5 ಲಕ್ಷ ರೂ. ಪರಿಹಾರದಲ್ಲಿ ದಕ್ಕಿದ್ದು ಕಿಂಚಿತ್ತು; ಅಡಿಪಾಯದಲ್ಲೇ ನಿಂತ ಮನೆ
ಅಜ್ಜಿ ಮೇಲೆ ಸ್ವಲ್ಪವೂ ಕರುಣೆ ತೋರದ ಅಧಿಕಾರಿಗಳು!
Team Udayavani, Dec 10, 2022, 4:04 PM IST
ಕಾರ್ಕಳ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರ್ವಾಶೆಯ ವೃದ್ಧೆಯೋರ್ವರಿಗೆ ದಕ್ಕಬೇಕಿದ್ದ ಪರಿಹಾರ ಮೊತ್ತ ಪೂರ್ಣ ಸಿಗದೆ ಅವರದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ.
ಕೆರ್ವಾಶೆ ಭಾಗದಲ್ಲಿ 2022ರ ಜೂನ್‌ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಕೆರ್ವಾಶೆ ಗ್ರಾ.ಪಂ. ವ್ಯಾಪ್ತಿಯ 75ರ ವಯಸ್ಸಿನ ಶೆಟ್ಟಿಬೆಟ್ಟು ಸರಸ್ವತಿ ಗುಡಿಗಾರ್ ಅವರ ಮನೆಗೆ ಹಾನಿಯಾಗಿತ್ತು. ಮನೆಯ ಗೋಡೆ ಕುಸಿದು ಬಿದ್ದು, ಹೆಂಚುಗಳು ಧರಾಶಾಹಿಯಾಗಿ ಮನೆ ಕಳೆದುಕೊಂಡಿದ್ದರು.
ಸರಸ್ವತಿ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರಿಬ್ಬರನ್ನು ಮದುವೆ ಮಾಡಿಕೊಟ್ಟಿದ್ದರು. ಅವರು ಕೂಲಿಕೆಲಸ ಮಾಡಿ ಮಾಡಿ ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು. ಮನೆ ಕಳೆದು ಕೊಂಡ ವೃದ್ಧೆ ಮತ್ತೆ ಮನೆ ನಿರ್ಮಿಸಲು ಧನಮೂಲವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಸರಕಾರದ ಪರಿಹಾರವನ್ನೇ ನಂಬುವುದು ಅವರಿಗೆ ಅನಿವಾರ್ಯವಾಗಿತ್ತು. ಹಾನಿ ವೇಳೆ ಕಂದಾಯ ಅಧಿಕಾರಿಗಳು ವೃದ್ಧೆಯ ಮನೆಗೂ ಭೇಟಿ ನೀಡಿ, ಹಾನಿ ಲೆಕ್ಕ ಹಾಕಿ ಪರಿಹಾರ ಭರವಸೆಯನ್ನು ನೀಡಿದ್ದರು. ನೆರೆ ಹಾವಳಿಗೊಳಗಾದ ಮನೆಗಳ ಪುನರ್ ನಿರ್ಮಾಣ, ದುರಸ್ತಿಗೆ ಸರಕಾರ ಪರಿಹಾರ ನೀಡುತ್ತಿದೆ. ಶೇ. 75ಕ್ಕಿಂತ ಮೇಲ್ಪಟ್ಟು ಹಾನಿಯಾದಲ್ಲಿ 5 ಲಕ್ಷ ರೂ. ಪರಿಹಾರ ವಿತರಿಸುತ್ತದೆ. ಸರಸ್ವತಿ ಗುಡಿಗಾರ್ ಮನೆ ಶೇ.75ರಷ್ಟು ಹಾನಿಯಾಗಿದ್ದರಿಂದ 5 ಲಕ್ಷ ರೂ. ಪರಿಹಾರ ಪಡೆಯಲು ಅರ್ಹವಾಗಿತ್ತು.
ತಹಶೀಲ್ದಾರರೇ ಹೇಳಬೇಕಾಯಿತು!
ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ವೃದ್ಧೆ ಹೆಸರಿಗೆ ಪರಿಹಾರ 5 ಲಕ್ಷ ರೂ. ಮಂಜೂರಾಗಿತ್ತು. ಆದರೇ 3 ತಿಂಗಳು ಪಂ. ಅಧಿಕಾರಿಗಳು ಮಂಜೂರಾದ ಬಗ್ಗೆ ಅಜ್ಜಿಗೆ ಮಾಹಿತಿಯನ್ನೇ ನೀಡಿರಲಿಲ್ಲ. ತಹಶೀಲ್ದಾರ್ ಬಳಿ ತೆರಳಿ ವಿಚಾರಿಸಿದಾಗಲಷ್ಟೆ ಪರಿಹಾರ ಮಂಜೂರಾದ ವಿಚಾರ ಗಮನಕ್ಕೆ ಬಂದಿದೆ ಎಂದು ಸರಸ್ವತಿ ಗುಡಿಗಾರ್ ಅಸಹಾಯಕತೆ ಬಿಚ್ಚಿಡುತ್ತಿದ್ದಾರೆ.
ಅಡಿಪಾಯದಿಂದ ಮನೆ ಮೇಲೆ ಏರಿಲ್ಲ!
ಮೊದಲ ಕಂತಿನ ಹಣ 95 ಸಾವಿರ ರೂ. ಫಲಾನುಭಾವಿ ಖಾತೆಗೆ ಬಿದ್ದಿದೆ. ಅದರಲ್ಲಿ ಮನೆಯ ಅಡಿಪಾಯ ಕಾಮಗಾರಿ ನಡೆಸಿದ್ದು. ಬಳಿಕದ ಪರಿಹಾರ ಹಣ ಖಾತೆಗೆ ಬರಲೇ ಇಲ್ಲ. ಬಾಕಿ ಉಳಿದ ಮೊತ್ತಕ್ಕಾಗಿ ಅಜ್ಜಿ, ಸಂಬಂಧಿಕರು ಕಚೇರಿಗಳಿಗೆ ಅಲೆದಾಡುತ್ತಲೇ ಇದ್ದಾರೆ. ಮನೆಯಿಲ್ಲದೆ ಇದೀಗ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಬಾಡಿಗೆ ನೀಡುವುದಕ್ಕೂ ಅಜ್ಜಿ ಬಳಿ ಹಣವಿಲ್ಲ.
ಐದು ಹಂತಗಳಲ್ಲಿ ಪರಿಹಾರ
ಅರ್ಹ ಫಲಾನುಭವಿಗಳಿಗೆ ಜಿಪಿಎಸ್ ಛಾಯಾಚಿತ್ರಗಳ ಆಧಾರದಲ್ಲಿ 5 ಕಂತುಗಳಲ್ಲಿ ಪರಿಹಾರ ಹಣ ಖಾತೆಗೆ ಜಮೆಗೊಳ್ಳುತ್ತದೆ. ಆರಂಭಿಕ ಹಂತ 95 ಸಾವಿರ ರೂ., ಎರಡನೇ ಹಂತದಲ್ಲಿ ತಳಪಾಯಕ್ಕೆ 1 ಲಕ್ಷ ರೂ., 3ನೇ ಹಂತದಲ್ಲಿ ಗೋಡೆ 1 ಲಕ್ಷ ರೂ., 4ನೇ ಹಂತದಲ್ಲಿ ಛಾವಣಿಗೆ 1 ಲಕ್ಷ ರೂ., ಪೂರ್ಣವಾಗುವ ವೇಳೆಗೆ ಒಟ್ಟು 5 ಲಕ್ಷ ರೂ. ಫಲಾನುಭವಿಗೆ ಸಂದಾಯವಾಗುತ್ತದೆ.
ಪರಿಹಾರ ಹಿಂಪಡೆಯುವ ಭೀತಿ
ಪರಿಹಾರ ಮಂಜೂರಾತಿ ಬಳಿಕ 1 ತಿಂಗಳೊಳಗೆ ಮನೆ ತಳಪಾಯ ಪ್ರಾರಂಭಿಸಿ ಗರಿಷ್ಠ 10 ತಿಂಗಳೊಳಗೆ ಪೂರ್ಣಗೊಳಿಸಬೇಕಿದೆ. ಒಂದು ವೇಳೆ ನಿಗದಿಪಡಿಸಿದ ಅವಧಿಯೊಳಗೆ ನಿರ್ಮಾಣ ಮಾಡಿಕೊಳ್ಳದಿದ್ದಲ್ಲಿ ನೀಡಲಾದ ಅನುದಾನವನ್ನು ಹಿಂಪಡೆಯಲಾಗುತ್ತದೆ ಎಂದು ಆದೇಶದಲ್ಲಿದೆ. ಆದರೆ ಮನೆ ನಿರ್ಮಾಣ ಅವಧಿ ವಿಳಂಬವಾಗಿದ್ದು ಪರಿಹಾರ ಧನ ಕೈಗೆ ಸಿಗದೆ ಮರಳಿ ಹೋಗುವ ಭೀತಿ ತಲೆದೋರಿದೆ.
ಡಿಸಿಗೆ ದೂರಿತ್ತರೂ ಪ್ರಯೋಜವಿಲ್ಲ!
ಫಲಾನುಭವಿ ವಿಳಾಸವನ್ನು ಸಂಬಂಧ ಪಟ್ಟ ಇಲಾಖೆಯವರು ತಾಂತ್ರಿಕ ದೋಷದಿಂದ ಕೆರ್ವಾಶೆ ಗ್ರಾ.ಪಂ.ಗೆ ಕಳುಹಿಸುವ ಬದಲು ಶಿರ್ಲಾಲು ಗ್ರಾ.ಪಂ.ಗೆ ಕಳುಹಿಸಿರುತ್ತಾರೆ. ಇದರಿಂದ 2ನೇ ಹಂತದಲ್ಲಿ ಪರಿಹಾರ ಫಲಾನುಭವಿಗೆ ದೊರಕುವಲ್ಲಿ ಅಡ್ಡಿಯಾಗಿದೆ. 3ನೇ ಹಂತದ ಹಣ ನಿಗಮದಿಂದ ಬರಬೇಕಿದ್ದು ಫಲಾನುಭವಿಯ ವಿಳಾಸದಲ್ಲಿನ ಗೊಂದಲದಿಂದ ಸಮಸ್ಯೆಗಳಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ಹಲವು ಬಾರಿ ಲಿಖೀತ ದೂರು ಸಲ್ಲಿಸಿದ್ದರೂ ಈವರೆಗೆ ಸ್ಪಂದನೆಯಿಲ್ಲ ಎಂದು ವೃದ್ಧೆಯ ಅಳಿಯ ಸುರೇಂದ್ರ ಗುಡಿಗಾರ್ ದೂರಿದ್ದು ತಹಶೀಲ್ದಾರ್, ಡಿಸಿ ತನಕ ದೂರು ನೀಡಿದ್ದರೂ ಪ್ರಯೋಜವಾಗಿಲ್ಲ ಎಂದಿದ್ದಾರೆ.
ಸದ್ಯದಲ್ಲೆ ಸಮಸ್ಯೆ ಇತ್ಯರ್ಥ: ವೃದ್ಧೆಯ ಪ್ರಕರಣ ನನ್ನ ಗಮನಕ್ಕೆ ತಂದಿದ್ದರು. ಇದರ ಕುರಿತು ಜಿಲ್ಲಾಧಿಕಾರಿಗೆ ಲಿಖೀತವಾಗಿ ಬರೆದಿದ್ದೇವೆ. ಅದರ ಪ್ರತಿಯನ್ನು ರಾಜೀವ್ ಗಾಂಧಿ ವಸತಿ ನಿಗಮದ ನಿರ್ದೇಶಕರಿಗೂ ಕಳುಹಿಸಿಕೊಡಲಾಗಿದೆ. ಸದ್ಯದಲ್ಲೆ ಸಮಸ್ಯೆ ಬಗೆಹರಿಯಲಿದೆ. –ಪುರಂದರ, ತಹಶೀಲ್ದಾರ್ (ಪ್ರಭಾರ), ಕಾರ್ಕಳ ತಾ| ಕಚೇರಿ
–ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.