ಅಯೋಧ್ಯೆ ಪ್ರತಿಷ್ಠಾ ಮಹೋತ್ಸವಕ್ಕೆ ದೇಶಾದ್ಯಂತ ರಥಯಾತ್ರೆ


Team Udayavani, Dec 4, 2022, 6:30 AM IST

ಅಯೋಧ್ಯೆ ಪ್ರತಿಷ್ಠಾ ಮಹೋತ್ಸವಕ್ಕೆ ದೇಶಾದ್ಯಂತ ರಥಯಾತ್ರೆ

ಉಡುಪಿ: ಅಯೋಧ್ಯೆಯಲ್ಲಿ 2024ರ ಜ. 14 ಮಕರಸಂಕ್ರಾಂತಿ ಬಳಿಕ ಶುಭ ಮುಹೂರ್ತದಲ್ಲಿ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಅದಕ್ಕೂ ಮುಂಚೆ ಉತ್ಥಾನ ದ್ವಾದಶಿ ಬಳಿಕ ರಥಯಾತ್ರೆ ಆಯೋಜಿಸುವ ಚಿಂತನೆ ಇದೆ. ಈ ಸಂದರ್ಭ ಎಲ್ಲ ರಾಜ್ಯಗಳಲ್ಲಿ ಸಂಚರಿಸಿ ಭಗವದ್ಭಕ್ತರನ್ನು ಪ್ರತಿಷ್ಠಾ ಮಹೋತ್ಸವಕ್ಕೆ ಆಹ್ವಾನಿಸಲಾಗುವುದು. ಇದಕ್ಕೆ ನವೆಂಬರ್‌ನಿಂದ 2-3 ತಿಂಗಳು ಸಿಗಲಿದೆ. ಒಮ್ಮೆಲೆ ಅಪಾರ ಭಕ್ತರು ಬಂದರೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಮಹೋತ್ಸವವನ್ನು ಒಂದು ತಿಂಗಳ ಕಾಲ ನಡೆಸುವ ಚಿಂತನೆ ಇದೆ ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

– ಮಂದಿರ ಕೆಲಸ ಹೇಗೆ ನಡೆಯುತ್ತಿದೆ?
ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ಯಲ್ಲಿ ಮಂದಿರ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಿಳಿಸಿದ ಬಳಿಕ ಸರಕಾರದ ಬೊಕ್ಕಸದಿಂದ ಮಂದಿರ ನಿರ್ಮಾಣ ವಾಗಬಾರದು. ಭಕ್ತರು ನೀಡುವ ದೇಣಿಗೆಯಿಂದ ಮಂದಿರ ನಿರ್ಮಾಣವಾಗ ಬೇಕೆಂದು ನಿರ್ಣಯಿಸಲಾಯಿತು. ಮೊದಲು 2,000 ಕೋ.ರೂ. ಅಗತ್ಯ ವೆಂದು ಭಾವಿಸಿ ಮನೆಯೊಂದರಿಂದ ಕನಿಷ್ಠ 100 ರೂ. ದೇಣಿಗೆ ನೀಡುವಂತೆ ಮನವಿ ಮಾಡಿದೆವು. ಸುಮಾರು 3,000 ಕೋ.ರೂ. ನಿಧಿ ಸಂಗ್ರಹವಾಯಿತು. ಮಂದಿರದ ಕಾರ್ಯ ಶರವೇಗದಲ್ಲಿ ನಡೆಯುತ್ತಿದೆ.

– ನಿರ್ಮಾಣದಲ್ಲಿ ಎದುರಾದ ಸವಾಲುಗಳೇನು?
ಅಯೋಧ್ಯೆಯ ಭೂಮಿಯಲ್ಲಿ ಮರಳು ಜಾಸ್ತಿ. ಆದ್ದರಿಂದ 40 ಅಡಿ ಆಳದ ಮರಳು ಮಣ್ಣು ತೆಗೆದು ಗಟ್ಟಿ ಪಂಚಾಂಗ ನಿರ್ಮಿಸಲು ತಾಂತ್ರಿಕ ಮಿಶ್ರಣವನ್ನು ತುಂಬಿಸಬೇಕಾಯಿತು. ಇದು 360 ಅಡಿ ಉದ್ದ, 235 ಅಡಿ ಅಗಲ, 161 ಅಡಿ ಎತ್ತರದಲ್ಲಿ ನಡೆ ಯಿತು. ಇದಕ್ಕೆ ಒಂದು ವರ್ಷ ತಗಲಿತು. ಈ ಮಧ್ಯೆ ಕೊರೊನಾ ಬಾಧೆಯೂ ತಗಲಿತು. ಈಗ ಭೂಮಟ್ಟದಿಂದ 20 ಅಡಿ ಪ್ಲಾಟ್‌ಫಾರ್ಮ್ ಬಂದಿದೆ. ಗರ್ಭಗೃಹದ 10 ಅಡಿ ಎತ್ತರದ ಗೋಡೆಗಳನ್ನು ನಿರ್ಮಿಸ ಲಾಗಿದೆ. ಪ್ರದಕ್ಷಿಣ ಪಥದ ಎಡಭಾಗ ನಾಲ್ಕೈದು ಅಡಿ ಗೋಡೆಗಳನ್ನು ನಿರ್ಮಿಸ ಲಾಗಿದೆ. ಇಲ್ಲಿ ರಾಮಾಯಣ ಕಥೆಯ ಆರು ಅಡಿ ಉದ್ದ, ಐದು ಅಡಿ ಅಗಲ, ಎರಡೂವರೆ ಅಡಿ ದಪ್ಪದ ಭಿತ್ತಿಚಿತ್ರಗಳು ಬರಲಿವೆ. ಪ್ರದಕ್ಷಿಣ ಪಥದಲ್ಲಿ ಸೂರ್ಯ, ಶಿವ, ಅಂಬಿಕಾ, ಗಣಪತಿ, ಹನುಮಂತ ಮೊದಲಾದ ಎಂಟು ಪ್ರತಿಮೆಗಳು ಇರಲಿವೆ. ವಸಿಷ್ಠ, ಅಗಸ್ತ್ಯ, ವಿಶಾಮಿತ್ರ, ಶಬರಿ, ಜಟಾಯು ಮೊದಲಾದ ಎಂಟು ಮಂದಿರಗಳನ್ನು ಹೊರ ಪ್ರದಕ್ಷಿಣ ಪ್ರಾಕಾರದಲ್ಲಿ ನಿರ್ಮಿಸಲಾಗುವುದು. ಏಕ ಕಾಲದಲ್ಲಿ 25,000 ಭಕ್ತರು ಆಗಮಿಸಿದರೆ ಅವರಿಗೆ ಬೇಕಾದ ಮೂಲಸೌಕರ್ಯ ಒದಗಿಸ ಲಾಗುವುದು. ನಿತ್ಯ 200 ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

– ಪ್ರಧಾನ ಪ್ರತಿಮೆ ಕಾರ್ಯದ ಬಗೆಗೆ…
ಗರ್ಭಗುಡಿಯಲ್ಲಿ ರಾಮದೇವರ ಪ್ರತಿಮೆ ಪ್ರತಿಷ್ಠಾ ಪಿಸಲಾಗುವುದು. 3 ಅಡಿಯ ಪೀಠದ ಮೇಲೆ ಆರಡಿ ಎತ್ತರದ ಅಮೃತಶಿಲೆಯ ರಾಮನ ವಿಗ್ರಹ ಪ್ರತಿಷ್ಠಾಪಿಸಲಾಗುವುದು. 2024ರ ಮಕರಸಂಕ್ರಾಂತಿ ಬಳಿಕ ಪ್ರತಿಷ್ಠಾ ಮಹೋತ್ಸವ ನಡೆಸಬೇಕೆಂಬ ಇರಾದೆ ಇದೆ. ಇದಕ್ಕೆ ಎರಡು ತಿಂಗಳು ಮುನ್ನ ಪ್ರತಿಮೆ ಸಿದ್ಧ ಗೊಳ್ಳಬೇಕು. ಸುಮಾರು 8 ತಿಂಗಳಲ್ಲಿ ಪ್ರತಿಮೆ ಸಿದ್ಧಗೊಳ್ಳ ಬೇಕಾಗಿದ್ದು ಆ ಪ್ರಕ್ರಿಯೆ ನಡೆಯುತ್ತಿದೆ. ರಾಮ ನವಮಿ ದಿನ ರಾಮದೇವರ ಪ್ರತಿಮೆ ಮೇಲೆ ಸೂರ್ಯ ರಶ್ಮಿ ಬೀಳಬೇಕೆಂದು ಪ್ರಧಾನಿ ಅಪೇಕ್ಷೆ ಪಟ್ಟಿದ್ದಾರೆ. ಅದರಂತೆ ವ್ಯೋಮ ಸಂಶೋಧನ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.

– 1885ರ ಅ. 31-ನ. 1ರಂದು ನಡೆದ ಧರ್ಮಸಂಸದ್‌ ಅಧಿವೇಶನದಲ್ಲಿ “ತಾಲಾ ಖೋಲೊ’ (ಬೀಗ ತೆಗೆಯಿರಿ) ಆಂದೋಲನ ದಿಂದ ಹಿಡಿದು 2017ರ ನ. 24ರಿಂದ 26ರ ವರೆಗೆ ನಡೆದ ಧರ್ಮ ಸಂಸದ್‌ ಅಧಿವೇಶನದವರೆಗೆ ಅನೇಕ ಬಗೆಯ ಹೋರಾಟಗಳಲ್ಲಿ ತಮ್ಮ ಗುರುಗಳು ಪಾಲ್ಗೊಂಡರು. ನ. 24ರ ಧರ್ಮಸಂಸದ್‌ ಅಧಿವೇಶನದ ಉದ್ಘಾಟನ ಸಭೆಯಲ್ಲಿ ಗುರುಗಳು “2019ರೊಳಗೆ ಪ್ರಕರಣ ಇತ್ಯರ್ಥ ವಾಗ ಲಿದೆ’ ಎಂದು ವಿಶ್ವಾಸ ವ್ಯಕ್ತಪಡಿ ಸಿದ್ದರು. 2019ರ ನ. 9ರಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದನ್ನು ನೋಡಿ ದರು. ಇಂತಹ ಭವಿಷ್ಯ ನುಡಿಯುವುದು ಹೇಗೆ ಸಾಧ್ಯ?
ಗುರುಗಳು ರಾಮ, ಕೃಷ್ಣನನ್ನು ಕೇವಲ ಪ್ರತಿಮೆಯಲ್ಲಿ ಆರಾಧಿಸಿದವರಲ್ಲ. ಗೀತೆಯಲ್ಲಿ ಕೃಷ್ಣ ಹೇಳಿದಂತೆ ಎಲ್ಲರ ಹೃದಯದಲ್ಲಿರುವ ಭಗವಂತನನ್ನು ಗುರುಗಳು ಕಂಡರು. 8ನೇ ವಯಸ್ಸಿನಿಂದ 88ರ ವರೆಗೆ ಎಂದೂ ಪೂಜೆ ಬಿಟ್ಟವರಲ್ಲ. “ನಾನು ಯಾರ್ಯಾರಲ್ಲಿದ್ದು ಹೇಳಿಸು ತ್ತೇನೋ ಅದನ್ನು ಆಗುವ ಹಾಗೆ ಮಾಡುವೆ’ ಎಂದು ನರಸಿಂಹ ದೇವರು ಹೇಳುವ ಮಾತು ಶ್ರೀಮದ್ಭಾಗವತ ಪುರಾಣದಲ್ಲಿದೆ. ಅದರಂತೆ ಮಧ್ವಾಚಾರ್ಯರ ಸರ್ವಜ್ಞ ಪೀಠದಲ್ಲಿದ್ದ ಗುರುಗಳ ಬಾಯಲ್ಲಿ ಶ್ರೀಕೃಷ್ಣ ಹೇಳಿಸಿ ಅದನ್ನು ಆಗುವಂತೆ ಮಾಡಿದ್ದಾನೆ ಎಂದು ಭಾವಿಸುತ್ತೇವೆ.

– ದೇಸೀ ಗೋವುಗಳ ರಕ್ಷಣೆ, ಇದರಿಂದಲೂ ಲಾಭ ಸಾಧ್ಯ ಎಂಬ ಬಗೆಗೆ ಜಾಗೃತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿದ್ದೀರಾ?
ನಮ್ಮ ನಾಲ್ಕು ಗೋಶಾಲೆಗಳ ಪ್ರಮುಖ ಗುರಿ ಮುದಿ, ಬಂಜೆ ಗೋವುಗಳು, ವೃಷಭಗಳನ್ನು ಸಾಕಿ ಸಲಹುವುದು. ಇವುಗಳಿಂದ ಲಾಭವಿಲ್ಲ. ತಿಂಗಳ ಒಟ್ಟು ಖರ್ಚು 30 ಲ.ರೂ. ಗೋಮಯ ಉತ್ಪನ್ನಗಳನ್ನು ಮಾಡುತ್ತೇವೆ. ಔಷಧೀಯ ಗುಣಗಳು ಇರುವುದು ದೇಸೀ ದನಗಳಲ್ಲಿ ಮಾತ್ರ. ನಮ್ಮಲ್ಲಿ ಎಲ್ಲ ತರಹದ ಗೋವುಗಳಿವೆ. ದೇಸೀ ದನಗಳಲ್ಲಿಯೂ ಗರ್ಭಿಣಿ, ಕರು, ಗಂಡುಕರುಗಳಿಂದ ಔಷಧೀಯ ಉತ್ಪನ್ನ ಸಾಧ್ಯವಿಲ್ಲ. ಸಾಧ್ಯವಾದಷ್ಟು ಗೋಅರ್ಕ ಮಾಡುತ್ತಿದ್ದೇವೆ. ದೇಸೀ ತಳಿಗಳ ದನಗಳಿಂದ ಆಗುವ ಲಾಭದ ಕುರಿತು ಜನಜಾಗೃತಿಯನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುತ್ತೇವೆ.

– ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್‌ನಲ್ಲಿ ದಕ್ಷಿಣ ಭಾರತ ಏಕೈಕ ಟ್ರಸ್ಟಿಯಾಗಿ ತಮ್ಮ ಕಾರ್ಯನಿರ್ವಹಣೆ ಏನು?
ಟ್ರಸ್ಟ್‌ ಉಸ್ತುವಾರಿ ಯಲ್ಲಿ ಮಂದಿರ ನಿರ್ಮಾಣ ಸಮಿತಿ ಇದೆ. ಟ್ರಸ್ಟ್‌ ಸಭೆ ಆಗಾಗ ನಡೆಯುತ್ತಿದ್ದು ಅದರಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಎರಡು ತಿಂಗಳಿಗೊಮ್ಮೆ ಭೇಟಿ ಕೊಡುತ್ತಿದ್ದೇವೆ. ನಿಧಿ ಸಂಗ್ರಹದ ಸಂದರ್ಭ ವಿಶೇಷವಾಗಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಸಂಚರಿಸಿ ತೊಡಗಿಕೊಂಡಿದ್ದೆವು.

– ಗರ್ಭಗುಡಿ ನಿರ್ಮಾಣದ ಬಳಿಕ ಇತರ ಕೆಲಸಗಳು ಪೂರ್ಣಗೊಳ್ಳಲು ಎಷ್ಟು ವರ್ಷ ತಗಲಬಹುದು?
ಗರ್ಭಗುಡಿ ಸಮೀಪದ ಕೆಲಸಗಳಿಗೆ ಕ್ರೇನ್‌ಗಳು ಓಡಾಡಬೇಕಾಗುತ್ತದೆ. ಹೀಗಾಗಿ ಬೇರೆ ಕೆಲಸಗಳನ್ನು ಅಲ್ಲಿ ನಡೆಸುವಂತಿಲ್ಲ. ಮಂದಿರಕ್ಕೆ ಸಂಬಂಧಿಸಿ ಇತರ ಸಾರ್ವಜನಿಕ ಅಗತ್ಯಗಳ ಕೆಲಸವನ್ನು ಐದು ವರ್ಷಗಳಲ್ಲಿ ಪೂರ್ತಿಗೊಳಿಸಲಾಗುವುದು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.