ಗುಜರಾತ್ ಕಾಂಗ್ರೆಸ್ ಸೋಲಿಗೆ ಕಾರಣವೇನು?: ಮಾಜಿ ಸಿಎಂ ಮೊಯ್ಲಿ ಅಭಿಪ್ರಾಯ ಹೀಗಿದೆ
ಹಿಂದೆ ಯಶಸ್ಸು ತಂದುಕೊಟ್ಟ ನಾಯಕರನ್ನು ಯಾವಾಗಲೂ ಗೌರವಿಸಬೇಕು.....
Team Udayavani, Dec 11, 2022, 2:53 PM IST
ಬೆಂಗಳೂರು : ”ಗುಜರಾತ್ ಕಾಂಗ್ರೆಸ್‌ನ ರಾಜ್ಯ ನಾಯಕರನ್ನು ನಿರಾಸೆಗೊಳಿಸಿದ್ದು ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನಕ್ಕೆ ಕಾರಣವಾಯಿತು” ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಭಾನುವಾರ ಅಭಿಪ್ರಾಯ ಹೊರ ಹಾಕಿದ್ದಾರೆ.
”ಹಿಂದೆ ಯಶಸ್ಸು ತಂದುಕೊಟ್ಟ ನಾಯಕರನ್ನು ಕಾಂಗ್ರೆಸ್ ಯಾವಾಗಲೂ ಗೌರವಿಸಬೇಕು ಎಂದು ಹೇಳಿದ ಮಾಜಿ ಕೇಂದ್ರ ಸಚಿವ, ಮಾಜಿ ಸಿಎಂ ದಿವಂಗತ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರನ್ನು ಪಿಸಿಸಿ ಮುಖ್ಯಸ್ಥರನ್ನಾಗಿ ಮಾಡಿದ ಕ್ರಮವು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಲಾಭವನ್ನು ತಂದು ಕೊಟ್ಟಿದೆ” ಎಂದು ಹೇಳಿದರು.
“ಪರೀಕ್ಷಿತ, ಉತ್ತಮವಾಗಿ ಪರೀಕ್ಷಿಸಲ್ಪಟ್ಟ ಮತ್ತು ಸಮಯ-ಪರೀಕ್ಷಿತ ನಾಯಕರಿಗೆ ಮಹತ್ವ ಮತ್ತು ಗೌರವವನ್ನು ನೀಡಬೇಕು. ಗುಜರಾತ್‌ನಲ್ಲಿ ಅದನ್ನು ನಾವು ಮಾಡದೇ ಕಾಂಗ್ರೆಸ್ ಅನ್ನು ಹೇಗೆ ಬೆಳೆಸಬಹುದು” ಎಂದು ಮೊಯ್ಲಿ ಪಿಟಿಐಗೆ ತಿಳಿಸಿದರು.
”ಗುಜರಾತ್‌ನಲ್ಲಿ ನಾಯಕರನ್ನು ನಿರಾಸೆಗೊಳಿಸಲಾಗಿದೆ ಮತ್ತು ಪರಿಸ್ಥಿತಿ ಸುಧಾರಿಸಿಲ್ಲ. ಇದು ಕಲಿಯಬೇಕಾದ ಪಾಠವಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವೀಕ್ಷಕರು ರಾಜ್ಯ ನಾಯಕರ ಮೇಲೆ ಹೇರಬಾರದು ಬದಲಿಗೆ, ಅವರಿಗೆ ಅಧಿಕಾರ, ಪೋಷಣೆ ಮತ್ತು ಸರಿಯಾದ ಮಾನ್ಯತೆ ನೀಡಬೇಕು.ಇದರಿಂದ ಅವರು ಯಾವಾಗಲೂ ಪಕ್ಷಕ್ಕಾಗಿ ಕೆಲಸ ಮಾಡಬಹುದು” ಎಂದರು.
“ಕಳೆದ ಬಾರಿ ಗುಜರಾತ್ ನಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶವನ್ನು ಪಡೆದಿತ್ತು (2017 ರಲ್ಲಿ 77 ಸ್ಥಾನ). ಆಡಳಿತದ ಚುಕ್ಕಾಣಿ ಹಿಡಿದಿದ್ದ ಎಲ್ಲ ನಾಯಕರನ್ನು ಬದಲಾಯಿಸಲಾಗಿದೆ, ಅವರಿಗೆ ಸರಿಯಾಗಿ ಗೌರವ ಮತ್ತು ಮನ್ನಣೆ ನೀಡಲಾಗಿಲ್ಲ ”ಎಂದು ಮೊಯ್ಲಿ ಬಹಿರಂಗವಾಗಿ ಅಭಿಪ್ರಾಯ ಹೊರ ಹಾಕಿದರು.
ಗುಜರಾತ್ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಗೆದ್ದಿದ್ದರೆ, 68 ಸದಸ್ಯ ಬಲದ ಹಿಮಾಚಲ ಪ್ರದೇಶ ಸದನದಲ್ಲಿ 40 ಸ್ಥಾನಗಳನ್ನು ಗಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.