ಕಾಡಾನೆ ದಾಳಿಗೆ ರಾಗಿ ಬೆಳೆ ನಾಶ

Team Udayavani, Dec 11, 2022, 1:24 PM IST

TDY-8

ಕನಕಪುರ: ಹೊಸ ಕಬ್ಟಾಳು ಗ್ರಾಮದ ಸುತ್ತಮುತ್ತಲು ಕಾಡಾನೆಗಳ ಹಿಂಡು ದಾಳಿ ನಡೆಸಿ ಕಟಾವು ಮಾಡಿದ್ದ ರಾಗಿ ಬೆಳೆಯನ್ನು ತುಳಿದು ತಿಂದು ನಾಶ ಮಾಡಿವೆ. ತಾಲೂಕಿನ ಸಾತನೂರು ಹೋಬಳಿ ಕಬ್ಟಾಳು ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ನಾಲ್ಕೈದು ಕಾಡಾನೆಗಳು ಹಿಂಡು ದಾಳಿ ನಡೆಸಿ ರಾಗಿ ಫ‌ಸಲು ನಾಶ ಪಡಿಸಿಡಿವೆ.

ಹೊಸ ಕಬ್ಟಾಳು ಗ್ರಾಮದ ನಿಂಗೇಗೌಡ ರಾಜಣ್ಣ ಹಾಗೂ ಚಿಕ್ಕಮರಿಗೌಡ ರೈತರಿಗೆ ಸೇರಿದ ರಾಗಿ ಬೆಳೆ ನಾಶವಾಗಿವೆ. ಪ್ರಸ್ತುತ ವರ್ಷ ತಾಲೂಕಿನಲ್ಲಿ ಅಬ್ಬರಿಸಿ ಬೊಬ್ಬರಿದ ವರುಣನ ಅರ್ಭಟದಿಂದ ಈ ಬಾರಿ ಕೃಷಿ ಬೆಳೆಗಳು ಕೈಸೇರುವುದಿಲ್ಲ ಎಂದು ರೈತರು ಕಂಗಾಲಾಗಿದ್ದರು. ಆದರೂ, ಕೆಲ ರೈತರು ಬಿತ್ತನೆ ಮಾಡಿದ್ದ ರಾಗಿ ಸೋಂಪಾಗಿ ಬೆಳೆದು ಉತ್ತಮ ಫ‌ಸಲು ಬಂದಿತ್ತು. ರೈತರು ಹಾಕಿದ ಬಂಡವಾಳವಾದರೂ ಕೈಗೆ ಸಿಗಬಹುದು ಎಂದುಕೊಂಡಿದ್ದ ರೈತರಿಗೆ ಕಾಡು ಪ್ರಾಣಿಗಳ ಹಾವಳಿ ತೊಡಕಾಗಿ ಪರಿಣಮಿಸಿವೆ.

ಈ ಬಾರಿ ಸುರಿದ ಮಳೆಯಿಂದ ಕೊಚ್ಚಿ ಹೋಗಿ ಅಳಿದುಳಿದಿರುವ ರಾಗಿ ಬೆಳೆ ಹಣ್ಣಾಗಿ ಬಹುತೇಕ ರೈತರು ಕಟಾವು ಮಾಡಿ ಹಾಕಿದ್ದಾರೆ. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಅಳಿದುಳಿದಿರುವ ರಾಗಿ ಬೆಳೆಯ ಮೇಲೆ ಕಾಡಾನೆಗಳು ದಾಳಿ ಮಾಡಿ ನಾಶ ಮಾಡು ತ್ತಿರುವುದು ರೈತರನ್ನು ಕಂಗಾಲಾಗಿಸಿದೆ.

ರಾಗಿ ಫ‌ಸಲು ಸಂಪೂರ್ಣ ನಾಶ: ಹೊಸ ಕಬ್ಟಾಳು ಗ್ರಾಮದ ಸುತ್ತಮುತ್ತಲೂ ಹತ್ತಾರು ಎಕರೆಯಲ್ಲಿ ಕಟಾವು ಮಾಡಿ ಹಾಕಿದ್ದ ರಾಗಿ ಬೆಳೆಯ ಮೇಲೆ ದಾಳಿ ಮಾಡಿರುವ ಕಾಡಾನೆಗಳ ಗುಂಪು ರಾಗಿಯನ್ನು ತುಳಿದು ತಿಂದು ಚಿಲ್ಲಾಪಿಲ್ಲಿ ಮಾಡಿ ನಾಶ ಮಾಡಿವೆ. ಕಾಡಾನೆ ದಾಳಿಯಿಂದ ನಿಂಗೇಗೌಡರ 2 ಎಕರೆ, ರಾಜಣ್ಣರ ಮೂರು ಎಕರೆ, ಚಿಕ್ಕ ಮರೀಗೌಡರ 2 ಎಕರೆ, ಜಮೀನಿನಲ್ಲಿದ್ದಂತಹ ರಾಗಿ ಫ‌ಸಲು ಸಂಪೂರ್ಣ ನಾಶವಾಗಿದೆ.

ಕಾಡಾನೆಗಳ ಹಾವಳಿ: ನಿರಂತರವಾಗಿ ನಡೆ ಯುತ್ತಿರುವ ಕಾಡಾನೆಗಳ ಹಾವಳಿಯಿಂದ ರೈತರು ಹಗಲು-ರಾತ್ರಿ ಎನ್ನದೆ ಕಾವಲು ಇದ್ದು, ತಮ್ಮ ಬೆಳೆಗಳನ್ನು ಜೀವ ಒತ್ತೆಯಿಟ್ಟು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಬಂದೊದಗಿದೆ. ಇಷ್ಟಾದರೂ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಾಡಾನೆಗಳ ಹಾವಳಿಗೆ ನಿಯಂತ್ರಣ ಹಾಕುವ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರೈತರಿಗೆ ಸೂಕ್ತ ಪರಿಹಾರ ನೀಡಿ: ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ರೈತರ ಬೆಳೆಗಳನ್ನು ರಕ್ಷಣೆ ಮಾಡಿ, ಬೆಳೆ ನಾಶವಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಿಬೇಕು. ಕಾಡಾನೆ ಹಾವಳಿಗೆ ಕ್ರಮ ಕೈಗೊಳ್ಳದಿದ್ದರೆ, ಅರಣ್ಯ ಇಲಾಖೆ ಕಚೇರಿ ಮುಂದೆ ಸಾತನೂರು ಹೋಬಳಿ ರೈತರು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಟಾಪ್ ನ್ಯೂಸ್

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

BJPBJP MLA Munirathna: ನನಗೇ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದರು

BJP MLA Munirathna: ನನಗೇ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದರು

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

10

Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…

Mahalingapura: ಗಮನ ಸೆಳೆದ ಮಹಾಲಿಂಗೇಶ್ವರ ಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ…

Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ

Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.