ಮಂಗಳೂರು ಪ್ರಕರಣ: ಕೇರಳದ 8 ವಸತಿ ಗೃಹಗಳಲ್ಲಿ ತಂಗಿದ್ದ ಆರೋಪಿ ಶಾರೀಕ್
Team Udayavani, Dec 7, 2022, 7:15 AM IST
ಕಾಸರಗೋಡು : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರೀಕ್ ಕೊಚ್ಚಿಯಲ್ಲಿ ಈ ಹಿಂದೆ ಎಂಟು ವಸತಿ ಗೃಹಗಳಲ್ಲಿ ತಂಗಿದ್ದನೆಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗೆ ಮಾಹಿತಿ ಲಭಿಸಿದೆ. ಎಲ್ಲ 8 ಕೇಂದ್ರಗಳಿಗೆ ತನಿಖಾ ತಂಡ ತೆರಳಿ ಮಾಹಿತಿ ಸಂಗ್ರಹಿಸಿದೆ.
ಆಲುವಾ ರೈಲು ನಿಲ್ದಾಣ, ಎರ್ನಾಕುಳಂ, ನಾರ್ತ್ ರೈಲ್ವೇ ಸ್ಟೇಶನ್‌ಗಳ ಪರಿಸರದ ವಸತಿ ಗೃಹಗಳಲ್ಲಿ ತಂಗಿದ್ದನು. ಅದರ ಸಿಸಿ ಕೆಮಾರ ದೃಶ್ಯಗಳನ್ನು ತನಿಖಾ ತಂಡ ಸಂಗ್ರಹಿಸಿದೆ. ಆತ
ತಂಗಿದ್ದ ವಸತಿ ಗೃಹಗಳ ವಿಳಾಸದಲ್ಲಿ ಆತನಿಗೆ ಹಲವು ವಸ್ತುಗಳು ಪಾರ್ಸೆಲ್ ಗಳು ನಿರಂತರವಾಗಿ ಬಂದಿದ್ದುವು. ಅವುಗಳನ್ನು ಎಲ್ಲಿಂದ ಕಳುಹಿಸಿಕೊಡಲಾಗಿದೆ ಎಂದು ಪತ್ತೆಹಚ್ಚಲು ತನಿಖಾ ತಂಡ ಮುಂದಾಗಿದೆ.
ಕೊಚ್ಚಿಯ ಪೋರ್ಟ್ ಕೊಚ್ಚಿ ಮುನಬಂನಲ್ಲಿ ತಂಗಿದ್ದ ಶಾರೀಕ್ ಅಲ್ಲಿ ಹಲವರನ್ನು ಭೇಟಿಯಾಗಿ ಮಾತನಾಡಿದ್ದ. ಆ ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಲಾಗುತ್ತಿದೆ. ಪ್ರತೀ ವಸತಿ ಗೃಹದಲ್ಲಿ ಆತ ಎರಡರಿಂದ ನಾಲ್ಕು ದಿನಗಳ ತನಕ ತಂಗಿದ್ದ. ಆಲುವಾದ ವಸತಿ ಗೃಹವೊಂದರಲ್ಲಿ ಕೊಠಡಿ ಪಡೆದು ಕೆಲವು ದಿನಗಳ ಬಳಿಕ ತೆರವುಗೊಳಿಸಿದ್ದ. ಆ ಬಳಿಕ ಆತನ ಹೆಸರಿಗೆ ಪಾರ್ಸೆಲ್ ಬಂದಿತ್ತು. ಆ ಬಗ್ಗೆ ವಸತಿ ಗೃಹದವರು ಫೋನ್ ಮೂಲಕ ತಿಳಿಸಿದ್ದು, ಆತ ಮರಳಿ ಬಂದು ಅದನ್ನು ಕೊಂಡೊಯ್ದಿದ್ದ. ಉಗ್ರಗಾಮಿ ಚಟುವಟಿಕೆಗಳಿಗಾಗಿ ಹಣ ಸಂಗ್ರಹಿಸುವ ಉದ್ದೇಶದಿಂದ ಪದೇ ಪದೆ ಕೇರಳಕ್ಕೆ ಬಂದಿದ್ದನೆಂದು ತಿಳಿಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.