ನಿಲ್ಲದ ಚೀನ ಕ್ಯಾತೆ; ಏಮ್ಸ್ ಸರ್ವರ್ ಹ್ಯಾಕ್ ಹಿಂದೆ ಚೀನಿ ಹ್ಯಾಕರ್‌ಗಳ ಕೈವಾಡ ಪತ್ತೆ
ಮತ್ತೆ ಹಿಂದೂ ಮಹಾಸಾಗರ ಕಾಣಿಸಿಕೊಂಡ ಚೀನ ಪತ್ತೆದಾರಿ ಹಡಗು
Team Udayavani, Dec 15, 2022, 6:50 AM IST
ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ದಾಳಿಯ ದುಃಸ್ಸಾಹಸ ನಡೆಸಲು ಹೋಗಿ ಪೆಟ್ಟು ತಿಂದ ಚೀನ, ದೇಶದ ಮೇಲೆ ಪರೋಕ್ಷವಾಗಿ ದಾಳಿ ನಡೆಸುತ್ತಿರುವುದು ಗೊತ್ತಾಗಿದೆ.
ಮಂಗಳವಾರವಷ್ಟೇ ಚೀನ ಗುಪ್ತಚರ ಹಡಗು “ಯುಹಾನ್ ವಾಂಗ್ 5′ ಹಿಂದೂ ಮಹಾಸಾಗರ ಬಿಟ್ಟು ತೆರಳಿತ್ತು ಎಂದು ದೃಢಪಡಿಸುತ್ತಿದ್ದಂತೆಯೇ ಬುಧವಾರ ದೇಶದ ಜಲಗಡಿ ವ್ಯಾಪ್ತಿಯಲ್ಲಿ ಡಿ.12ರಂದು ಪುನಃ ವಿವಿಧ ಟ್ರ್ಯಾಕಿಂಗ್ ಮತ್ತು ಕಣ್ಗಾವಲು ಸಾಧನಗಳನ್ನು ಅಳವಡಿಸಿರುವ ಚೀನದ ಗೂಢಚರ್ಯೆ ಹಡಗು ಕಾಣಿಸಿಕೊಂಡಿದೆ.
ಹಿಂದಿನ ಸಂದರ್ಭದಲ್ಲಿ ಇದು ಭಾರತ, ಚೀನ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿತ್ತು.
ಡಿ.15ರಂದು ಒಡಿಶಾ ದ್ವೀಪದಲ್ಲಿ ಅಗ್ನಿ-5 ಖಂಡಾಂತರ ಕ್ಷಿಪಣಿ ಪರೀಕ್ಷೆಗೆ ಭಾರತ ಮುಂದಾಗಿದೆ. ಅದಕ್ಕೆ ಪೂರಕವಾಗಿ ಬೆಳವಣಿಗೆ ನಡೆದಿದೆ.
ಏಮ್ಸ್ ಸರ್ವರ್ ಹ್ಯಾಕ್ ಹಿಂದೆ ಚೀನ:
ದೆಹಲಿಯ ಏಮ್ಸ್ ಆಸ್ಪತ್ರೆಯ ಸರ್ವರ್ ಗುರಿಯಾಗಿಸಿಕೊಂಡು ನಡೆದ ಉದ್ದೇಶಿಪೂರ್ವಕ ಸೈಬರ್ ದಾಳಿಯಲ್ಲಿ ಚೀನ ಮೂಲದ ಹ್ಯಾಕರ್‌ಗಳ ಕೈವಾಡ ಇರುವುದು ಪತ್ತೆಯಾಗಿದೆ. ಹ್ಯಾಕರ್‌ಗಳಿಂದ ಡೇಟಾ ಅನ್ನು ಯಶಸ್ವಿಯಾಗಿ ಹಿಂಪಡೆಯಲಾಗಿದೆ.
ನ.23ರಂದು ದೆಹಲಿ ಏಮ್ಸ್ ಆಸ್ಪತ್ರೆಯ ಸರ್ವರ್ ಡೌನ್ ಆಗಿತ್ತು. ಇದು ಒಳರೋಗಿ, ಹೊರರೋಗಿ, ಪ್ರಯೋಗಾಲಯ ಸೇರಿದಂತೆ ಆಸ್ಪತ್ರೆಯ ಎಲ್ಲ ಸೇವೆಗಳ ಮೇಲೆ ಪರಿಣಾಮ ಬೀರಿತು. ಸರ್ವರ್ ಹ್ಯಾಕ್ ಆಗಿರುವುದು ತಿಳಿದು, ಈ ಸಂಬಂಧ ನ.25ರಂದು ದೆಹಲಿ ಸೈಬರ್ ಅಪರಾಧ ಕೇಂದ್ರದಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸೈಬರ್ ಹ್ಯಾಕ್ ಆಗಿರುವುದು ನೆರೆಯ ಚೀನಾದಿಂದ ಎಂಬುದು ಪತ್ತೆಯಾಗಿದೆ.
ಹಳೆಯ ವಿಡಿಯೋ ವೈರಲ್:
ಭಾರತ-ಚೀನ ಗಡಿಯ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಡಿ.9 ಘರ್ಷಣೆ ಏರ್ಪಟ್ಟ ಮಾರನೆಯ ದಿನ ಎಲ್ಲೆಡೆ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಭಾರತೀಯ ಸೈನಿಕರು ಗಡಿಯಲ್ಲಿ ಚೀನ ಸೈನಿಕರನ್ನು ಹಿಗ್ಗಾ-ಮುಗ್ಗ ಲಾಠಿಯಲ್ಲಿ ಥಳಿಸುತ್ತಿರುವುದು ಕಂಡುಬಂದಿದೆ. ಆದರೆ ಈ ವಿಡಿಯೋ ಡಿ.9ರ ಘರ್ಷಣೆಗೆ ಸಂಬಂಧಿಸಿದ್ದಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.