ಕ್ಯಾಮೆರೂನ್‌-ಸೆರ್ಬಿಯಾ ನಡುವಿನ ಪಂದ್ಯದಲ್ಲಿ 6 ಗೋಲುಗಳು ದಾಖಲು!

ಬಿರುಸಿನ ಕಾದಾಟ ಡ್ರಾದಲ್ಲಿ ಮುಕ್ತಾಯ

Team Udayavani, Nov 28, 2022, 10:57 PM IST

ಕ್ಯಾಮೆರೂನ್‌-ಸೆರ್ಬಿಯಾ ನಡುವಿನ ಪಂದ್ಯದಲ್ಲಿ 6 ಗೋಲುಗಳು ದಾಖಲು!

ದೋಹಾ: ಸೋಮವಾರ ಭರ್ಜರಿಯಾಗಿ ಸಾಗಿದ ಕ್ಯಾಮೆರೂನ್‌-ಸೆರ್ಬಿಯಾ ನಡುವಿನ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯದಲ್ಲಿ ಗೋಲುಗಳ ಸುರಿಮಳೆಯಾಗಿದೆ. ಆದರೆ ಎರಡೂ ತಂಡಗಳು 3-3 ಗೋಲು ಬಾರಿಸಿದ್ದರಿಂದ ಯಾರಿಗೂ ಗೆಲುವು ಸಾಧಿಸಲಾಗಲಿಲ್ಲ. ಇತ್ತಂಡಗಳಿಗೆ ಅಂಕದ ಖಾತೆ ತೆರೆಯಲು ಈ ಫ‌ಲಿತಾಂಶ ನೆರವಾಯಿತು,

ಅಷ್ಟೇ. ಈ ಪಂದ್ಯದಲ್ಲಿ ಯಾವುದಾದರೂ ಒಂದು ತಂಡ ಗೆಲುವು ಸಾಧಿಸಿದ್ದರೆ ಅಂಕಪಟ್ಟಿಯಲ್ಲಿ ಜಿಗಿತ ಸಾಧಿಸುತ್ತಿದ್ದವು. ಆದರೆ ಹಾಗಾಗಲಿಲ್ಲ.

“ಜಿ’ ವಿಭಾಗದ ತಂಡಗಳಾದ ಕ್ಯಾಮೆರೂನ್‌ ಮತ್ತು ಸೆರ್ಬಿಯ ತಮ್ಮ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದವು. ಇಲ್ಲಿ ಒಂದೊಂದು ಅಂಕ ಗಳಿಸಿದ್ದರಿಂದ ನಾಕೌಟ್‌ ರೇಸ್‌ನಲ್ಲಿ ಉಳಿದುಕೊಂಡಿವೆ. ಇದೇ ವಿಭಾಗದ ಬಲಿಷ್ಠ ತಂಡಗಳಾದ ಬ್ರೆಝಿಲ್‌ ಮತ್ತು ಸ್ವಿಜರ್ಲೆಂಡ್‌ ಆಡಿದ ಮೊದಲ ಪಂದ್ಯವನ್ನು ಗೆದ್ದು ತಲಾ 3 ಅಂಕ ಸಂಪಾದಿಸಿವೆ. ಈ ಎರಡು ತಂಡಗಳನ್ನು ದಾಟಿ ಕ್ಯಾಮೆರೂನ್‌, ಸೆರ್ಬಿಯಗಳು ಮುನ್ನಡೆ ಸಾಧಿಸಲು ಸಾಧ್ಯವೇ ಎಂಬುದೊಂದು ಕೌತುಕ.

ತಿರುಗಿ ಬಿದ್ದ ಕ್ಯಾಮೆರೂನ್‌: ಆಫ್ರಿಕಾದ ಪ್ರಬಲ ತಂಡವೆಂದೇ ಗುರುತಿಸಲ್ಪಡುವ ಕ್ಯಾಮೆರೂನ್‌ ವಿರಾಮದ ವೇಳೆ 1-2 ಅಂತರದ ಹಿನ್ನಡೆಯಲ್ಲಿತ್ತು. ಆದರೆ 55ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕೆ ಇಳಿದ ವಿನ್ಸೆಂಟ್‌ ಅಬೂಬಕರ್‌ ಪಂದ್ಯಕ್ಕೆ ತಿರುವು ಒದಗಿಸಲು ಯಶಸ್ವಿಯಾದರು. ಪಂದ್ಯದ 63ನೇ ನಿಮಿಷದಲ್ಲಿ ಕ್ಯಾಮೆರೂನ್‌ ಪರ 2ನೇ ಗೋಲು ಸಿಡಿಸಿ ಆಟಗಾರರನ್ನು ಹುರಿದುಂಬಿಸಿದರು. ಮೂರೇ ನಿಮಿಷದಲ್ಲಿ ಎರಿಕ್‌ ಮ್ಯಾಕ್ಸಿಮ್‌ ಚೌಪೊ ಮೋಟಿಂಗ್‌ ಇನ್ನೊಂದು ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದರು. ಇದೇ ಅಂತಿಮ ಫ‌ಲಿತಾಂಶವಾಯಿತು.

ಈ ಮುಖಾಮುಖಿಯಲ್ಲಿ ಗೋಲಿನ ಖಾತೆ ತೆರೆದದ್ದೇ ಕ್ಯಾಮೆರೂನ್‌. 29ನೇ ನಿಮಿಷದಲ್ಲಿ ಜೀನ್‌ ಚಾರ್ಲ್ಸ್‌ ಕ್ಯಾಸ್ಟಲೆಟೊ ಈ ಗೋಲು ದಾಖಲಿಸಿದರು. ಆದರೆ ವಿರಾಮದ ಹೊತ್ತಿಗೆ ಸರಿಯಾಗಿ ಸೆರ್ಬಿಯದ ಸ್ಟ್ರಾಹಿಂಜ ಪಾವ್ಲೋವಿಕ್‌ ಮತ್ತು ಸಗೇìಯಿ ಮಿಲಿನ್ಕೋವಿಕ್‌ ಸಾವಿಕ್‌ ಎರಡೇ ನಿಮಿಷಗಳ ಅಂತರದಲ್ಲಿ 2 ಗೋಲು ಬಾರಿಸಿ ಭರ್ಜರಿ ಮುನ್ನಡೆ ತಂದಿತ್ತರು. ವಿರಾಮ ಕಳೆದು ಎಂಟೇ ನಿಮಿಷದಲ್ಲಿ ಸೆರ್ಬಿಯ ಕಡೆಯಿಂದ 3ನೇ ಗೋಲು ದಾಖಲಾಯಿತು. ಕ್ಯಾಮೆರೂನ್‌ಗೆ 53ನೇ ನಿಮಿಷದಲ್ಲಿ ಈ ಆಘಾತ ಕೊಟ್ಟವರು ಅಲೆಕ್ಸಾಂಡ್ರ ಮಿಟ್ರೋವಿಕ್‌. ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿವೆ. ಇತ್ತಂಡಗಳಿಗೂ ತಾಲ ಒಂದು ಪಂದ್ಯ ಬಾಕಿಯಿದೆ. ಇಲ್ಲಿನ ಫ‌ಲಿತಾಂಶವೇ ನಿರ್ಣಾಯಕವಾಗಬಹುದು.

ಟಾಪ್ ನ್ಯೂಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

virat-sachin-Dhoni

Brand Value: ಬಾಲಿವುಡ್‌ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್‌ ಮೌಲ್ಯ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.