ಜಗ್ಗೇಶ್ ಆಪ್ತ, ನಟ-ಕಾಸ್ಟ್ಯೂಮ್ ಡಿಸೈನರ್ ಗಂಡಸಿ ನಾಗರಾಜ್ ವಿಧಿವಶ
Team Udayavani, Dec 12, 2022, 2:38 PM IST
ಬೆಂಗಳೂರು: ಕಳೆದ ನಾಲ್ಕು ದಶಕಗಳಿಂದ ಕನ್ನಡದ ಚಿತ್ರರಂಗದಲ್ಲಿ ಸಕ್ರಿಯರಾಗಿ, ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ನಟ ಗಂಡಸಿ ನಾಗರಾಜ್ (65) ಅನಾರೋಗ್ಯದಿಂದ ಸೋಮವಾರ (ಡಿ.12 ರಂದು) ನಿಧನರಾಗಿದ್ದಾರೆ.
ಎರಡೂ ಕಿಡ್ನಿಯನ್ನು ಕಳೆದುಕೊಂಡಿದ್ದ ಅವರು, ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ಬೆಂಗಳೂರಿನಲ್ಲಿ ಅವರು ನಿಧನರಾಗಿದ್ದಾರೆ.
ಚಂದನವನದಲ್ಲಿ ನಟ ಹಾಗೂ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಅವರು ಮಿಂಚಿದ್ದರು. ನವರಸ ನಾಯಕ ಜಗ್ಗೇಶ್ ಅವರ ಅನೇಕ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಜಗ್ಗೇಶ್ ಹಾಗೂ ನಾಗರಾಜ್ ಆತ್ಮೀಯರಾಗಿದ್ದರು.
ಇದನ್ನೂ ಓದಿ: ಸತತ ಎರಡನೇ ಅವಧಿಗೆ ಗುಜರಾತ್ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ
ಸರ್ವರ್ ಸೋಮಣ್ಣ, ಭಂಡ ನನ್ನ ಗಂಡ, ಹಬ್ಬ, ಶ್ರೀ ಮಂಜುನಾಥ, ‘ಗುಂಡನ ಮದುವೆ’, ‘ಸೂಪರ್ ನನ್ಮಗ’, ‘ರಾಯರ ಮಗ’, ‘ ‘ಮದುವೆ’, ‘ಪರ್ವ’, ‘ಮಾತಾಡು ಮಾತಾಡು ಮಲ್ಲಿಗೆ’ ʼರಾಜಾಹುಲಿʼ ಹಾಗೂ ಕೊನೆಯ ಬಾರಿ ʼಕೋಟಿಗೊಬ್ಬ-3ʼ ಸಿನಿಮಾದಲ್ಲಿ ನಟಿಸಿದ್ದರು.
1 ಸಾವಿರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ವಿವಿಧ ಪಾತ್ರವನ್ನು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.