ಕ್ವಾರ್ಟರ್ ಫೈನಲಿಗೆ ಫ್ರಾನ್ಸ್
Team Udayavani, Dec 4, 2022, 11:03 PM IST
ದೋಹಾ: ಹಾಲಿ ಚಾಂಪಿಯನ್ ಫ್ರಾನ್ಸ್ ಪ್ರಶಸ್ತಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ರವಿವಾರ ರಾತ್ರಿ “ಅಲ್ ತುಮಾಮ ಸ್ಟೇಡಿಯಂ’ನಲ್ಲಿ ನಡೆದ ನಾಕೌಟ್ ಪಂದ್ಯದಲ್ಲಿ ಫ್ರೆಂಚ್ ಪಡೆ 3-1 ಅಂತರದಿಂದ ಪೋಲೆಂಡ್‌ಗೆ ಪೆಟ್ಟು ಕೊಟ್ಟಿತು.
ಒಲಿವರ್ ಗಿರೌಡ್ ಮತ್ತು ಕೈಲಿಯನ್ ಎಂಬಪೆ ಫ್ರಾನ್ಸ್‌ನ ಗೋಲು ವೀರನೆನಿಸಿದರು. ಗಿರೌಡ್ 44ನೇ ನಿಮಿ ಷದಲ್ಲಿ ಖಾತೆ ತೆರೆದು ಪೋಲೆಂಡ್‌ಗೆ
ಮೊದಲ ಆಘಾತವಿಕ್ಕಿದರು. ಇದ ರೊಂದಿಗೆ ತಮ್ಮ ಗೋಲುಗಳ ಸಂಖ್ಯೆ ಯನ್ನು 52ಕ್ಕೆ ಏರಿಸಿಕೊಂಡರು. ಇದು ಫ್ರಾನ್ಸ್ ಆಟಗಾರನೋರ್ವ ಹೊಡೆದ ಸರ್ವಾಧಿಕ ಗೋಲುಗಳ ದಾಖಲೆ.
ಎಂಬಪೆ ಅವಳಿ ಗೋಲ್!:
74ನೇ ಹಾಗೂ 90+ 1ನೇ ನಿಮಿಷದಲ್ಲಿ ಎಂಬಪೆ ಈ ಮುನ್ನಡೆಯನ್ನು ವಿಸ್ತರಿಸಿ ದರು. ಇದರೊಂದಿಗೆ ವಿಶ್ವಕಪ್ ನಲ್ಲಿ ಎಂಬಪೆ 9 ಗೋಲು ಹೊಡೆದಂತಾ ಯಿತು. 24 ವರ್ಷ ಪೂರ್ತಿಗೊಳ್ಳುವ ಮೊದಲೇ ವಿಶ್ವಕಪ್‌ನಲ್ಲಿ ಅತ್ಯಧಿಕ ಗೋಲು ಬಾರಿಸಿದ ಹೆಗ್ಗಳಿಕೆ ಎಂಬಪೆ ಅವರ ದಾಯಿತು. ಈ ಕೂಟದಲ್ಲಿ ಅತ್ಯಧಿಕ 5 ಗೋಲು ಹೊಡೆದ ಹೆಗ್ಗಳಿ ಕೆಗೂ ಅವರು ಪಾತ್ರರಾದರು.
ಪೋಲೆಂಡ್ ನಿರೀಕ್ಷೆಗೂ ಮಿಗಿಲಾದ ಪ್ರದರ್ಶನ ನೀಡಿದರೂ ಫ್ರೆಂಚ್ ಕೋಟೆಗೆ ಲಗ್ಗೆ ಹಾಕುವಲ್ಲಿ ವಿಫಲವಾಯಿತು. ಎಲ್ಲ ಮುಗಿದ ಬಳಿಕ 90+ 9ನೇ ನಿಮಿಷದಲ್ಲಿ ರಾಬರ್ಟ್ ಲೆವಾಂಡೋವ್‌ಸ್ಕಿ ಗೋಲೊಂದನ್ನು ಹೊಡೆದದ್ದೇ ಪೋಲೆಂಡ್ ಪಾಲಿನ ಸಮಾಧಾನ.
ಪೋಲೆಂಡ್ 1986ರ ಬಳಿಕ ಇದೇ ಮೊದಲ ಸಲ ವಿಶ್ವಕಪ್ ನಾಕೌಟ್‌ನಲ್ಲಿ ಕಾಣಿಸಿಕೊಂಡಿತ್ತು. ಅಂದಿನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಗೆ 4-0 ಅಂತರದಿಂದ ಶರಣಾಗಿತ್ತು.
40 ವರ್ಷಗಳ ಬಳಿಕ ಸೇಡು!:
ಫ್ರಾನ್ಸ್-ಪೋಲೆಂಡ್ ಕೊನೆಯ ಸಲ ವಿಶ್ವಕಪ್‌ನಲ್ಲಿ ಎದುರಾದದ್ದು 1982ರಲ್ಲಿ. ಅದು 3ನೇ ಸ್ಥಾನದ ಪ್ಲೇ-ಆಫ್ ಪಂದ್ಯವಾಗಿತ್ತು. ಅಂದಿನ ಮುಖಾಮುಖೀಯನ್ನು ಪೋಲೆಂಡ್ 3-2 ಗೋಲುಗಳಿಂದ ಗೆದ್ದಿತ್ತು. 40 ವರ್ಷಗಳ ಬಳಿಕ ಫ್ರಾನ್ಸ್ ಸೇಡು ತೀರಿಸಿಕೊಂಡಿತು!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.