ಬಾಡಿಗೆ ಮನೆಗೆ ಅಡ್ವಾನ್ಸ್ ಹಣ ಹೊಂದಿಸಲು ಮನೆ ಕಳ್ಳತನ: ದಂಪತಿ ಸೆರೆ
Team Udayavani, Dec 5, 2022, 12:50 PM IST
ಬೆಂಗಳೂರು: ಬಾಡಿಗೆ ಮನೆಗೆ ಮುಂಗಡ ಹಣ ಕೊಡಲು ಮನೆ ಕಳವು ಮಾಡುತ್ತಿದ್ದ ದಂಪತಿ ಜ್ಞಾನಭಾರತಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬನಶಂಕರಿಯ ವೀರಭದ್ರನಗರ ನಿವಾಸಿ ನಾಗರಾಜು(24) ಮತ್ತು ಆತನ ಪತ್ನಿ ರಮ್ಯಾ(23) ಬಂಧಿತರು. ಆರೋಪಿ ಗಳಿಂದ 5.25 ಲಕ್ಷ ರೂ. ಮೌಲ್ಯದ 65 ಗ್ರಾಂ ತೂಕದ ಚಿನ್ನಾಭರಣ, 500 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 2 ಬೈಕ್, ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಇತ್ತೀಚೆಗೆ ಸೊನ್ನೇನಹಳ್ಳಿಯ ಮಾರುತಿನಗರದಲ್ಲಿ ಹಾಡಹಗಲೇ ಲಿಂಗರಾಜ್ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಇತ್ತೀಚೆಗೆ ತನ್ನ ಪತ್ನಿ ರಮ್ಯಾಳಿಗೂ ಕಳ್ಳತ ನದ ಬಗ್ಗೆ ತಿಳಿಸಿ ಆಕೆಯನ್ನುಮನೆಗಳವು ಕೃತ್ಯಕ್ಕೆ ಬಳಸಿಕೊಂಡಿದ್ದ. ಪತ್ನಿ ರಮ್ಯಾ ಹೊರ ಗಡೆ ಸಾರ್ವಜನಿಕರ ಬಗ್ಗೆ ಗಮನಿಸುತ್ತಿದ್ದರೆ, ಆರೋಪಿ ನಾಗರಾಜ್ ಮನೆಗೆ ನುಗ್ಗಿ ಚಿನ್ನಾ ಭರಣ ದೋಚುತ್ತಿದ್ದ. ಅವರ ಬಂಧನದಿಂದ ಜ್ಞಾನಭಾರತಿ, ಮಾದನಾಯಕನಹಳ್ಳಿ ಠಾಣೆಯಲ್ಲಿ ತಲಾ ಒಂದು ಮನೆಗಳವು ಹಾಗೂ ರಾಜರಾಜೇಶ್ವರಿನಗರ ಠಾಣೆಯಲ್ಲಿ ದಾಖಲಾಗಿದ್ದ ಎರಡು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯ, ಮದುವೆ: ಆರೋಪಿ ನಾಗರಾಜ ಎರಡು ವರ್ಷಗಳ ಹಿಂದೆ ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯವಾದ ರಮ್ಯಾಳಿಗೆ ಪ್ರೇಮನಿವೇದನೆ ಮಾಡಿಕೊಂಡು ಮದುವೆಯಾಗಿದ್ದ.ಆರಂಭದಲ್ಲಿ ಆರೋಪಿ ತಾನೊಬ್ಬ ಕಳ್ಳ ಎಂಬ ವಿಚಾರವನ್ನು ರಮ್ಯಾ ಬಳಿ ಹೇಳಿರಲಿಲ್ಲ. ಬಳಿಕ ಆಕೆಗೂ ತನ್ನ ಅಪರಾಧ ಕೃತ್ಯಗಳ ಬಗ್ಗೆ ಹೇಳಿ, ಐಷಾರಾಮಿ ಜೀವನದ ಬಗ್ಗೆ ಆಸೆ ಹುಟ್ಟಿಸಿ, ಬಳಿಕ ಇಬ್ಬರು ಪರಸ್ಪರ ಮಾತನಾಡಿಕೊಂಡು ಮನೆಗಳವು ಮಾಡು ತ್ತಿದ್ದರು ಎಂದು ಪೊಲೀಸರು ಹೇಳಿದರು.
ಅಡ್ವಾನ್ಸ್ ಹಣ ಹೊಂದಿಸಲು ಕಳ್ಳತನ! : ಆರೋಪಿಗಳು ಹೊಸ ಬಾಡಿಗೆಗೆ ಮನೆ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಮನೆಗೆ ಮುಂಗಡ ಹಣ ಕೊಡಲು ಸದ್ಯ ಹಣ ಇರಲಿಲ್ಲ. ಆದರಿಂದ ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಮಾರುತಿನಗರದಲ್ಲಿ ಹಾಡಹಗಲೇ ಮನೆಗಳವು ಮಾಡಿದ್ದರು. ಆರೋಪಿ ರಮ್ಯಾ ಮನೆ ಹೊರಗೆ ನಿಂತು ಸಾರ್ವಜನಿಕ ಚಲನವಲನ ಗಮನಿಸಿದರೆ, ಆರೋಪಿ ನಾಗರಾಜು ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿದ್ದ. ನ.5ರಂದು ಬೆಳಗ್ಗೆ 11 ಗಂಟೆಗೆ ಮನೆ ಮಾಲೀಕ ಲಿಂಗರಾಜ್, ಪತ್ನಿ ಹಾಗೂ ಮಕ್ಕಳೊಂದಿಗೆ ಮಾರುತಿನಗರ ಸರ್ಕಲ್‌ನಲ್ಲಿರುವ ತಮ್ಮ ಕೇಬಲ್ ಅಂಗಡಿಗೆ ತೆರಳಿದ್ದರು. ಈ ವೇಳೆ ಮನೆಯ ಬಾಗಿಲಿಗೆ ಬೀಗ ಹಾಕಿರಲಿಲ್ಲ. ಅದನ್ನು ನೋಡಿದ ಆರೋಪಿ ನಾಗರಾಜ ಏಕಾಏಕಿ ಲಿಂಗರಾಜ್ ಮನೆಗೆ ನುಗ್ಗಿ ಚಿನ್ನಾಭರಣ ದೋಚಲು ಮುಂದಾಗಿದ್ದ. ಬ್ಯಾಗ್ ತೆಗೆದುಕೊಂಡು ಹೋಗಲು ಲಿಂಗರಾಜ್ ಅದೇ ವೇಳೆ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯೊಳಗೆ ಏನೋ ಶಬ್ಧವಾಗುವುದನ್ನು ಗ್ರಹಿಸಿ ಮನೆ ಬಾಗಿಲ ಬಳಿ ಹೋಗುವಷ್ಟರಲ್ಲಿ ಮನೆ ಒಳಗಿಂದ ಆರೋಪಿ ನಾಗರಾಜ್ ಹೊರಗೆ ಬಂದು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.