ಹಿಂಜರಿಕೆ ಎದುರಿಸಲು ಕೇಂದ್ರ ಸರಕಾರ ಸಜ್ಜು: ಮೂಲ ಸೌಕರ್ಯದಲ್ಲಿ ಹೆಚ್ಚು ಹೂಡಿಕೆ
Team Udayavani, Dec 1, 2022, 6:20 AM IST
ಹೊಸದಿಲ್ಲಿ: ಜಾಗತಿಕ ಆರ್ಥಿಕ ಹಿಂಜ ರಿತದ ಸುಳಿವು ಸಿಗುತ್ತಿರುವಂತೆಯೇ, ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಸಿದ್ಧತೆ ಆರಂಭಿಸಿದೆ. ಅದು ಭಾರತದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ತಡೆ ಯುವ ನಿಟ್ಟಿನಲ್ಲಿ ಮುಂಬರುವ ಬಜೆಟ್‌ನಲ್ಲಿ “ಅಧಿಕ ಬಂಡವಾಳ ವೆಚ್ಚ ಯೋಜನೆ’ ಜಾರಿಯತ್ತ ಸರಕಾರ ಗಮನ ಹರಿಸಿದೆ.
ಅದರಂತೆ ಪ್ರಮುಖ ಮೂಲಸೌಕರ್ಯ ಸಚಿವಾಲಯಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವ ಸಾಧ್ಯತೆಯಿದೆ. ಉಳಿದ ಇಲಾಖೆಗಳ ಅನುದಾನದಲ್ಲಿ ಮಧ್ಯಮ ಪ್ರಮಾಣದ ಏರಿಕೆಯಷ್ಟೇ ಇರಲಿದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಸರಕಾರದ ಕೊನೆಯ ಪೂರ್ಣ ಪ್ರಮಾ ಣದ ಬಜೆಟ್ ಆಗಿದೆ. ಆದರೂ ಆರ್ಥಿಕ ಬಿಕ್ಕಟ್ಟನ್ನು ಗಮನದಲ್ಲಿ ಇರಿಸಿ ಕೊಂಡು, “ಸಮತೋಲಿತ ಬಜೆಟ್’ ಮಂಡಿ ಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿ ಗಳ ಹೇಳಿಕೆಗಳನ್ನು ಉಲ್ಲೇಖಿಸಿ “ದಿ ಎಕನಾ ಮಿಕ್ ಟೈಮ್ಸ್’ ವರದಿ ಮಾಡಿದೆ.
2022-23ರ ಆಯವ್ಯಯದಲ್ಲಿ ಬಂಡ ವಾಳ ವೆಚ್ಚವನ್ನು ಹೆಚ್ಚಿಸಿ, ಒಟ್ಟಾರೆ ಬಜೆಟ್ ಮೊತ್ತದ 5ನೇ ಒಂದು ಭಾಗದಷ್ಟು ಅನುದಾನವನ್ನು ಮೂಲಸೌಕರ್ಯ ವಲಯಗಳಿಗೆ ನೀಡಲಾಗುತ್ತದೆ. 2021- 22ರಲ್ಲಿ ಒಟ್ಟಾರೆ ಜಿಡಿಪಿಯ ಶೇ.2.5ರಷ್ಟಿದ್ದ ಬಂಡವಾಳ ವೆಚ್ಚವು 2022- 23ರಲ್ಲಿ ಶೇ.2.9ಕ್ಕೇರುವ ನಿರೀಕ್ಷೆಯಿದೆ ಎಂದೂ ವರದಿ ಹೇಳಿದೆ.
ಕಡಿಮೆ ಹಣದುಬ್ಬರ ನಿರೀಕ್ಷೆ
ಮುಂದಿನ ವರ್ಷ ಹಣದುಬ್ಬರ ಪ್ರಮಾಣ ಕಡಿಮೆಯಾಗಲಿದೆ ಮತ್ತು ಸದೃಢವಾಗಿ ಅರ್ಥ ವ್ಯವಸ್ಥೆ ಬೆಳವಣಿಗೆ ಸಾಧಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೊಸದಿಲ್ಲಿಯಲ್ಲಿ ಮಾತ ನಾಡಿದ ಅವರು ದೇಶದ ಹಣದು ಬ್ಬರ ಪರಿಸ್ಥಿತಿಯನ್ನು ಸಮರ್ಥ ವಾಗಿ ನಿಭಾಯಿ ಸಲಿದೆ. ದೇಶದ ಬಾಹ್ಯ ಪರಿಸ್ಥಿತಿಗಳೇ ಹಣದುಬ್ಬರನ್ನು ನಿಭಾಯಿಸುವಲ್ಲಿ ಸರಕಾರಕ್ಕೆ ಸವಾಲಾಗಿ ಪರಿಣ ಮಿಸಲಿದೆ ಎಂದರು. ಕಚ್ಚಾ ತೈಲ ಖರೀದಿ ವಿಚಾರದಲ್ಲಿ ದೇಶದ ನಿಲುವು ಫೆಬ್ರವರಿಯಲ್ಲಿಯೇ ಪ್ರಕಟಿಸಲಾಗಿದೆ ಎಂದರು.
ಜಿಡಿಪಿ ಶೇ.6.3 ಬೆಳವಣಿಗೆ
ಪ್ರಸಕ್ತ ವಿತ್ತೀಯ ವರ್ಷದ ಜುಲೈ-ಸಪ್ಟೆಂಬರ್ ಅವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆ ಶೇ.6.3ರಷ್ಟು ಬೆಳವಣಿಗೆ ಸಾಧಿಸಿದೆ. ಹೀಗೆಂದು ಬುಧವಾರ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ದತ್ತಾಂಶಗಳಲ್ಲಿ ಉಲ್ಲೇಖೀಸಲಾಗಿದೆ. ಆದರೆ ಕಳೆದ ವಿತ್ತೀಯ ವರ್ಷದ ಇದೇ ಅವಧಿಯಲ್ಲಿ ಅರ್ಥ ವ್ಯವಸ್ಥೆ ಶೇ.13.5 ಬೆಳವಣಿಗೆ ಸಾಧಿಸಿತ್ತು. ಆದರೆ ಚೀನಕ್ಕೆ ಹೋಲಿಕೆ ಮಾಡಿದರೆ ದೇಶ ಜಗತ್ತಿನಲ್ಲಿಯೇ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಅರ್ಥ ವ್ಯವಸ್ಥೆಯಾಗಿದೆ. 2021-21ನೇ ಸಾಲಿನ 2ನೇ ತ್ತೈಮಾಸಿಕದಲ್ಲಿ ದೇಶದ ಅರ್ಥ ವ್ಯವಸ್ಥೆ ಶೇ.8.4ರಷ್ಟು ಬೆಳವಣಿಗೆ ಸಾಧಿಸಿತ್ತು. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕದಲ್ಲಿ ಜಿಡಿಪಿ ಪ್ರಮಾಣ ಶೇ.13.5 ಆಗಿತ್ತು. ಇದೇ ವೇಳೆ, ದೇಶದ ಕೈಗಾರಿಕ ಕ್ಷೇತ್ರದ ಎಂಟು ಪ್ರಮುಖ ವಲಯಗಳ ಬೆಳವಣಿಗೆ 20 ತಿಂಗಳ ಕನಿಷ್ಠ ಬೆಳವಣಿಗೆ ದಾಖಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.