ಸೌರ ಸುನಾಮಿ, ಲ್ಯಾಬ್ ಶಿಶುಗಳು, ಅಣುಸ್ಥಾವರ ಸ್ಫೋಟ…!
2023ಕ್ಕೆ ಕಾಲಜ್ಞಾನಿ ಬಾಬಾ ವಂಗಾ ನುಡಿದಿರುವ ಭವಿಷ್ಯವಿದು
Team Udayavani, Dec 4, 2022, 7:30 AM IST
ಲಂಡನ್:ಹೊಸ ವರ್ಷದ ಹೊಸ್ತಿಲಲ್ಲಿರುವ ಜಗತ್ತಿಗೆ ಬಲ್ಗೇರಿಯಾದ ಕಾಲಜ್ಞಾನಿ ಬಾಬಾ ವಂಗಾ ಅವರ ಭವಿಷ್ಯವಾಣಿ ಆತಂಕ ತರಿಸಿದೆ. 9/11ರ ಉಗ್ರರ ದಾಳಿ, ಬ್ರೆಕ್ಸಿಟ್, ರಾಜಕುಮಾರಿ ಡಯಾನಾ ಸಾವು, ಬರಾಕ್ ಒಬಾಮ ಅಧ್ಯಕ್ಷತೆ ಕುರಿತಂತೆ ನಿಖರ ಭವಿಷ್ಯ ನುಡಿದಿದ್ದ ಬಾಂಬಾ ವಂಗಾ ಅವರು 2023ರ ಭವಿಷ್ಯವನ್ನು ಏನೆಂದು ಬರೆದಿದ್ದಾರೆ ಗೊತ್ತಾ?
1. ಭೂಮಿಯ ಕಕ್ಷೆ ಬದಲಾವಣೆ
2023ರಲ್ಲಿ ಭೂಮಿಯ ಕಕ್ಷೆ ಬದಲಾಗುತ್ತದೆ. ಬ್ರಹ್ಮಾಂಡದಲ್ಲಿ ಭೂಮಿಯ ಚಲನೆಯಲ್ಲಿ ಸ್ವಲ್ಪ ಹೆಚ್ಚು-ಕಮ್ಮಿಯಾದರೂ ದೊಡ್ಡ ಮಟ್ಟದ ಬದಲಾವಣೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಬಾಬಾ ವಂಗಾ. ಭೂಮಿಯೇನಾದರೂ ಸೂರ್ಯನನ್ನು ಸಮೀಪಿಸಿದರೆ, ವಿಕಿರಣಗಳ ಪ್ರಮಾಣ ಹೆಚ್ಚಳವಾಗಿ, ತಾಪಮಾನ ವಿಪರೀತ ಏರಲಿದೆ. ಒಂದು ವೇಳೆ, ಭೂಮಿಯು ಸೂರ್ಯನಿಂದ ಹಿಂದಕ್ಕೆ ಸರಿದರೆ, ನಾವು ಹಿಮಯುಗಕ್ಕೆ ಬಿದ್ದು, ಕತ್ತಲ ಅವಧಿಯು ಹೆಚ್ಚಲಿದೆ.
2. ಸೌರ ಸುನಾಮಿ
ಜಗತ್ತು ಹಿಂದೆಂದೂ ಕಂಡಿರದಂಥ ಸೌರ ಸುನಾಮಿಯು 2023ರಲ್ಲಿ ಸಂಭವಿಸಲಿದೆ ಎಂದೂ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಸೂರ್ಯನಿಂದ ಹೊರಬರುವ ಜ್ವಾಲೆಗಳು ಕೋಟಿಗಟ್ಟಲೆ ಅಣುಬಾಂಬ್‌ಗಳಷ್ಟು ಬಲಿಷ್ಠವಾಗಿರುತ್ತವೆ. ಮುಂದಿನ ವರ್ಷ ಸಂಭವಿಸುವ ಸೌರ ಸುನಾಮಿಯು ತಂತ್ರಜ್ಞಾನಗಳಿಗೆ ಹಾನಿ ಉಂಟುಮಾಡಲಿದೆ ಮತ್ತು ವಿದ್ಯುತ್ ಅಭಾವ, ಸಂವಹನ ವೈಫಲ್ಯಗಳಿಗೂ ಕಾರಣವಾಗಲಿದೆಯಂತೆ.
3. ಜೈವಿಕ ಅಸ್ತ್ರಗಳು
“ಬೃಹತ್ ದೇಶ’ವೊಂದು ಜನರ ಮೇಲೆ ಜೈವಿಕ ಅಸ್ತ್ರವನ್ನು ಪ್ರಯೋಗಿಸಲಿದೆ. ಪರಿಣಾಮವಾಗಿ, ಸಾವಿರಾರು ಜೀವಗಳು ಬಲಿಯಾಗಲಿವೆ. ಈಗಾಗಲೇ ವಿಶ್ವಸಂಸ್ಥೆಯು ಜೈವಿಕ ಅಸ್ತ್ರಗಳ ಪ್ರಯೋಗಕ್ಕೆ ನಿಷೇಧ ಹೇರಿದೆ. ಆದರೂ, ಅನೇಕ ದೇಶಗಳು ರಹಸ್ಯವಾಗಿ ಇಂಥ ಪ್ರಯೋಗಗಳನ್ನು ನಡೆಸುತ್ತಲೇ ಇವೆ.
4. ಪರಮಾಣು ಸ್ಫೋಟ
2023ರಲ್ಲಿ ಪರಮಾಣು ವಿದ್ಯುತ್ ಸ್ಥಾವರವೊಂದು ಸ್ಫೋಟಗೊಳ್ಳಲಿದೆ ಎಂದಿದ್ದಾರೆ ಬಾಬಾ ವಂಗಾ. ಈಗಾಗಲೇ ರಷ್ಯಾವು ಉಕ್ರೇನ್‌ಗೆ “ಅಣ್ವಸ್ತ್ರ ಪ್ರಯೋಗದ ಬ್ಲ್ಯಾಕ್‌ಮೇಲ್ ‘ ಮಾಡುತ್ತಿರುವ ಕಾರಣ, ಕೀವ್‌ನಲ್ಲೇ ಈ ಸ್ಫೋಟ ಸಂಭವಿಸಬಹುದೇ ಎಂಬ ಅನುಮಾನ ಮೂಡಿದೆ.
5. ಲ್ಯಾಬ್ ಶಿಶುಗಳು
ನೈಸರ್ಗಿಕ ಜನನಗಳ ಸಂಖ್ಯೆ ಕಡಿಮೆಯಾಗಿ, ಮನುಷ್ಯರೆಲ್ಲ ಪ್ರಯೋಗಾಲಯಗಳಲ್ಲೇ ಸೃಷ್ಟಿಯಾಗುವಂತ ಸ್ಥಿತಿ ನಿರ್ಮಾಣವಾಗಲಿದೆ. ಯಾರು ಹುಟ್ಟಬೇಕು ಎಂಬುದನ್ನು ವಿಶ್ವನಾಯಕರು ಮತ್ತು ವೈದ್ಯಕೀಯ ತಜ್ಞರೇ ನಿರ್ಧರಿಸುವಂತಾಗುತ್ತದೆ.
ಯಾರಿವರು ಬಾಬಾ ವಂಗಾ?
1911ರಲ್ಲಿ ಬಲ್ಗೇರಿಯಾದಲ್ಲಿ ಹುಟ್ಟಿದ ಬಾಬಾ ವಂಗಾ ಅವರು ತಮ್ಮ 12ನೇ ವಯಸ್ಸಿಗೆ ದೃಷ್ಟಿ ಕಳೆದುಕೊಂಡರು. ಅಂದಿನಿಂದ ಅವರಿಗೆ, ಭವಿಷ್ಯವಾಣಿ ನುಡಿಯುವಂಥ ಅತೀಂದ್ರಿಯ ಶಕ್ತಿ ಬಂತೆಂದು ಹೇಳಲಾಗಿದೆ. “ನಾಸ್ಟ್ರಾಡಾಮಸ್ ಆಫ್ ದಿ ಬಾಲ್ಕನ್ಸ್’ ಎಂದೇ ಕರೆಯಲ್ಪಡುವ ಅವರು 1996ರಲ್ಲಿ ಕೊನೆಯುಸಿರೆಳೆದರು. ಆದರೆ, 5079ನೇ ಇಸವಿಯವರೆಗಿನ ಭವಿಷ್ಯವಾಣಿಯನ್ನು ಅವರು ಬರೆದು ಹೋಗಿದ್ದಾರೆ. 5079ರಲ್ಲಿ ಈ ಜಗತ್ತು ಅಂತ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಅವರು ನುಡಿದಿರುವ ಭವಿಷ್ಯ ಶೇ.85ರಷ್ಟು ನಿಜವಾಗಿದೆ ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.