ವೀರರಾಣಿ ಕಿತ್ತೂರು ಚನ್ನಮ್ಮರ 199ನೇ ವಿಜಯೋತ್ಸವ-244ನೇ ಜಯಂತ್ಯುತ್ಸವ
ಡಿ.4 ರಂದು ಮಂಜುನಾಥ ಮಾಗಡಿ ಪಂಚಮಸಾಲಿ ಬೃಹತ್ ಜನಜಾಗೃತಿ ಸಮಾವೇಶ
Team Udayavani, Dec 2, 2022, 3:57 PM IST
ಲಕ್ಷ್ಮೇಶ್ವರ: ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಡಿ.4ರ ಭಾನುವಾರ ಬೆಳಿಗ್ಗೆ 10.30ಕ್ಕೆ ಪಟ್ಟಣದ ಶ್ರೀ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ, ಕೇಂದ್ರದ ಓಬಿಸಿ ಮೀಸಲಾತಿಗೆ ಆಗ್ರಹಿಸಿ, ಜಿಲ್ಲಾಮಟ್ಟದ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮನವರ 199ನೇ ವಿಜಯೋತ್ಸವ, 244ನೇ ಜಯಂತ್ಯುತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದ ಸಾನ್ನಿಧ್ಯವನ್ನು ಹರಿಹರ ಪಂಚಮ ಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ವಹಿಸುವರು. ಅಂದು ಬೆಳಿಗ್ಗೆ 8ಕ್ಕೆ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ಚನ್ನಮ್ಮನವರ ಮೂರ್ತಿಗೆ ಪೂಜೆ ಸಲ್ಲಿಸುವುದ ರೊಂದಿಗೆ ಕಿತ್ತೂರ ರಾಣಿ ಚನ್ನಮ್ಮಾಜಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುವುದು. 10 ಜಾನಪದ ಕಲಾ ತಂಡಗಳು, ಮಹಿಳೆಯರ ಪೂರ್ಣಕುಂಭದೊಂದಿಗೆ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದರು.
ಮೆರವಣಿಗೆ ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸುವರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರಗೇಶ ನಿರಾಣಿ ಕಿತ್ತೂರ ರಾಣಿ ಚನ್ನಮ್ಮನವರ ಭಾವಚಿತ್ರ ಅನಾವರಣಗೊಳಿಸುವರು. ಸಕ್ಕರೆ ಮತ್ತು ಜವಳಿ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಸಂಸದ ಸಂಗಣ್ಣ ಕರಡಿ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಶಾಸಕರಾದ ಕಳಕಪ್ಪ ಬಂಡಿ ಮತ್ತು ವಿರೂಪಾಕ್ಷಪ್ಪ ಬಳ್ಳಾರಿ ಚನ್ನಮ್ಮಶ್ರೀ ಹರಶ್ರೀ ಗೌರವಾರ್ಪಣೆ ನೆರವೇರಿಸುವರು.
ಶಾಸಕರಾದ ಅರುಣಕುಮಾರ ಪೂಜಾರ, ರಾಮಣ್ಣ ಲಮಾಣಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ರಾ.ವೀ.ಲಿಂ.ಪಂ. ಸಂಘದ ರಾಜ್ಯಾಧ್ಯಕ್ಷ ಜಿ.ಪಿ.ಪಾಟೀಲ, ಬಾವಿ ಬೆಟ್ಟಪ್ಪ, ಬಿ.ಸಿ. ಉಮಾಪತಿ, ಬಸವರಾಜ ದಿಂಡೂರ, ವಸಂತಾ ಹುಲ್ಲತ್ತಿ, ನಾಗರಾಜ ಕುಂಕೋದ್, ಈರಣ್ಣ ಕರಿಬಿಷ್ಟಿ, ಎಸ್.ವಿ. ಪಾಟೀಲ, ಸಿ.ಕೆ. ರಾಚನಗೌಡ್ರ, ಅನಿಲಕುಮಾರ ಪಲ್ಲೇದ, ಸಿದ್ದು ಪಾಟೀಲ, ಸುರೇಶ ಕಾಜಗಾರ, ಬಿ.ಡಿ. ಪಲ್ಲೇದ, ಅನ್ನಪೂರ್ಣ ಮಹಾಂತಶೆಟ್ಟರ, ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ವಿವಿಧ ವಿಭಾಗಗಳ ಪದಾಧಿಕಾರಿಗಳು, ವಿವಿಧ ಸಮಾಜಗಳ ಅಧ್ಯಕ್ಷರು, ಹಿರಿಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಮಾಜದ ಬಡ ಮಕ್ಕಳ ಶಿಕ್ಷಣ, ಉದ್ಯೋಗ, ಮಹಿಳಾ ಸಬಲೀಕರಣ, ರೈತರ ಆರ್ಥಿಕ ಅಭಿವೃದ್ಧಿ, ನೌಕರರ ಪದೋನ್ನತಿ, ರಾಜಕೀಯ ಅವಕಾಶ ಸೇರಿದಂತೆ ಪಂಚಮಸಾಲಿ ಸಮಾಜದ ಸರ್ವತೋಮುಖ ಪ್ರಗತಿಗಾಗಿ ಮೀಸಲಾತಿಯ ನಮ್ಮ ಹಕ್ಕನ್ನು ಪಡೆಯುವ ನಿಟ್ಟನಲ್ಲಿ ಸರ್ಕಾರದ ಗಮನ ಸೆಳೆಯುವುದು ಸಮಾವೇಶದ ಉದ್ದೇಶ ವಾಗಿದೆಯೇ ಹೊರತಾಗಿ, ಬೇರೆ ಯಾವುದೇ ಸಮಾಜದವರ ಮೀಸಲಾತಿ ಕಸಿಯುವ ಹಕ್ಕೊತ್ತಾಯ ನಮ್ಮ ಸಮಾಜದ್ದಲ್ಲ ಎಂದರು.
ಸಮಾವೇಶದ ಯಶಸ್ಸಿಗಾಗಿ ಕಳೆದ ಹತ್ತಾರು ದಿನಗಳಿಂದ ಜಿಲ್ಲೆಯ 7 ತಾಲೂಕುಗಳ 135 ಗ್ರಾಮಗಳಿಗೆ ತೆರಳಿ ಆಮಂತ್ರಣ ಪತ್ರಿಕೆ ನೀಡಿ, ಸಭೆ ಮಾಡಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ತಾಲೂಕಿನಾದ್ಯಂತ ಮಹಿಳೆಯರ ಮನೆಗಳಿಗೆ ತೆರಳಿ ಅರಿಷಿಣ-ಕುಂಕುಮ, ಬಳೆ, ಅಡಕೆ- ವೀಳ್ಯದೆಲೆ ನೀಡಿ ಗೌರವದಿಂದ ಆಮಂತ್ರಿಸಲಾಗಿದೆ. ಲಕ್ಷ್ಮೇಶ್ವರ ಸುತ್ತಲಿನ ಹಾಗೂ ನೆರೆಯ ಕುಂದಗೋಳ ತಾಲೂಕಿನ ಜನರೂ ಆಗಮಿಸಲಿದ್ದಾರೆ.
ಒಟ್ಟಾರೆ, ಸಮಾವೇಶಕ್ಕೆ ವಿವಿಧ ಜಿಲ್ಲೆ, ತಾಲೂಕುಗಳಿಂದ 25 ಸಂಖ್ಯೆ ಜನ ಸೇರಲಿದ್ದಾರೆ. ಪಂಚಮಸಾಲಿ ಸಂಘದ ರೈತ ಘಟಕ, ಯುವ ಘಟಕ, ಮಹಿಳಾ ಘಟಕ, ನಗರ ಘಟಕ, ವಾರ್ಡ್ ಘಟಕ, ಗ್ರಾಮ ಘಟಕಗಳ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕು, ಗ್ರಾಮಗಳ ಪಂಚಮಸಾಲಿ ಸಮಾಜದ ಗುರು-ಹಿರಿಯರು, ಮಹಿಳೆಯರು, ಯುವಕರು ಈ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಸರ್ಕಾರದ ಗಮನ ಸೆಳೆಯುವಲ್ಲಿ ಕಾರಣೀಭೂತರಾಗೋಣ ಎಂದರು.
ಈ ವೇಳೆ ವೀರೇಂದ್ರ ಕಟಗಿ, ಚನ್ನವೀರಪ್ಪ ದಾನಿ, ಮಾದೇವಪ್ಪ ಕಟಗಿ, ಪರಮೇಶ ಕಿತ್ಲಿ, ಮಂಜುನಾಥ ಗೌರಿ, ಸುನೀಲ ಮುಳಳುಂದ, ಬಸವರಾಜ ಗೋಡಿ, ಗಂಗಾಧರ ಗೋಡಿ, ಮಹಾಂತೇಶ ಗೋಡಿ, ಪ್ರಕಾಶ ಜಾವೂರ, ರಾಜು ಲಿಂಬಿಕಾಯಿ, ಮಂಜುನಾಥ ಕರಿಗೌಡ್ರ, ಬಸವರಾಜ ಮೇಟಿ, ನಾಗರಾಜ ಅಣ್ಣಿಗೇರಿ, ಗಂಗಾಧರ ಬೆಲ್ಲದ, ಗುರುನಾಥಗೌಡ ಪಾಟೀಲ, ಶೇಖಣ್ಣ ಹುರಕಡ್ಲಿ, ವಸಂತಗೌಡ ಬಾಗೇವಾಡಿ, ಪರಮೇಶ್ ಕಿತ್ಲಿ, ಸೋಮಣ್ಣ ಮುಳಗುಂದ, ಭರಮಪ್ಪ ಕೊಡ್ಲಿ, ಗಂಗಾಧರ ಗೋಡಿ, ಬಸವರಾಜ ಗೋಡಿ, ಪ್ರಕಾಶ ಜಾವೂರ, ಮುತ್ತು ಹೆಬ್ಟಾಳ, ಅನಿಲ ಹೆಬ್ಟಾಳ, ಶೇಖರಗೌಡ ನರಸಮ್ಮನವರ, ಬಸವಣ್ಣೆಪ್ಪ ಮತ್ತೂರ, ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.