ಅಮೃತ ವರ್ಷದಲ್ಲಿ ಭಾರತಕ್ಕೆ ಜಿ 20 ಸಾರಥ್ಯ
Team Udayavani, Dec 15, 2022, 6:35 AM IST
ವಿಶ್ವಶಾಂತಿ, ಜಾಗತಿಕ ಏಕತೆ, ಅಂತಾರಾಷ್ಟ್ರೀಯ ಸಮಾನತೆ, ವಿಶ್ವ ಆಹಾರ, ಆರೋಗ್ಯ, ಶಿಕ್ಷಣ ಸಮಸ್ಯೆಗಳು, ಉತ್ತಮ ವ್ಯಾಪಾರ ಸಂಬಂಧ, ಪರಸ್ಪರ ತಾಂತ್ರಿಕ ಹಾಗೂ ಔದ್ಯೋಗಿಕ ಸಹಕಾರ, ವಿಶ್ವಪಾರಂಪರಿಕ ಸಂರಕ್ಷಣೆ, ಪರಿಸರ ಸಂರಕ್ಷಣೆ, ನೆಲ, ಜಲ, ವಾಯು ಮಾಲಿನ್ಯತೆಯ ನಿವಾರಣೆ- ಇವೆಲ್ಲ ಕೇವಲ ಭಾಷಣ ಹಾಗೂ ಘೋಷಣೆಯ ಸರಕು ಗಳಲ್ಲ. ಬದಲಾಗಿ ಇದೀಗ ಭಾರತದ ನೇತಾ ರಿಕೆಗೆ ಸಂವಾದಿಯಾಗಬೇಕಿದೆ. ಅತೀ ಸೂಕ್ಷ್ಮ ವೆನಿಸುವ ಭೌಗೋಳಿಕ ರಾಜಕೀಯ ಎಳೆ ಎಳೆಯಲ್ಲಿ ಮುಳ್ಳುಗಳ ಸಾಲೇ ತುಂಬಿದೆ. ಜಗತ್ತಿನ ಮುಂಚೂಣಿಯ ಭಾರತದ ನಾಯಕತ್ವ ಹೊಸ ಯುಗಕ್ಕೆ, ವಿನೂತನ ಶಾಂತಿ ಧಾಮಕ್ಕೆ ಅಡಿಗಲ್ಲು ಹಾಕಬೇಕಾಗಿದೆ.
ಇಂಡೋನೇಷ್ಯಾದ ಜೋಕೋ ವಿಡೋಡೋ ಅವರಿಂದ ಸಮಗ್ರ ಜಿ-20ರ ಅಧಿಕಾರ ಲಾಂಛನ ಪಡೆದು ಇದೇ ಡಿಸೆಂಬರ್ 1 ರಿಂದ ಹೊಸ ಜಾಗತಿಕ ಮಟ್ಟದ ಗದ್ದುಗೆ ಏರಿದ ಹಿರಿಮೆ ಇದೀಗ ನಮ್ಮ ಭಾರತಕ್ಕೆ. ಅದರ ಪ್ರತಿನಿಧಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆ ಹಾಗೂ ಕಾರ್ಯಕ್ಷಮತೆಗೆ ಜಗದಗಲದ ನೆಲ, ಜಲ, ಬಾನು ತೆರೆದು ಕೊಂಡಿದೆ. ಕೇವಲ ಒಂದು ವರ್ಷದಲ್ಲಿ ನಮ್ಮಿ ವಿಶಾಲ ಭೂಗೋಲದ ಗತಿ-ಸ್ಥಿತಿಯಲ್ಲಿ ಹೊಸ ಮನ್ವಂತರದ ಕದ ತೆರೆದು ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯದ ಉದ್ಘೋಷಣೆಯಲ್ಲಿ ವಿಶ್ವಕುಟುಂಬದ ಮುನ್ನಡೆಗೆ ಭಾರತದ ನೇತಾರಿಕೆ ದೊರೆತಿದೆ. ವಿಶ್ವಗುರುವಿನ ಪಟ್ಟ ಇಂದಲ್ಲ ನಾಳೆ ಈ ನಾಡಿನ ಕೀರ್ತಿ ಮುಕುಟ ವಾಗಿ ಬಂದೇ ಬರುತ್ತದೆ ಎಂದು ಸಾರುತ್ತಲೇ ಬಂದ ದೃಷ್ಠಾರದ ನುಡಿಗೆ ಸಂಜೀವಿನಿ ದೊರೆತಿದೆ.
ಜಿ-20 ರಾಷ್ಟ್ರಗಳ ಒಕ್ಕೂಟದೊಳಗೇ ಈ ನಮ್ಮ ಭೂಗೋಲದದ 60 ಪ್ರತಿಶತ ನೆಲ ತುಂಬಿ ನಿಂತಿದೆ; ಜಗತ್ತಿನ ಮೂರನೇ ಎರಡಂಶದಷ್ಟು ಜನಸಮೂಹ, ನಾಲ್ಕನೇ ಮೂರರಷ್ಟು ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟು ಹಾಗೂ ಶೇ.85 ಜಿ.ಡಿ.ಪಿ.ಯನ್ನು ಉದರದಲ್ಲಿರಿಸಿದ ಅಗಾಧ ದೃಷ್ಟಿಯ-ಸೃಷ್ಟಿಯಿದು, 1998ರಲ್ಲಿ ಜಿ-7 ಮುಂದೆ ಜಿ-8 ಎಂದು ಶುಭಾ ರಂಭ ಗೊಂಡ ಈ ಅಂತರಾಷ್ಟ್ರೀಯ ಸಂಸ್ಥೆ 2008ರ ಬಳಿಕ ಬೃಹತ್ ಸಂಸ್ಥೆಯಾಗಿ ಹೊಸರೂಪದಲ್ಲಿ ಬೆಳೆದು ನಿಂತಿದೆ.
ಈ ಸಂಸ್ಥೆಯಲ್ಲಿ ಕೈ ಜೊಡಿಸಿದ ಸದಸ್ಯ ರಾಷ್ಟ್ರಗಳಿವು- ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನ, ಫ್ರಾನ್ಸ್, ಜರ್ಮನ್, ಭಾರತ, ಇಂಡೋನೇಶ್ಯಾ, ಇಟಲಿ, ಜಪಾನ್, ಕೊರಿಯಾ ಗಣರಾಜ್ಯ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್ ಡಮ್, ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಯುರೋಪಿಯನ್ ಯೂನಿಯನ್. ಖಾಯಂ ಆಹ್ವಾ ನಿತರಾಗಿ ವಿಶ್ವಸಂಸ್ಥೆ, ಜಾಗತಿಕ ಬ್ಯಾಂಕ್ (World Bank), ಆಫ್ರಿಕನ್ ಯೂನಿ ಯನ್ ಏಶಿ ಯಾನ್ (Association of Southeast Asian Nations) ಹೊಂದಿದ ವಿಶಾಲ ತಳಹದಿಯ ಸಂಸ್ಥೆಯಿದು.
ನರೇಂದ್ರ ಮೋದಿ ಒರ್ವ “ಚತುರ ಕಾರ್ಯಕ್ರಮ ಸಂಘಟಕ (Event Manager)’ ಎಂಬುದಾಗಿ ಒಮ್ಮೆ ಲಾಲ್‌ಕೃಷ್ಣ ಆಡ್ವಾಣಿಯವರು ಉದ್ಗರಿಸಿದ್ದರು. ಇದೀಗ ವಿಶ್ವ ರಂಗದ ನೂತನ ದ್ವಾರ ಇವರಿಗೆ ಅರ್ಥಾತ್ ನಮ್ಮದೇ ರಾಷ್ಟ್ರದ ಪ್ರತಿನಿಧಿಗೆ ದೊರಕಿದೆ. ಇದರ ಬಗೆಗಿನ ಆಶಯವನ್ನು ಮೋದಿ ಯವರು ತಮ್ಮ 95ರ ಮನ್ ಕೀ ಬಾತ್‌ನಲ್ಲಿಯೂ ಹೂರಣವಾಗಿಸಿದ್ದಾರೆ. ಆಜಾದೀ ಕಾ ಅಮೃತ ವರ್ಷದ ಮುಕ್ತಾಯದಲ್ಲೇ ಹೊಸ ಪಟ್ಟ ನಮ್ಮ ಪಾಲಿಗೆ ದೊರಕಿದುದು ಅಮೋಘ, ಅಪೂರ್ವ ಎಂಬ ವಿಚಾರ ವನ್ನು ಪ್ರಧಾನಿ ಬಿತ್ತರಿಸಿದ್ದಾರೆ. ಭಾರತದ ಸಂವಿಧಾನದ 4ನೇ ವಿಭಾಗದಲ್ಲಿ ರುವ 51ನೇ ವಿಧಿ ಭಾರತ ವಿಶ್ವಶಾಂತಿಗೆ ಯತ್ನಿಸಲಿ; ಅಂತಾರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ಪರಸ್ಪರ ರಾಜಿ ಪಂಚಾ ಯತಿಕೆ ಹಾಗೂ ಮಧ್ಯಸ್ಥಿಕೆಯ (Arbit-ration)ಮೂಲಕ ಪರಿಹರಿಸುವಲ್ಲಿ ಯತ್ನಿಸಲಿ; ಯುದ್ಧ ವಿರಹಿತ ಜಾಗತಿಕ ವ್ಯವಸ್ಥೆಗೆ ಪೂರಕ ವಾಗಿ ಸ್ಪಂದಿಸಲಿ ಎಂಬ ನಿರ್ದೇಶನವನ್ನು ತುಂಬಿ ನಿಂತಿದೆ.
ಈ ಸುಂದರ ಶಾಂತಿ ಫಲಕವನ್ನು ವಿಶ್ವ ಕುಟುಂಬ ದಲ್ಲಿ ಪ್ರದರ್ಶಿಸಲು, ಪ್ರಾತ್ಯಕ್ಷಿಕತೆಗೆ ತರಲು 2023ರ ಸುವರ್ಣಾವಕಾಶ ನಮ್ಮದಾಗಿದೆ. ಈ ಅಧಿಕಾರ ದಂಡವನ್ನು ಬ್ರೆಜಿಲ್‌ಗೆ ಹಸ್ತಾಂತ ರಿಸುವ ಮೊದಲು ನೂತನ ವಿಶ್ವವ್ಯವಸ್ಥೆಗೆ ಶಾಂತಿಯು ಅಡಿಗಲ್ಲು ಹಾಕುವ ಅವಕಾಶ ಹಾಗೂ ಜವಾಬ್ದಾರಿ ನಮಗೊದಗಿದೆ.
1945ರ ದ್ವಿತೀಯ ಮಹಾಸಮರದಿಂದ ಇದೀಗ 2022ರ ವರೆಗಿನ ಕಾಲಘಟ್ಟದಲ್ಲಿ ಪ್ರಪಂಚದ ಎಲ್ಲ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ; ಅರ್ಥಾತ್ ಕಾಲಚಕ್ರದ ಪರಿಭ್ರಮಣೆ ಸಾಕಷ್ಟು ಘಟಿಸಿದೆ. ವಿಶ್ವಕುಟುಂಬದ ಕಳೆದ ನಿನ್ನೆಗಳ ರಾಜ ಕೀಯ ಇಂದಿನ ಇತಿಹಾಸ; ಇಂದಿನ ರಾಜ ಕೀಯ ಮುಂದಿನ ಜಾಗತಿಕ ಚರಿತ್ರೆ. ದ್ವಿತೀಯ ಜಾಗತಿಕ ಸಮ ರೋತ್ತರದಲ್ಲಿ ಒಂದೆಡೆ ವಸಾಹತು ಶಾಹಿತ್ವ (Colonialism) ) ಹಾಗೂ ಸಾಮ್ರಾಜ್ಯ ಶಾಹಿತ್ವ (Imperialism) ಗಳಿಗೆ ಗೋರಿ ನಿರ್ಮಿಸಲಾಯಿತು. ಏಷ್ಯಾ ಹಾಗೂ ಆಫ್ರಿಕಾದ ಎಲ್ಲ ರಾಷ್ಟ್ರಗಳು, ಭಾರತವೂ ಸಹಿತ ಸ್ವತಂತ್ರ ಧ್ವಜಗಳನ್ನು ಬಾನಂಗಳದಲ್ಲಿ ಏರಿಸಿದವು. ಅದರ ಜತೆಜತೆಗೇ ಹುಟ್ಟಿಗೊಂಡ ಜಾಗತಿಕ ಧ್ರುವೀಕರಣ (Bipolar World)- ಅಮೆರಿಕದ ಪ್ರಜಾತಂತ್ರ ಬಣ, ಸೋವಿ ಯತ್ ರಷ್ಯಾದ ಕಮ್ಯುನಿಸ್ಟ್ ಬಣ, ಗೋರ್ಬಚೇವ್‌ರವರ ಕಾಲದ ಸೋವಿಯತ್ ಒಕ್ಕೂಟದ ಪತನದ ಜತೆಗೆ ಸಪ್ತ ಸಮುದ್ರಗಳಲ್ಲಿ ಮುಳುಗಿ ಹೋಯಿತು. ಒಂದು ಕಾಲದ ಸೂರ್ಯ ಮುಳುಗದ ಸಾಮ್ರಾಜ್ಯದಂತೆ ಕಮ್ಯುನಿಸ್ಟ್ ಶಾಹಿತ್ವದ ಪತನದ ರೀತಿ, ಅಮೆರಿಕದ ಏಕಸ್ವಾಮ್ಯತ್ವದ ತಣ್ತೀವೂ ಆ ಬಳಿಕದ ಜಗತ್ತಿನ ಮಾರು ಕಟ್ಟೆಯಲ್ಲಿ ಚಲಾವಣೆಗೆ ಬರು ವಂತಾಗಲೇ ಇಲ್ಲ ಇದರೊಂದಿಗೆ ಆಲಿಪ್ತ ನೀತಿ (Non- Alig-ned Policy) ಯಂತಹ ಸಿದ್ಧಾಂತಗಳಿಗೂ ಕೊಳ್ಳು ವವರಿಲ್ಲದಾಯಿತು!
ಹೀಗೆ ವಿಶ್ವ ಪಥವನ್ನು ಸೂಕ್ಷ್ಮ ವಾಗಿ ಅವಲೋಕಿಸಿದರೆ ಸೌರವ್ಯೂಹದ ಅಂತರಿ ಕ್ಷದಲ್ಲಿ ನಮ್ಮ ಭೂಮಿ ಮಾತ್ರ ತನ್ನ ಕಕ್ಷೆಯಲ್ಲೇ ಸುತ್ತಿದಂತೆ ವಿಶ್ವ ವ್ಯವಹಾರ, ರಾಜಕೀಯ ತನ್ನದೇ ನಿಶ್ಚಿತ ಪಥ ಕ್ರಮಿಸಲೇ ಇಲ್ಲ. ಹಳೆಯ ಜಗತ್ತಿನ ಉದರದಿಂದ ಹೊಸ ಜಗತ್ತು ಆವಿರ್ಭವಿಸುತ್ತಲೇ ಇದೆ.
ವಿಶ್ವಶಾಂತಿ, ಜಾಗತಿಕ ಏಕತೆ, ಅಂತಾರಾಷ್ಟ್ರೀಯ ಸಮಾನತೆ, ವಿಶ್ವ ಆಹಾರ, ಆರೋಗ್ಯ, ಶಿಕ್ಷಣ ಸಮಸ್ಯೆ ಗಳು, ಉತ್ತಮ ವ್ಯಾಪಾರ ಸಂಬಂಧ, ಪರಸ್ಪರ ತಾಂತ್ರಿಕ ಹಾಗೂ ಔದ್ಯೋಗಿಕ ಸಹಕಾರ, ವಿಶ್ವ ಪಾರಂಪರಿಕ ಸಂರಕ್ಷಣೆ, ಪರಿಸರ ಸಂರಕ್ಷಣೆ, ನೆಲ, ಜಲ, ವಾಯು ಮಾಲಿನ್ಯತೆಯ ನಿವಾರಣೆ- ಇವೆಲ್ಲ ಕೇವಲ ಭಾಷಣ ಹಾಗೂ ಘೋಷಣೆಯ ಸರಕುಗಳಲ್ಲ. ಬದಲಾಗಿ ಇದೀಗ ಭಾರತದ ನೇತಾರಿಕೆಗೆ ಸಂವಾದಿಯಾಗಬೇಕಿದೆ; ಅಂತೆಯೇ ಸವಾಲುಗಳ ಸರಮಾಲೆಯೂ ಹೌದು. ವಿಶ್ವ ಕುಟುಂಬದ 195 ಸದಸ್ಯರ ಪೈಕಿ ಪ್ರತಿಯೊಂದು ಸದಸ್ಯ ಕೂಡ ಅರ್ಥಾತ್ ದೇಶ ಸಂಪೂರ್ಣ ಪ್ರಭುತ್ವ ಸಂಪನ್ನ (Sovereignty)ಹೊಂದಿದೆ.
ಈ ಕುಟುಂಬದ ಮೂಲ ಸಮಸ್ಯೆಯೇ ಇದು. ಉದಾಹರಣೆಗೆ ಬಾಹ್ಯವಾಗಿ ಎಷ್ಟೇ ಒತ್ತಡ ಹಾಕಿದರೂ ರಷ್ಯಾ- ಉಕ್ರೇನ್ ಸಮರದ ಪರಿಸಮಾಪ್ತಿಗೆ ಈ ಎರಡು ದೇಶಗಳೇ ಒಪ್ಪಿಗೆಯ ಮೊಹರು ಒತ್ತಬೇಕು. ಉತ್ತರಕೊರಿಯಾದ ಕಿಮ್-ಸಾಂಗ್-ಉನ್‌ನ ಯುದ್ಧ ದಾಹಕ್ಕಾಗಲಿ, ಚೀನದ ಕ್ಸಿ ಜಿನ್‌ಪಿಂಗ್ ಗಾಗಲೀ ಆದೇಶ ನೀಡುವ ಅಧಿಕಾರ ಯಾರಿಗೂ ಇಲ್ಲ. ಮಾತ್ರವಲ್ಲ, ಅತೀ ಸೂಕ್ಷ್ಮ ವೆನಿಸುವ ಭೌಗೋಳಿಕ ರಾಜಕೀಯ ಎಳೆ ಎಳೆಯಲ್ಲಿ ಮುಳ್ಳುಗಳ ಸಾಲೇ ತುಂಬಿದೆ. ಇವುಗಳ ಮಧ್ಯೆಯಿಂದ ಗುಲಾಬಿ ಹೂಗಳನ್ನು ಅರಸಿ ವಿಶ್ವಮಾತೆಯ ಮಡಿಗೇರಿಸುವ ಕಾಯಕ ಸುಲಭ ಸಾಧ್ಯವೇನೂ ಅಲ್ಲ. ಈ ಮಧ್ಯೆ ಪ್ರತಿ ಯೊಂದು ರಾಷ್ಟ್ರಕ್ಕೂ ಅದರದೇ ಆದ ಹಿತಾ ಸಕ್ತಿಗಳೇ ಪಾರಮ್ಯ ಎನಿಸಿದೆ.
ರಾಜಕಿಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಇಲ್ಲ; ಶಾಶ್ವತ ಮಿತ್ರರೂ ಇಲ್ಲ; ಇರುವುದೊಂದೇ ಶಾಶ್ವತ ಹಿತಾಸಕ್ತಿ ಗಳು ಎಂಬ ಕೌಟಿಲ್ಯ ಹಾಗೂ ಮೆಕಿಯವೆಲ್ಲಿಯ ಸಾರ್ವ ಕಾಲಿಕ ಸತ್ಯ ಎನಿಸುವ ನುಡಿಗಳು ಪ್ರಸಕ್ತ ವಿಶ್ವಕು ಟುಂಬಕ್ಕೂ ಅನ್ವಯಿಸುವಂತಹದು. ಅದರಲ್ಲಿಯೂ ಅಣು ಬಾಂಬಿನ ಯುಗದಲ್ಲಿ ಹೆಜ್ಜೆಯಿರಿಸುವಲ್ಲಿ, ಜಗತ್ತಿನ ಮುಂಚೂ ಣಿಯ ಭಾರತದ ನಾಯಕತ್ವ ಹೊಸ ಯುಗಕ್ಕೆ, ವಿನೂತನ ಶಾಂತಿ ಧಾಮಕ್ಕೆ ಅಡಿಗಲ್ಲು ಹಾಕಬೇಕಾಗಿದೆ. ನಿಜಕ್ಕೂ ಜಾಗತಿಕ ರಾಜಕೀಯ ಒಂದು ಚದುರಂಗದಾಟದಂತೆ; ಹಾಗೂ ಕೆಲವೊಮ್ಮೆ ರಕ್ತರಂಜಿತ ಸಮರದಂತೆ. ಎಲ್ಲದರ ಮಧ್ಯೆ, ಕೇವಲ ಕೈ ಕುಲುಕಿ, ಕೃತಕ ಮುಗುಳುನಗೆ ಬೀರಿ, ಒಂದಿನಿತು ಆದರ್ಶದ ಬಿತ್ತನೆಯೊಂದಿಗೆ ಶಾಂತಿ ಫಲ ಬಯಸುವ ವಿಶ್ವ ಕುಟುಂಬ ನಮ್ಮದಾಗ ಬಾರದು. ಬದಲಾಗಿ, ವಿಶ್ವಶಾಂತಿಯ, ಸಹಕಾರದ ಅಂತೆಯೇ ಸಹಬಾಳ್ವೆಯ ಶಾಂತ ಸಾಗರ ಪಯ ಣದ ನೌಕೆಯ ಕ್ಯಾಪ್ಟನ್ ಆಗಿ ನಮ್ಮ ಭಾರತ ಮುಂದೆ ಸರಿಯಲಿ ಎಂಬ ಸದಾಶಯ ನಮ್ಮದು.
ಡಾ| ಪಿ.ಅನಂತಕೃಷ್ಣ ಭಟ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.