4 ಮರಿಗಳೊಂದಿಗೆ ತಾಯಿ ಹುಲಿ ಪ್ರತ್ಯಕ್ಷ
Team Udayavani, Dec 11, 2022, 3:46 PM IST
ಎಚ್.ಡಿ.ಕೋಟೆ: ಸಫಾರಿ ವೇಳೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ 4 ಮರಿಗಳೊಂದಿಗೆ ತಾಯಿಹುಲಿ ಪ್ರತ್ಯಕ್ಷಗೊಂಡಿದ್ದು, ವನ್ಯಜೀವಿ ಛಾಯಾಗ್ರಾಹಕರು ವಿಡಿಯೋ ಹಾಗೂ ಫೋಟೋ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ತಾಲೂಕಿನ ಅಂತರಸಂತೆ ಸಮೀಪದ ದಮ್ಮನಕಟ್ಟೆ ಅರಣ್ಯ ಪ್ರದೇಶದ ಕಬಿನಿ ಹಿನ್ನೀರಿನಲ್ಲಿ ತಾಯಿ ಹುಲಿಯೊಂದಿಗೆ 4 ಮರಿಗಳು ಪ್ರತ್ಯಕ್ಷಗೊಂಡಿದ್ದು, 3 ಹುಲಿ ಮರಿಗಳು ತಾಯಿ ಹುಲಿಯಿಂದ ಕೆಲವೇ ಅಡಿಗಳ ಪೊದೆಯಲ್ಲಿ ಅಡಗಿಕುಳಿತುಕೊಂಡರೆ ಅರಣ್ಯ ಮಾರ್ಗದ ರಸ್ತೆ ಮಧ್ಯದಲ್ಲಿ ಕುಳಿತ ತಾಯಿ ಹುಲಿ ಬಳಿಗೆ ಮರಿಹುಲಿಯೊಂದು ಆಗಮಿಸಿ ತಾಯಿಯೊಂದಿಗೆ ಸರಸ ಸಲ್ಲಾಪದಲ್ಲಿ ಕಾಲ ಹರಣ ಮಾಡುತ್ತಿತ್ತು.
ಈ ದೃಶ್ಯ ಕಂಡ ವನ್ಯಜೀವಿ ಛಾಯಾಗ್ರಾಹಕರ ತಂಡ ಹುಲಿ ಮರಿ ತಾಯಿ ಹುಲಿಯೊಂದಿಗೆ ತಾಯಿಯ ಮಮಕಾರದೊಂದಿಗೆ ಸಂಚರಿಸುತ್ತಿದ್ದ ನೈಜತೆಯ ದೃಶ್ಯ ವಿಡಿಯೋ ಮತ್ತು ಫೋಟೋ ಕ್ಲಿಕ್ಕಿಸಿ ಜಾಲ ತಾಣದಲ್ಲಿ ಹರಿಬಿಟ್ಟಾರೆ. ಇದು ವನ್ಯ ಜೀವಿ ಪ್ರಿಯರಿಗಷ್ಟೇ ಅಲ್ಲದೆ ಛಾಯಾಗ್ರಾಹಕರು ಮತ್ತು ಹುಲಿ ಪ್ರಿಯರಲ್ಲಿ ಹರ್ಷ ಮೂಡಿಸಿದೆ.
ಎಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ವನ್ಯಜೀವಿ ವಲಯದ ಸಫಾರಿ ಪ್ರಿಯರಿಗೆ ಆಗಾಗ ಹುಲಿಗಳು ದರ್ಶನ ನೀಡುವುದ ರಿಂದ ಸಫಾರಿ ಪ್ರಿಯರು ಬಹುಸಂಖ್ಯೆಯಲ್ಲಿ ಇತ್ತ ಹರಿದು ಬರುವಂತೆ ಮಾಡಿದೆ. ಹಲವು ದಿನಗಳ ಹಿಂದಿನಿಂದ ಹಸಿರಾಗಿರುವ ಅರಣ್ಯದೊಳಗೆ ಸಫಾರಿ ಪ್ರಿಯರಿಗೆ ವನ್ಯಜೀವಿಗಳ ದರ್ಶನ ಲಭಿಸುವುದೇ ಕಷ್ಟಕರ ಹೀಗಿರುವಾಗ 4 ಮರಿಗಳೊಂದಿಗೆ ತಾಯಿ ಹುಲಿ ಸೇರಿ 5 ಹುಲಿಗಳ ಏಕಕಾಲದಲ್ಲಿ ದರ್ಶನ ನೀಡಿರುವುದು ಸಫಾರಿ ಪ್ರಿಯರಲ್ಲಿ ಅಚ್ಚರಿ ಮೂಡುವಂತೆ ಮಾಡಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!
Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.