ಮಧುಗಿರಿ: ಜೆಇ ಲಸಿಕೆ ಪಡೆದ ಮಕ್ಕಳಿಗೆ ತಲೆಸುತ್ತು; ಆಸ್ಪತ್ರೆಗೆ ದಾಖಲು
Team Udayavani, Dec 5, 2022, 2:27 PM IST
ಮಧುಗಿರಿ: ರಾಜ್ಯಾದ್ಯಂತ ಆರಂಭಗೊಂಡ ಜೆಇ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ ಲಸಿಕೆ ಪಡೆದ ಮಕ್ಕಳಿಗೆ ತಲೆಸುತ್ತು ಬಂದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದ ಶಾಲೆಯ 9 ಮಕ್ಕಳು ತಲೆಸುತ್ತು ಬಂದು ಆಸ್ಪತ್ರೆ ಸೇರಿದವರಲ್ಲಿ 8 ನೇ ತರಗತಿಯ ಆಯಿಷಾ, ಮೋರ್ನಿ, ಶೈಲಜಾ, ಉಷಾರಾಣಿ, ಸಂಜನಾ, ಸುಪ್ರಿಯಾ, ಸಹನಾ ಹಾಗೂ 7 ನೇ ತರಗತಿಯ ಸ್ನೇಹ ಹಾಗೂ ವೇದ ತಲೆಸುತ್ತು ಬಂದ ವಿದ್ಯಾರ್ಥಿಗಳು.
ಈ ವಿಚಾರ ತಿಳಿದಾಕ್ಷಣ ಟಿಹೆಚ್ಓ ಡಾ.ರಮೇಶ್ ಬಾಬು ತಮ್ಮ ವಾಹನದಲ್ಲೇ ಮಕ್ಕಳನ್ನು ಆಸ್ಪತ್ರೆಗೆ ಕರೆತಂದರು. ಪ್ರಥಮ ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಂಡ ಪರಿಣಾಮ ಆತಂಕ ದೂರವಾಯಿತು. ಇದಕ್ಕೂ ಮೊದಲು ಮಕ್ಕಳಿಗೆ ತಲೆಸುತ್ತು, ಸುಸ್ತಾಗುವುದು ಹಾಗೂ ಚಳಿಯ ಅನುಭವಾಗುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿತ್ತು.
ಸ್ಥಳಕ್ಕೆ ಶಾಸಕ ಎಂ.ವಿ.ವೀರಭದ್ರಯ್ಯ, ಪರಿಷತ್ ಸದಸ್ಯ ಆರ್. ರಾಜೇಂದ್ರ ಭೇಟಿ ನೀಡಿದ್ದು, ಅಧಿಕಾರಿಗಳು, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಶಂಕರ್ ನಾರಾಯಣ್ , ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಹಾಗೂ ಶಿಕ್ಷಕರು ಜೊತೆಗಿದ್ದು ಮುಂಜಾಗ್ರತೆ ಕ್ರಮ ವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.