ಅರ್ಬನ್ ಫಾರೆಸ್ಟ್ ನಿರ್ಮಾಣಕ್ಕೆ ಚಾಲನೆ: ಹಸುರು ಹೊದಿಕೆ ಹೆಚ್ಚಿಸುವ ನಗರ ಅರಣ್ಯ ಪರಿಕಲ್ಪನೆ
Team Udayavani, Dec 12, 2022, 5:35 AM IST
ಮಹಾನಗರ : ನಗರದಲ್ಲಿ ಹಸುರು ಪರಿಸರದ ಪ್ರಮಾಣವನ್ನು ಹೆಚ್ಚಿ ಸುವ ಉದ್ದೇಶದಿಂದ ನಗರ ಅರಣ್ಯ ಪರಿಕ ಲ್ಪನೆಯಾದ “ಮಿಯಾವಾಕಿ ಅರ್ಬನ್ ಫಾರೆಸ್ಟ್’ ಸದ್ಯ ನಗರದ ವಿವಿಧೆಡೆ ರಚನೆ ಯಾಗುತ್ತಿದೆ. ಹೆಚ್ಚು ಪ್ರಚಲಿತವಾಗುತ್ತಿ ರುವ ಈ ಯೋಜನೆಯನ್ನು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಇನ್ನಷ್ಟು ಹೆಚ್ಚಿನ ಮುತುವರ್ಜಿಯಿಂದ ಅನುಷ್ಠಾನ ಗೊಳಿಸಬೇಕಿದೆ.
ಕಾಂಕ್ರೀಟ್ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಮರಗಳನ್ನು ಕಡಿದ ಪರಿಣಾಮ ಬಿಸಿಲ ಝಳ ಹೆಚ್ಚಾಗಿದೆ. ಇನ್ನೊಂದೆಡೆ ಗಿಡಗಳನ್ನು ನೆಟ್ಟು ಬೆಳೆಸುವ ನಿಟ್ಟಿನಲ್ಲಿ ಆಚರಿಸಲಾಗುವ ವನಮಹೋತ್ಸವ ಕಾರ್ಯಕ್ರಮಗಳು ಕೇವಲ ಹೆಸರಿಗೆ ಮಾತ್ರ ಸೀಮಿತವಾಗುತ್ತಿದೆ. ಇದರಿಂದ ಹರಿಸುವ ಹೊದಿಕೆಗಳು ಕಡಿಮೆಯಾಗುತ್ತಿದೆ. ಈ ನಡುವೆ ಹೊಸ ಮಾದರಿಯ ಕಾಡು ಬೆಳೆಸುವ “ಅರ್ಬನ್ ಫಾರೆಸ್ಟ್ ‘ ಪರಿಕಲ್ಪನೆ, ಸದ್ಯ ಜನಪ್ರಿಯವಾಗುತ್ತಿದೆ.
ಮೂರು ವರ್ಷದ ಹಿಂದೆ ಕೊಟ್ಟಾರದ ಜಿಲ್ಲಾ ಪಂಚಾಯತ್ ಕಚೇರಿ ಸಂಕೀರ್ಣದ ಬಳಿ ರಾಮಕೃಷ್ಣ ಮಠದ ವತಿಯಿಂದ ನಿರ್ಮಿಸಲಾದ “ಮಿಯಾವಾಕಿ ಅರ್ಬನ್ ಫಾರೆಸ್ಟ್’ ಇಂದು ದಟ್ಟವಾಗಿ ಬೆಳೆದು ಕಾಡಾಗಿ ಮಾರ್ಪಾಡಾಗಿದೆ. ಯಶಸ್ವಿ ಅನು ಷ್ಠಾನದಿಂದ ನಗರದದಲ್ಲಿ ಇದು ಹೆಚ್ಚು ಜನಪ್ರಿಯವಾಯಿತು. ಅನಂತರದಲ್ಲಿ ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್ ನೇತೃತ್ವದಲ್ಲಿ ನಂದಿಗುಡ್ಡೆಯಲ್ಲಿ ನೆಡು ತೋಪು ನಿರ್ಮಾಣವಾಗಿದೆ. ರಾ.ಹೆದ್ದಾರಿ 75ರ ಪಡೀಲ್ ಅಂಡರ್ ಪಾಸ್‌ನ ಎರಡು ಕಡೆಗಳಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಸಸಿ ನೆಟ್ಟು ಪೋಷಿಸಲಾಗುತ್ತಿದೆ. ಲೇಡಿಹಿಲ್ ಪ್ರತಿಕಾ ಭವನದ ಬಳಿ ಮೂರು ಬ್ಲಾಕ್‌ಗಳ ನ್ನಾಗಿ ಮಾಡಿ ಗಿಡಗಳನ್ನು ನೆಡಲಾಗಿದೆ. ನಂತೂರು-ಕೆಪಿಟಿ ನಡುವಿನ ಪದವು ಬಳಿ, ಬೋಂದೆಲ್ ಕ್ರಿಕೆಟ್ ಗ್ರೌಂಡ್‌ಬಳಿ 1,550 ಗಿಡಗಳನ್ನು ನೆಡಲಾಗಿದೆ. ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ 520 ಗಿಡಗಳನ್ನು ನೆಡಲಾಗಿದೆ.
ಬಯೋಕಾನ್, ಫಾದರ್‌ಮುಲ್ಲರ್ ಆಸ್ಪತ್ರೆ, ವಿವಿಧ ಚಾರಿಟೆಬಲ್ ಟ್ರಸ್ಟ್ ಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಗಿಡ ನೆಡುವ ಪ್ರಾಯೋಜಕತ್ವ ವಹಿಸಿಕೊಳ್ಳುತ್ತಿವೆ. ಇದೊಂದು ವಿಶೇಷ ಯೋಜನೆಯಾಗಿದ್ದು, ಸಾರ್ವಜನಿಕರು, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಈ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚಿನ ಮುತುವರ್ಜಿ ತೋರಿಸುವ ಅಗತ್ಯವಿದೆ ಎನ್ನುತ್ತಾರೆ ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್.
ಖಾಲಿ ಜಾಗ ಗುರುತಿಸುವಿಕೆ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 36ಕ್ಕೂ ಅಧಿಕ ಖಾಲಿ ಜಾಗ ಗುರುತಿಸಿದ್ದು, ಗಿಡ ನೆಡಲು ಉದ್ದೇಶಿಸಿದೆ. ಇನ್ನೊಂದೆಡೆ ರಾಮಕೃಷ್ಣ ಮಠದ ವತಿಯಿಂದಲೂ ವಿವಿಧೆಡೆ ಮಿಯಾವಾಕಿ ಅರ್ಬನ್ ಫಾರೆಸ್ಟ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಎಲ್ಲ ಯೋಜನೆಯಗಳು ಯಶಸ್ವಿಯಾಗಿ ಅನುಷ್ಠಾನವಾದರೆ ಮುಂದಿನ ಕೆಲವು ವರ್ಷಗಳ ಬಳಿಕ ನಗರದ ವಿವಿಧೆಡೆ ಇಂತಹ ಹಲವು ಕಾಡು ಪ್ರದೇಶ ಕಾಣಬಹುದು.
ರಾಮಕೃಷ್ಣ ಮಠದ ವತಿಯಿಂದ 2023ರ ಮಳೆಗಾಲದಲ್ಲಿ ಶಕ್ತಿನಗರದ ಡಾ| ಜೀವರಾಜ್ ಸೊರಕೆ ಅವರ ಜಾಗದಲ್ಲಿ 10 ಸಾವಿರ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಅವರು ಎರಡು ಎಕರೆ ಪ್ರದೇಶದಲ್ಲಿ ಸಂಪೂರ್ಣ ಕಾಡು ಮಾಡಲು ಉದ್ದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಮಠದ ವತಿಯಿಂದ ಈಗಾಗಲೇ 4 ಮಿಯಾವಾಕಿ ಅರ್ಬನ್ ಫಾರೆಸ್ಟ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.
-ಏಕಗಮ್ಯಾನಂದ ಸ್ವಾಮೀಜಿ, ರಾಮಕೃಷ್ಣ ಮಠ
ಏನಿದು ಅರ್ಬನ್ ಫಾರೆಸ್ಟ್ ?
ನಗರದ ಪ್ರದೇಶದಲ್ಲಿರುವ ಕಡಿಮೆ ಜಾಗದಲ್ಲಿ ದಟ್ಟ ವಿವಿಧ ಜಾತಿಯ ಮರಗಳನ್ನೊಳಗೊಂಡು ಅರಣ್ಯ ಬೆಳೆಸುವುದನ್ನು ಅರ್ಬನ್ ಫಾರೆಸ್ಟ್ ಎನ್ನಲಾಗುತ್ತದೆ. ಜಪಾನ್‌ನ ಜೈವಿಕ ತಜ್ಞ ಡಾ| ಅಕಿರಾ ಮಿಯಾವಾಕಿ ಅವರು ಈ ಪರಿಕಲ್ಪನೆ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ್ದರು. ಅವರ ಹೆಸರಿನಲ್ಲೇ, ಮಿಯಾವಾಕಿ ಅರ್ಬನ್ ಫಾರೆಸ್ಟ್ ಎಂದು ಪ್ರಸಿದ್ಧಿ ಪಡೆಯಿತು. ಸಾಮಾನ್ಯ ಅರಣ್ಯಕ್ಕಿಂತ ಹಲವು ಪಟ್ಟು ಹೆಚ್ಚು ದಟ್ಟವಾಗಿ ಗಿಡ ಬೆಳಸಲಾಗುತ್ತದೆ. ಮುಖ್ಯವಾಗಿ ಹಣ್ಣಿನ ಗಿಡಗಳು, ಔಷಧೀಯ ಗಿಡಗಳು, ಹೂ ಬಿಡುವ ಗಿಡಗಳು, ಅಳಿವಿನಂಚಿನಲ್ಲಿರುವ ಗಿಡಗಳನ್ನು ಬೆಳೆಸುವ ಮೂಲಕ ಪ್ರಾಣಿ ಪಕ್ಷಿಗಳಿಗೆ ಒಂದು ವಾಸಸ್ಥಾನವಾಗಿಯೂ ಇದು ಸಹಕಾರಿಯಾಗುತ್ತದೆ.
– ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.