ಕುಡುತಿನಿ ಪ.ಪಂ ಮುಖ್ಯಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ತುಕಾರಾಂ
Team Udayavani, Dec 13, 2022, 8:57 PM IST
ಕುರುಗೋಡು: ಸಮೀಪದ ಕುಡುತಿನಿ ಪ.ಪಂ ಮುಖ್ಯಧಿಕಾರಿ ತೀರ್ಥಪ್ರಸಾದ್ ಅವರು ಸದಸ್ಯರಿಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಎಂಬ ಸದಸ್ಯರ ದೂರಿನ ಮೇರೆಗೆ ಶಾಸಕ ಈ. ತುಕಾರಾಂ ಅವರು ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ಜರುಗಿತು.
ಹೌದು ಪಪಂಯಲ್ಲಿ ಈ ಹಿಂದೆ ಇದ್ದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಕಚೇರಿಯನ್ನು ಬೇರೆ ಕೆಲಸಕ್ಕೆ ಬಳಸಿಕೊಂಡು ಅವರನ್ನು ಸಿಬ್ಬಂದಿಗಳು ಕೂಡುವ ಹಾಲ್ ನಲ್ಲಿ ವ್ಯವಸ್ಥೆ ಮಾಡಿಕೊಟ್ಟಿರುವುದು ಸರಿಯಲ್ಲ ಕೂಡಲೇ ಅಧ್ಯಕ್ಷ ರಿಗೆ ಮೊದಲ ಇದ್ದ ಕೊಠಡಿ ಯಲ್ಲಿ ಅವರಿಗೆ ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಇಲ್ಲವಾದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಅಧಿಕಾರಿ ವಿರುದ್ಧ ಕಿಡಿಕಾರಿದರು.
ಪ.ಪಂ ಅಧ್ಯಕ್ಷರು ಗ್ರಾಮದ ಪ್ರಥಮ ಪ್ರಜೆ ಇದ್ದಂತೆ ಅವರನ್ನು ಇತರ ಕಾಣುವುದು ಶೋಭೆಯಲ್ಲ . ಮೊದಲು ಅವರು ನಂತರ ನಾನು, ನೀನು, ಅವರ ಕೈ ಕೆಳೆಗೆ ನೀವು ಕೆಲಸ ಮಾಡುತ್ತಿರುವುದು ಇದು ನಿಮ್ಮ ನೆನಪಲ್ಲಿ ಇರಬೇಕು ಎಂದರು.
ಅಧಿಕಾರಿ ಆದವರು ಎಲ್ಲರ ಜೊತೆಗೆ ಅನೂನ್ಯತೆಯಿಂದ ಇದ್ದು, ಪ್ರತಿಯೊಂದಕ್ಕೂ ಸಹಕಾರ ಮಾಡಿಕೊಂಡು ಪಪಂದ ಅಭಿವೃದ್ಧಿಗೆ ಒತ್ತು ನೀಡಬೇಕು. ಸಂವಿಧಾನಾತ್ಮಕವಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಹೇಳಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರೊಂದಿಗೆ ವಿಸ್ವಾಸದಿಂದ ಇದ್ದು ಪಪಂ ಅಭಿವೃದ್ಧಿಗೆ ಒತ್ತು ನೀಡಬೇಕು. ಮತ್ತೆ ಇತರ ಸಮಸ್ಯೆಗಳು ಮರು ಕಳಿಸದಂತೆ ಇರಬೇಕು ಎಂದರು.
ಸದಸ್ಯರು ಕಾಮಗಾರಿಗಳ ಬಗ್ಗೆ ಅಥವಾ ಸಮಸ್ಯೆಗಳ ಬಗ್ಗೆ ಇತರೆ ವಿಷಯಗಳ ಬಗ್ಗೆ ಚರ್ಚಿಸಲು ಬಂದರೆ ಅವರಿಗೆ ಪ್ರತಿಕ್ರಿಯೆ ನೀಡದೆ, ಸ್ಪಂದಿಸದೆ ಇರೋದು ನಿಮ್ಮ ಗೌರವಕ್ಕೆ ಶೋಭೆಯಲ್ಲ ಇನ್ಮುಂದೆ ಇತರ ಆಗದಂತೆ ಎಲ್ಲರೊಂದಿಗೆ ಅನುಕೂಲತೆ ಯಿಂದ ಇರಬೇಕು ಎಂದರು.
ಇದನ್ನೂ ಓದಿ: ಗುರುಪುರ: ಶೌಚಾಲಯದ ಗುಂಡಿ ತೆಗೆಯುವಾಗ ಮಣ್ಣು ಕುಸಿದು ಓರ್ವ ಸಾವು, ಇಬ್ಬರಿಗೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!
Communalization ಜತೆ ಆರೆಸ್ಸೆಸ್ ಆರಂಭ: ಬಿಳಿಮಲೆ ಹೇಳಿದ್ದು ವಿವಾದ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.