ಮಹಿಳೆ ತಂಟೆಗೆ ಹೋದರೆ ಶಾಕ್ ಹೊಡೆಸುತ್ತೆ ಚಪ್ಪಲಿ!
ಟ್ರ್ಯಾಕ್ ಮಾಡಲು ಪೊಲೀಸರಿಗೆ ನೆರವಾಗುವಂತೆ ತಂತ್ರಜ್ಞಾನ ರೂಪಿಸಲಾಗಿದೆ
Team Udayavani, Dec 15, 2022, 10:25 AM IST
ಕಲಬುರಗಿ: ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರ, ಕೊಲೆಯಂತಹ ದಾಳಿಗಳನ್ನು ಆರಂಭಿಕವಾಗಿ ಹತ್ತಿಕ್ಕುವ ಅಥವಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ನಗರದ ಬಾಲಕಿಯೊಬ್ಬಳು ವಿಶೇಷ ಸಾಧನ ಕಂಡುಹಿಡಿದಿದ್ದಾಳೆ.
ನಗರದ ಎಸ್.ಆರ್.ಎನ್. ಮೆಹತಾ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿಜಯಲಕ್ಷ್ಮೀ ಬಿರಾದಾರ ತಯಾರು ಮಾಡಿರುವ ಸಾಧನ ಈಗ ರಾಜ್ಯ- ದೇಶವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಾರಂಭಿಸಿದೆ. ವಿದೇಶದಲ್ಲಿ ಈ ಸಾಧನ ಪ್ರಸ್ತುತಪಡಿಸಲು ಆಹ್ವಾನವೂ ಬಂದಿದೆ. 2023ರ ಜನವರಿಯಲ್ಲಿ ನಡೆಯುವ ಸೈನ್ಸ್ ಫೇರ್‌ನಲ್ಲಿ ಪ್ರದರ್ಶನವಾಗಲಿದೆ.
ಏನಿದು ಸಾಧನ ಸದ್ಯ ಭಾರತ ಸೇರಿದಂತೆ ಜಗತ್ತಿನ ಮಹಿಳೆಯರನ್ನು ಕಾಡುವ ಬೀದಿ ಕಾಮಣ್ಣರಿಗೆ ಶಿಕ್ಷೆ ನೀಡುವ ಸಾಧನ ಇದಾಗಿದೆ. ಮಹಿಳೆ ತನ್ನ ಮೇಲಾಗುವ ದಾಳಿಯಿಂದ ತಪ್ಪಿಸಿಕೊಳ್ಳಲು ಸಿದ್ಧಪಡಿಸಿದ ಸಾಧನವೂ ಆಗಿದೆ. ಇದು ಎಲೆಕ್ಟ್ರಾನಿಕ್ಸ್ ಸಾಧನ ಬಳಸಿಕೊಂಡು ಮಾಡಿರುವ ಚಪ್ಪಲಿ ಅಥವಾ ಪಾದರಕ್ಷೆ. ಇದರ ವೈಜ್ಞಾನಿಕ ಹೆಸರು ಆ್ಯಂಟಿ ರೇಪ್ ಫುಟ್‌ವೇರ್.
ಇದನ್ನು ಬ್ಲಿಂಕ್ ಆಪ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಈ ಚಪ್ಪಲಿ ಕೆಳಭಾಗದಲ್ಲಿ ಬ್ಯಾಟರಿ ಚಾಲಿತ 0.5ರಷ್ಟು ಆ್ಯಂಪಿಯರ್‌ನಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ. ಮಷಿನ್ ನಡೆಯುವಾಗಲೇ ಬ್ಯಾಟರಿ ಚಾರ್ಜ್ ಆಗುತ್ತದೆ.
ಸಂಕಷ್ಟದಲ್ಲಿರುವ ಮಹಿಳೆ ಹೆಬ್ಬೆರಳ ಬಳಿ ಬಟನ್ ಒತ್ತಿದರೆ ಸಾಕು, ಪೊಲೀಸರಿಗೆ ಮತ್ತು ಕುಟುಂಬದವರಿಗೆ ಎಚ್ಚರಿಕೆ ಸಂದೇಶ ಹೋಗುವಂತಹ ವ್ಯವಸ್ಥೆ ರೂಪಿಸಲಾಗಿದೆ. ಚಿಪ್ ಇದ್ದು, ಅಪ್ಲಿಕೇಶನ್‌ನಲ್ಲಿ ಯಾರ ನಂಬರ್ ದಾಖಲಿಸಿರುತ್ತೇವೆಯೋ ಆ ನಂಬರ್‌ಗೆ ಸಹಾಯದ ಸಂದೇಶ ಹೋಗುತ್ತದೆ. ಇದರಿಂದ ಸಂಕಷ್ಟಕ್ಕೊಳಗಾದವರು ಎಲ್ಲಿದ್ದಾರೆ ಎಂಬುದನ್ನು ಟ್ರ್ಯಾಕ್ ಮಾಡಲು ಪೊಲೀಸರಿಗೆ ನೆರವಾಗುವಂತೆ ತಂತ್ರಜ್ಞಾನ ರೂಪಿಸಲಾಗಿದೆ.
ಬಾಲಕಿ ಕಂಡುಹಿಡಿದ ವಿಶೇಷ ಸಾಧನ; ಏನಿದು ಐಡಿಯಾ?
ಈ ಸಾಧನ ಮಹಿಳೆಯರ ಮೇಲೆ ಯಾರಾದರೂ ದಾಳಿ ಮಾಡಿದರೆ ವಿರೋಧಿಸಲು ಅನುಕೂಲವಾಗುತ್ತದೆ. ಹೆಬ್ಬೆರಳಿನಿಂದಲೇ ಆಪರೇಟ್ ಮಾಡಬಹುದು. ಹೆಬ್ಬೆರಳಿನಿಂದ ಮುಂಭಾಗದಲ್ಲಿ ಒತ್ತಿದರೆ ಚಪ್ಪಲಿಯ ಹಿಮ್ಮಡಿಯಲ್ಲಿರುವ ಬ್ಯಾಟರಿ ಶುರುವಾಗುತ್ತದೆ. ಇದರ ಮುಖಾಂತರ ಮುಂಭಾಗದ ತುದಿಯಲ್ಲಿ ಅಳವಡಿಸಿರುವ ಸಾಧನದಲ್ಲಿ ವಿದ್ಯುತ್ ಪ್ರವಹಿಸಿ ಅದು ಎದುರಿನ ವ್ಯಕ್ತಿಗೆ ಶಾಕ್ ಹೊಡೆಸುತ್ತದೆ. ಇದರಿಂದ ಸಂಭಾವ್ಯ ಆಪತ್ತಿನಿಂದ ಮಹಿಳೆ ಪಾರಾಗಬಹುದು. ಶಿಕ್ಷಕರ ಮಾರ್ಗದರ್ಶನ ಪಡೆದು ಈ ಪಾದರಕ್ಷೆ ರೂಪಿಸಿದ್ದೇನೆ ಎನ್ನುತ್ತಾಳೆ ವಿಜಯಲಕ್ಷ್ಮೀ ಬಿರಾದಾರ.
ಚಾರ್ಜೆಬಲ್ ಬ್ಯಾಟರಿ
ಫಿಜೋ ಎಲೆಕ್ಟ್ರಿಕ್‌ಎಫೆಕ್ಸ್‌ಟ್ ತಣ್ತೀದಡಿ ಈ ಚಪ್ಪಲಿಗಳನ್ನು ನಿರ್ಮಿಸಲಾಗಿದೆ. ಇದು ವ್ಯಕ್ತಿ ನಡೆಯುತ್ತಿರುವಾಗಲೇ ಚಾರ್ಜ್ ಆಗುತ್ತದೆ. ಈ ಶಕ್ತಿ ಚಾರ್ಜೆಬಲ್ ಬ್ಯಾಟರಿಯಲ್ಲಿ ಸಂಗ್ರಹವಾಗಿರುತ್ತದೆ. ವ್ಯಕ್ತಿ ನಿಮ್ಮ ಮೇಲೆ ದಾಳಿ ಮಾಡಿದಾಗ ಹೆಬ್ಬೆರಳನ್ನು ಒತ್ತಿದಾಗ ಸಾಧನ ಆರಂಭವಾಗುತ್ತದೆ. ವಿದ್ಯುತ್ ಪ್ರವಹಿಸಿ ದಾಳಿ ಮಾಡಿದ ವ್ಯಕ್ತಿಗೆ ಶಾಕ್ ತಗಲುತ್ತದೆ. ಇದರಿಂದ ವ್ಯಕ್ತಿಯನ್ನು ಹಿಮ್ಮೆಟ್ಟಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.