ಆರ್ಟಿಕಲ್ 371 (ಜೆ) ಜಾರಿಗೆ ಬರಲು ಖರ್ಗೆ ಅವರ ಅವಿರತ ಶ್ರಮ ಕಾರಣ : ಸಿದ್ದರಾಮಯ್ಯ
ರಾಜ್ಯದಲ್ಲಿರೋದು ಬಿಜೆಪಿಯ ಅನೈತಿಕ ಸರಕಾರ, ಬೊಮ್ಮಾಯಿ ಸುಳ್ಳು ಬುರುಕ ಸಿಎಂ
Team Udayavani, Dec 10, 2022, 4:49 PM IST
ಕಲಬುರಗಿ: ಎಐಸಿಸಿ ಅಧ್ಯಕ್ಷರಾಗಲು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಯತ್ನಿಸಲಿಲ್ಲ ಆದರೆ ಅಧ್ಯಕ್ಷಗಿರಿ ಅದಾಗಿಯೇ ಹುಡುಕಿಕೊಂಡು ಬಂದಿದೆ. ಇದು ನಿಷ್ಟಾವಂತ ಕಾರ್ಯಕರ್ತನಿಗೆ ಸಂದ ಗೆಲುವು. ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಕ್ರಾಂತಿ ಸಮಾವೇಶ: ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ತವರಿನಲ್ಲಿ ಅಭೂತಪೂರ್ವ ಸ್ವಾಗತ
ಕಲಬುರಗಿ ಯಲ್ಲಿ ನಡೆದ ಕಲ್ಯಾಣ ಕ್ರಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ” ಸೋನಿಯಾ, ರಾಹುಲ್ ಹಾಗೂ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಗತವೈಭವಕ್ಕೆ ಮರಳಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಜನಪರ ಸರ್ಕಾರ ಸ್ಥಾಪನೆ ಮಾಡಿದಾಗಲೇ ಖರ್ಗೆ ಅವರಿಗೆ ಕೊಡಬಹುದಾದ ನಿಜವಾದ ಕೊಡುಗೆ ಹಾಗೂ ಅಭಿಮಾನ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿಕಳೆದ ಸಲ 21 ಸ್ಥಾನ ಗೆದ್ದಿತ್ತು. ಮುಂಬರುವ ಚುನಾವಣೆಯಲ್ಲು ಕಕಭಾಗದ ಒಟ್ಟು 41 ಸ್ಥಾನಗಳ ಪೈಕಿ ಕನಿಷ್ಠ 30 ಸ್ಥಾನ ಗೆಲ್ಲಬೇಕು ಅದಕ್ಕೆ ನೀವು ತಯಾರಾಗಬೇಕು. ರಾಜ್ಯದಲ್ಲಿ ಅನೈತಿಕ ಸರ್ಕಾರ ಇದೆ. ಅದೆ ಅನೈತಿಕತೆ ಮುಂದುವರೆದಿದೆ. ರಾಜ್ಯದ ಇತಿಹಾಸದಲ್ಲೇ ಗುತ್ತಿಗೆದಾರರು ಯಾವ ಸರ್ಕಾರವನ್ನು 40% ಕಮಿಷನ್ ಎಂದಿರಲಿಲ್ಲ. ವಿಧಾನಸೌಧ ಗೋಡೆಗಳು ಲಂಚ ಲಂಚ ಲಂಚ ಅಂದು ಕೂಗುತ್ತಿವೆ. ಬೊಮ್ಮಾಯಿ ಸರ್ಕಾರ ಲಂಚದ ಕೂಪವಾಗಿದೆ. ವರ್ಗಾವಣೆ, ಪದೋನ್ನತಿಗೆ ಲಂಚ ಕೊಡಬೇಕಾಗಿದೆ. ಅಧಿಕಾರಿಗಳು ಅನಿವಾರ್ಯವಾಗಿ ಲಂಚಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರ ಇರಬೇಕಾ ? ಇರಬಾರದು. ನೀವೆಲ್ಲ ಬಿಜೆಪಿ ಸರ್ಕಾರ ಬರದಂತೆ ಮಾಡಬೇಕು ಎಂದು ಮನವಿ ಮಾಡಿದರು.
ಖರ್ಗೆ ಅವರು ಸರ್ಕಾರದ ಮೇಲೆ ನಿರಂತರ ಒತ್ತಡ ತಂದು ಈ ಭಾಗಕ್ಕೆ ಆರ್ಟಿಕಲ್ 371 (J) ಜಾರಿಗೆ ತಂದರು. ಆದರೆ ಬಿಜೆಪಿ ಸರ್ಕಾರ ಈ ಭಾಗಕ್ಕೆ ಕೇವಲ ಹೆಸರು ಬದಲಾವಣೆ ಮಾಡಿದರು ಎಂದು ಕುಟುಕಿದರು.
ನಾನು ಸಿಎಂ ಆಗಿದ್ದಾಗ ಆರ್ಟಿಕಲ್ 371(J) ಜಾರಿಗೆ ತರಲು ಎಚ್ ಕೆ ಪಾಟೀಲ್ ನೇತೃತ್ವದ ಸಮಿತಿ ಮಾಡಿದ್ದೆ. ಜಾರಿಗೆ ತರಲು ಆಗಲ್ಲ ಎಂದಿದ್ದರೋ ಅದನ್ನೇ ಜಾರಿಗೆ ತರಲು ಖರ್ಗೆ ಅವಿರತ ಶ್ರಮ ವಹಿಸಿದ್ದರು. ನಮ್ಮ ಕಾಲದಲ್ಲಿ 36,000 ಹುದ್ದೆ ತುಂಬಿದ್ದೇವೆ ಆದರೆ ಈ ಬೇಜವಾಬ್ದಾರಿ ಸರ್ಕಾರ ಒಂದೇ ಒಂದು ಹುದ್ದೆ ತುಂಬಲಿಲ್ಲ ಎಂದು ಹರಿಹಾಯ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಭಾಗದ ಅಭಿವೃದ್ದಿಗೆ 5000 ಕೋಟಿ ರೂ. ನೀಡುತ್ತೇವೆ ಜೊತೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.