ರೈತರಲ್ಲಿ ಆತಂಕ ಸೃಷ್ಟಿಸಿದ ಹವಾಮಾನ ವೈಪರೀತ್ಯ

Team Udayavani, Dec 5, 2022, 3:34 PM IST

14

ಕಾರಟಗಿ: ಹವಾಮಾನ ವೈಪರೀತ್ಯದ ಪರಿಣಾಮ ಕಳೆದ 10-15 ದಿನಗಳಿಂದ ತಾಲೂಕಿನಾದ್ಯಂತ ಭತ್ತದ ಕಟಾವು ಭರದಿಂದ ಸಾಗಿದೆ. ನಿತ್ಯ ಮೋಡ ಕವಿದ ವಾತಾವರಣ ಆತಂಕ ಸೃಷ್ಟಿಸಿದ್ದರಿಂದ ರೈತರು ತುರುಸಿನಿಂದ ಭತ್ತ ಕಟಾವು ಮಾಡಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ತಾಲೂಕಿನಲ್ಲಿ ಭತ್ತ ಕಟಾವು ಮಾಡಿದ ನಂತರ ಒಣಗಿಸುವುದು ತಲೆನೋವಾಗಿ ಪರಿಣಮಿಸಿದೆ.

ದಿಢೀರ್‌ ಮೋಡ ಕವಿಯುವುದು, ಕ್ಷಣದಲ್ಲೇ ತುಂತುರು ಮಳೆ, ದಿಢೀರ್‌ ಬಿಸಿಲು, ಹೀಗೆ ಆಗಾಗ ವಾತಾವರಣದಲ್ಲಿ ಬದಲಾವಣೆ ಆಗುತ್ತಿರುವುದರಿಂದ ರೈತರು ಭತ್ತ ಒಣಗಿಸಲು ಹರಸಾಹಸ ಪಡಬೇಕಾಗಿದೆ. ಮೋಡ ಕವಿಯುತ್ತಲೇ ಒಣಗಲು ಹಾಕಿದ್ದ ಭತ್ತವನ್ನು ಒಟ್ಟುಗೂಡಿಸಬೇಕು. ಮತ್ತೆ ವಾತಾವರಣ ಬದಲಾಗುತ್ತಲೇ ಒಣಗಿಸಲು ಹರವು ಬೇಕು.

ಹೀಗೆ ವಾತಾವರಣ ಬದಲಾವಣೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಸೂಕ್ತ ಬಯಲು ಜಾಗೆ ಇಲ್ಲದೇ ರಸ್ತೆ ಇಕ್ಕೆಲಗಳಲ್ಲಿ ಭತ್ತದ ರಾಶಿಗಳನ್ನು ಹಾಕಿ ಒಣಗಿಸಲು ಮುಂದಾಗುತ್ತಿದ್ದಾರೆ. ತಾಲೂಕಿನಲ್ಲಿ ಶೇ. 70ರಷ್ಟು ಭತ್ತದ ಕಟಾವು ಕಾರ್ಯ ಮುಗಿದಿದೆ. ಇನ್ನು ಶೇ. 30ರಷ್ಟು ಮಾತ್ರ ಬಾಕಿ ಉಳಿದಿದ್ದು, ಈ ಬಾರಿ ತಾಲೂಕಿನ ಕೆಲ ಭಾಗದಲ್ಲಿ ಭತ್ತದ ಇಳುವರಿ ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಇನ್ನು ಕೆಲವೆಡೆ ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಟಿತಗೊಂಡಿದೆ ಎಂಬುದು ಕೆಲ ರೈತರ ಅನಿಸಿಕೆಯಾಗಿದೆ.

ಅಲ್ಲದೇ ಮಾರುಕಟ್ಟೆಯಲ್ಲಿ ಭತ್ತಕ್ಕೆ ಉತ್ತಮ ಬೆಲೆ ಇರುವುದರಿಂದ ರೈತರಲ್ಲಿ ಸಮಾದಾನ ತಂದಿದೆ. ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಭತ್ತಕ್ಕೆ 1570ರಿಂದ 1630, ಆರ್‌ಎನ್‌ಆರ್‌ ಭತ್ತ 1800 ರೂ. ವರೆಗೆ ಇದೆ. ಆದರೆ ಮಾರುಕಟ್ಟೆಯಲ್ಲಿ ಮಾತ್ರ ಮಧ್ಯವರ್ತಿಗಳು ಬಾಯಿಗೆ ಬಂದಂತೆ ಬೆಲೆ ಕಟ್ಟುತ್ತಾರೆ. ಭತ್ತ ಕಟಾವಿಗೆ ತಾಲೂಕಿನಲ್ಲಿ ಯಂತ್ರಗಳು ಸಾಕಷ್ಟು ಲಭ್ಯವಿರುವುದರಿಂದ ರೈತರಿಗೆ ಈ ಬಾರಿ ಯಾವುದೇ ತೊಂದರೆಯಾಗಲಿಲ್ಲ. ಆದರೆ ಭತ್ತ ಕಟಾವು ಯಂತ್ರದ ಬಾಡಿಗೆ ಬೆಲೆ ಮಾತ್ರ ದುಬಾರಿಯಾಗಿದೆ.

ದುಬಾರಿ ಬೆಲೆಯ ರಸಗೊಬ್ಬರ, ಕ್ರಿಮಿನಾಶಕ ಉಪಯೋಗಿಸಿ ಭತ್ತ ಬೆಳೆಯುವುದು ಬಹಳ ಕಷ್ಟ. ಹೀಗಾಗಿ ರೈತರು ಪ್ರತಿ ಬಾರಿ ಒಂದೊಂದು ಸಮಸ್ಯೆ ಎದುರಾಗಿ ಸಾಲದ ಸುಳಿಯಲ್ಲೇ ಬದುಕಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು. ಅಂದಾಗ ಮಾತ್ರ ರೈತರು ಚೇತರಿಸಿಕೊಳ್ಳುತ್ತಾರೆ.  –ವೀರಭದ್ರಪ್ಪ ಟಿ. ಹಣವಾಳ ರೈತ

ಟಾಪ್ ನ್ಯೂಸ್

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

ed raid on mysore muda office

Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

100 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ: ಶಿವರಾಜ್‌ ತಂಗಡಗಿ

100 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ: ಶಿವರಾಜ್‌ ತಂಗಡಗಿ

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

Minister; ಸತೀಶ್ ಜಾರಕಿಹೊಳಿ ಸಿಎಂ‌ ಆಗಲಿ: ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ

Minister; ಸತೀಶ್ ಜಾರಕಿಹೊಳಿ ಸಿಎಂ‌ ಆಗಲಿ ಎಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ

9-gangavathi

Anegundi ಸ್ವಚ್ಛ ಗ್ರಾಮಕ್ಕೆ ಸಹಕರಿಸಿ: ಸಿಇಓ ರಾಹುಲ್ ರತ್ನಂ ಪಾಂಡೆ;ಗ್ರಾ.ಪಂ. ಸಾಮಾನ್ಯ ಸಭೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

10

Katpadi: ತ್ಯಾಜ್ಯ ಗುಂಡಿಯಾಗುತ್ತಿದೆ ಕುರ್ಕಾಲು ಮದಗ

Belagavi: UT Khader, Basavaraja Horatti visited Suvrana vidhasoudha

Belagavi: ಸುವರ್ಣ ವಿಧಾನಸೌಧಕ್ಕೆ‌ ಯು.ಟಿ.ಖಾದರ್‌, ಬಸವರಾಜ ಹೊರಟ್ಟಿ ಭೇಟಿ

16-bng

Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.