ತನ್ನನು ತಾನೇ ಪಣಕ್ಕಿಟ್ಟು ಮನೆ ಮಾಲೀಕನೊಂದಿಗೆ ಲುಡೋ ಆಡಿ ಸೋತ ಮಹಿಳೆ: ಮುಂದೆ ಆಗಿದ್ದೇನು?
ಹಣ ಖಾಲಿಯಾಗಿ ಮುಂದೆ ಏನು ಮಾಡುವುದೆನ್ನುವ ಯೋಚನೆಯಲ್ಲಿದ್ದಳು
Team Udayavani, Dec 5, 2022, 1:44 PM IST
ಉತ್ತರ ಪ್ರದೇಶ: ಯಾವುದು ಕೂಡ ಚಟವಾಗಬಾರದು. ಇಲ್ಲೊಬ್ಬಳು ಮಹಿಳೆಗೆ ಲುಡೋ ಆಟವೊಂದು ಚಟವಾಗಿ ಇಕ್ಕಟ್ಟಿಗೆ ಸಿಲುಕಿರುವ ಘಟನೆ ಉತ್ತರ ಪ್ರದೇಶದ ಕೊತ್ವಾಲಿ ಗ್ರಾಮದ ದೇವಕಲಿ ಪ್ರದೇಶದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ರೇಣು ತನ್ನ ಗಂಡನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾಳೆ. ಗಂಡ ಜೈಪುರಕ್ಕೆ ಕೆಲಸಕ್ಕೆ ಹೋಗುವುದರಿಂದ ಆಕೆಗೆ ತಿಂಗಳಿಗಿಷ್ಟು ಎಂದು ಗಂಡ ಹಣ ಕಳುಹಿಸುತ್ತಿದ್ದ. ಆ ಹಣದೊಂದಿಗೆ ಕುಟುಂಬ ನಿಭಾಯಿಸಬೇಕಾದ ರೇಣು ಲುಡೋ ಆಟದಲ್ಲಿ ಅದನ್ನು ಬೆಟ್ಟಿಂಗ್ ಗೆ ಹಾಕುತ್ತಾಳೆ.
ಇದನ್ನೂ ಓದಿ: ಉ.ಕ. ದಲ್ಲಿ ಸೀರೆ, ಕುಕ್ಕರ್ ಹಂಚಿಕೆ ಅಬ್ಬರ; ಆಕಾಂಕ್ಷಿಗಳಿಂದ ಮನವೊಲಿಕೆ ಕಸರತ್ತು
ದಿನ ನಿತ್ಯ ಮನೆ ಮಾಲೀಕರೊಂದಿಗೆ ಲುಡೋ ಆಟವಾಡುವ ರೇಣು, ಸ್ವಲ್ಪ ಸ್ವಲ್ಪ ಹಣವನ್ನು ಬೆಟ್ಟಿಂಗ್ ಗಾಗಿ ಹಾಕುತ್ತಿದ್ದಳು. ಈ ಹಣ ಖಾಲಿಯಾಗಿ ಮುಂದೆ ಏನು ಮಾಡುವುದೆನ್ನುವ ಯೋಚನೆಯಲ್ಲಿದ್ದ ರೇಣು ಒಂದು ದಿನ ಲುಡೋವನ್ನು ತನ್ನನು ತಾನೇ ಪಣಕ್ಕಿಟ್ಟು ಆಡುತ್ತಾರೆ. ಈ ಆಟದಲ್ಲಿ ರೇಣು ಸೋಲುತ್ತಾರೆ.
ಸೋತ ಬಳಿಕ ಏನು ಮಾಡುವುದೆಂದು ಈ ವಿಚಾರವನ್ನು ಗಂಡನಿಗೆ ಹೇಳುತ್ತಾರೆ. ಪತಿ ಈ ಬಗ್ಗೆ ಪ್ರತಾಪಗಢ ಠಾಣೆಯಲ್ಲಿ ದೂರು ನೀಡುತ್ತಾರೆ. ಇದರ ಕುರಿತು ರೇಣು ಪತಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಈ ಪೋಸ್ಟ್ ವೈರಲ್ ಆಗಿದೆ.
ಲುಡೋದಲ್ಲಿ ಸೋತಿದ್ದರಿಂದ ರೇಣು ಮನೆ ಮಾಲೀಕನೊಂದಿಗೆ ವಾಸಿಸಲು ಶುರು ಮಾಡಿದ್ದಾಳೆ. ಅವಳನ್ನು ಅಲ್ಲಿಂದ ವಾಪಾಸ್ ಕರೆ ತರಲು ಪ್ರಯತ್ನಿಸಿದೆ ಆದರೆ ಅವಳು ಬರಲು ಒಪ್ಪಲಿಲ್ಲ ಎಂದು ರೇಣು ಪತಿ ಹೇಳುತ್ತಾರೆ.
ಶೀಘ್ರದಲ್ಲಿ ಮನೆಮಾಲೀಕನನ್ನು ನಾವು ಸಂಪರ್ಕಿಸಿ ಇದರ ಕುರಿತು ತನಿಖೆ ಆರಂಭಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.