![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 7, 2022, 10:25 AM IST
ಉತ್ತರ ಪ್ರದೇಶ: ಕಳೆದ ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ಲುಡೋ ಆಟದಲ್ಲಿ ತನ್ನನು ತಾನೇ ಪಣಕ್ಕಿಟ್ಟು ಸೋತು ಮನೆ ಮಾಲೀಕನೊಂದಿಗೆ ವಾಸಿಸುತ್ತಿದ್ದಾಳೆ ಎಂದು ಪತಿಯೇ ಠಾಣೆಗೆ ದೂರು ಕೊಟ್ಟಿದ್ದ. ಈಗ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಘಟನೆ ಹಿನ್ನೆಲೆ:
ನಿತ್ಯ ಮನೆ ಮಾಲೀಕರೊಂದಿಗೆ ಲುಡೋ ಆಟವಾಡುವ ರೇಣು, ಸ್ವಲ್ಪ ಸ್ವಲ್ಪ ಹಣವನ್ನು ಬೆಟ್ಟಿಂಗ್ ಗಾಗಿ ಹಾಕುತ್ತಿದ್ದಳು. ಈ ಹಣ ಖಾಲಿಯಾಗಿ ಮುಂದೆ ಏನು ಮಾಡುವುದೆನ್ನುವ ಯೋಚನೆಯಲ್ಲಿದ್ದ ರೇಣು ಒಂದು ದಿನ ಲುಡೋ ಆಟಕ್ಕಾಗಿ ತನ್ನನ್ನು ತಾನೇ ಪಣಕ್ಕಿಟ್ಟು ಆಡುತ್ತಾರೆ. ಈ ಆಟದಲ್ಲಿ ರೇಣು ಸೋಲುತ್ತಾರೆ.
ಸೋತ ಬಳಿಕ ಏನು ಮಾಡುವುದೆಂದು ಈ ವಿಚಾರವನ್ನು ಗಂಡನಿಗೆ ಹೇಳುತ್ತಾರೆ. ಪತಿ ಈ ಬಗ್ಗೆ ಪ್ರತಾಪಗಢ ಠಾಣೆಯಲ್ಲಿ ದೂರು ನೀಡುತ್ತಾರೆ. ಇದರ ಕುರಿತು ರೇಣು ಪತಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಈ ಪೋಸ್ಟ್ ವೈರಲ್ ಆಗಿತ್ತು.
ಇದನ್ನೂ ಓದಿ: ಅಯ್ಯಪ್ಪನ ಮುಂದೆ ಎಲ್ಲರೂ ಸಾಮಾನ್ಯ ಭಕ್ತರೇ.. ಹೆಲಿಕಾಪ್ಟರ್, ವಿಐಪಿ ಸೇವೆಗೆ ಕೇರಳ ಹೈಕೋರ್ಟ್ ನಿರ್ಬಂಧ
ಗಂಡ ಉಮೇಶ್ ಈ ಬಗ್ಗೆ ಠಾಣೆಗೆ ದೂರು ಕೊಟ್ಟಿದ್ದರು. ತನ್ನ ಪತ್ನಿ ಈಗ ಮನೆ ಮಾಲೀಕನೊಂದಿಗೆ ವಾಸಿಸುತ್ತಿದ್ದಾಳೆ ಅವಳನ್ನು ಕರೆದರೂ ಅವಳು ಬರಲಿಲ್ಲ ಎಂದು ಪೊಲೀಸರಿಗೆ ಹೇಳಿದ್ದರು. ಈ ಪ್ರಕರಣದಲ್ಲಿ ರೇಣು ಅವರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದು, ತನಗೆ ಯಾವುದೇ ಚಟಗಳಿಲ್ಲ. ಆದರೆ ತನ್ನ ಗಂಡಿಗೆ ಜೂಜಾಟದ ಚಟವಿದೆ. ನಾನು ಮನೆ ಕೆಲಸದವಳು ಜೀವನವನ್ನು ಕಷ್ಟಪಟ್ಟು ನಿಭಾಯಿಸಿಕೊಂಡು ಹೋಗುತ್ತೇನೆ ಎಂದಿದ್ದಾರೆ.
ಪೊಲೀಸರಿಗೆ ಇದರಿಂದ ತಲೆಬಿಸಿಯಾಗಿದ್ದು, ಪ್ರಕರಣವನ್ನು ಬೇಧಿಸಲು ಪೊಲೀಸರು ಈ ಮೊದಲು ದೂರು ಕೊಟ್ಟ ರೇಣು ಅವರ ಪತಿ ಉಮೇಶ್ ಅವರ ಹುಡುಕಾಟ ನಡೆಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.