋಯಿತು. ವಿರಾಮದ ಅವಧಿಯೊಳಗೆ 2 ಗೋಲು ಬಾರಿಸಿ ಮೇಲುಗೈ ಸಾಧಿಸಿತು.
ಆ್ಯಂಡ್ರೇಜ್ ಕ್ರಾಮರಿಕ್ ಅವಳಿ ಗೋಲು ಬಾರಿಸಿ ಮಿಂಚಿದರು (36ನೇ ಮತ್ತು 70ನೇ ನಿಮಿಷ). ಮಾರ್ಕೊ ಲಿವಾಜ (44ನೇ ನಿಮಿಷ) ಮತ್ತು ಲಾವ್ರೊ ಮೇಜರ್ (90+ 4ನೇ ನಿಮಿಷ) ಉಳಿದೆರಡು ಗೋಲು ಹೊಡೆದರು. ಕೆನಡಾ ತನ್ನ ಮೊದಲ ಪಂದ್ಯದಲ್ಲಿ ಬೆಲ್ಜಿಯಂಗೆ ಶರಣಾಗಿತ್ತು.
ಕ್ರೊವೇಶಿಯಾ-ಮೊರೊಕ್ಕೊ ನಡುವಿನ ಮೊದಲ ಪಂದ್ಯ ಡ್ರಾಗೊಂಡಿತ್ತು. ಸದ್ಯ ಈ ಎರಡೂ ತಂಡಗಳು 4 ಅಂಕ ಹೊಂದಿವೆ. ಹೆಚ್ಚು ಗೋಲು ಹೊಡೆದ ಲೆಕ್ಕಾಚಾರದಲ್ಲಿ ಕ್ರೊವೇಶಿಯಾ ಮುಂದಿದೆ. ಅದು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬೆಲ್ಜಿಯಂ ಸವಾಲನ್ನು ಎದುರಿಸಲಿದೆ. ನಾಕೌಟ್ ಪ್ರವೇಶಿಸಬೇಕಾದರೆ ಬೆಲ್ಜಿಯಂಗೆ ಗೆಲುವು ಅನಿವಾರ್ಯವಾಗಿದೆ.
ಫಲಿತಾಂಶ
ಕ್ರೊವೇಶಿಯಾ: 04
ಕೆನಡಾ: 01
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.