ಒಂದೆಡೆ ಮದುವೆ, ಮತ್ತೊಂದೆಡೆ ಗಲಾಟೆ..: ಏನಿದು ವೈರಲ್ ವಿಡಿಯೋ
Team Udayavani, Dec 13, 2022, 12:28 PM IST
ಮುಂಬೈ: ಒಂದು ಕಡೆ ವೇದಿಕೆಯಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ಮತ್ತೊಂದು ಕಡೆ ಬಂಧು ಮಿತ್ರರ ನಡುವೆ ಗಲಾಟೆಯಾಗುತ್ತಿದೆ. ಮದುವೆ ಮಂಟಪದಲ್ಲಿ ಬಂಧುಗಳ ನಡುವೆ ಕೈ-ಕೈ ಮಿಲಾಯಿಸಿದ ವಿಡಿಯೋವೊಂದು ಇದೀಗ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ.
ಆರ್ ಕೆ ರಾಜ್ ಎಂಬವರು ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿದೆ.
ವಿಡಿಯೋದಲ್ಲಿ ವೇದಿಕೆಯಲ್ಲಿ ವಧು ವರರು ನಿಂತಿರುವುದನ್ನು ಕಾಣಬಹುದು. ಇದೇ ವೇಳೆ ವೇದಿಕೆಯ ಕೆಳಗೆ ಜನಸಂದಣಿಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಗುಂಪೊಂದು ಹೊಡೆದಾಟದಲ್ಲಿ ತೊಡಗಿರುವುದನ್ನು ಕಾಣಬಹುದು. ಈ ಅತಿಥಿಗಳು ದೈಹಿಕವಾಗಿ ನೂಕಾಟ- ತಳ್ಳಾಟಗಳಲ್ಲಿ ತೊಡಗಿರುವುದನ್ನು ಕಾಣಬಹುದು. ಇದೇ ವೇಳೆ ಹಲವರು ಜಗಳ ನಿಲ್ಲಿಸಲು ಪ್ರಯತ್ನ ಪಟ್ಟಿದ್ದಾರೆ. ಅದು ಸಫಲವಾಗಿಲ್ಲ.
ಇದನ್ನೂ ಓದಿ:5,666 ಕೋಟಿ ರೂ. ಮೌಲ್ಯದ ಜೈಪ್ರಕಾಶ್ ಸಿಮೆಂಟ್ , ವಿದ್ಯುತ್ ಸ್ಥಾವರ ದಾಲ್ಮಿಯಾ ಗ್ರೂಪ್ ತೆಕ್ಕೆಗೆ
ಈ ಗಲಾಟೆ ಮದುವೆ ಎಲ್ಲಿ ನಡೆದಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಈ ವಿಡಿಯೋವನ್ನು ನವೆಂಬರ್ 24ರಂದು ಪೋಸ್ಟ್ ಮಾಡಲಾಗಿದೆ. ಬಹಳಷ್ಟು ಮಂದಿ ನೆಟ್ಟಿಗರು ಇದಕ್ಕೆ ತರಹೇವಾರಿ ಕಮೆಂಟ್ ಗಳನ್ನು ಮಾಡಿದ್ದಾರೆ. “ಏನಿದು ಕಾಕತಾಳೀಯವಿದು, ಎರಡೂ ಕಡೆಯಲ್ಲಿ ‘ಆರತಿ’ ನಡೆಯುತ್ತಿದೆ” ಎಂದು ಒಬ್ಬರು ಬರೆದುಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.